ADVERTISEMENT

ಯಾದಗಿರಿ | ಕಲುಷಿತ ನೀರು ಸೇವನೆ: 9 ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 13:46 IST
Last Updated 29 ಜೂನ್ 2023, 13:46 IST
ನಾರಾಯಣಪುರ ಸಮೀಪದ ಮಾರನಾಳ ತಾಂಡಾದಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೊಡೇಕಲ್ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪವನರಾವ್ ಮತ್ತು ಸಿಬ್ಬಂದಿ ತಾಂಡಾಕ್ಕೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು.
ನಾರಾಯಣಪುರ ಸಮೀಪದ ಮಾರನಾಳ ತಾಂಡಾದಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೊಡೇಕಲ್ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪವನರಾವ್ ಮತ್ತು ಸಿಬ್ಬಂದಿ ತಾಂಡಾಕ್ಕೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು.    

ನಾರಾಯಣಪುರ: ಸಮೀಪದ ಮಾರನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಾಳ ತಾಂಡಾದಲ್ಲಿ ಕೊಳವೆಬಾವಿ ನೀರು ಕುಡಿದ 9 ಜನ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.

ತಾಂಡಾದಲ್ಲಿ ಎರಡು ಕೊಳವೆಬಾವಿಗಳಿವೆ. ಜನ ದಿನಾಲೂ ಬಳಸುತ್ತಿದ್ದ ಒಂದು ಕೊಳವೆಬಾವಿ ಮೂರು ದಿನಗಳ ಹಿಂದೆ ದುರಸ್ತಿಗೆ ಬಂದಿತ್ತು. ಇನ್ನೊಂದು ಕೊಳವೆಬಾವಿಯ ನೀರು ಕುಡಿದ 4 ಜನರಲ್ಲಿ ಸೋಮವಾರ ಆರೋಗ್ಯ ಸಮಸ್ಯೆ ಕಂಡುಬಂದಿದೆ. ಕೂಡಲೇ ಎಲ್ಲರನ್ನೂ ಕೊಡೇಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಕೊಡೇಕಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಪವನರಾವ್ ಮಾಹಿತಿ ನೀಡಿದರು. 

ಮಂಗಳವಾರ, ಬುಧವಾರ ಮತ್ತೆ 5 ಜನರಲ್ಲಿ ವಾಂತಿ ಭೇದಿ ಕಂಡು ಬಂದಿದ್ದು, ಅವರಿಗೂ ಚಿಕಿತ್ಸೆ ಕೊಡಿಸಿ ತಾಂಡಾಕ್ಕೆ ಕಳುಹಿಸಿಕೊಡಲಾಗಿದೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ. ನಿತ್ಯವೂ ಬಳಸುವ ಕೊಳವೆಬಾವಿಯನ್ನು ಗ್ರಾಮ ಪಂಚಾಯಿತಿ ದುರಸ್ತಿ ಮಾಡಿಸಿದೆ ಎಂದೂ ಅವರು ತಿಳಿಸಿದರು.

ADVERTISEMENT

ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸು ನಾಲತವಾಡ, ನೀಲಮ್ಮ ಗಸ್ತಿ, ಇಸ್ಮಾಯಿಲ್, ಆಶಾ ಕಾರ್ಯ‌ಕರ್ತೆ ಮಾನಮ್ಮ, ಸವಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.