ADVERTISEMENT

ಯಾದಗಿರಿ: ಗುಣಮಟ್ಟದ ರಸ್ತೆ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:49 IST
Last Updated 20 ಫೆಬ್ರುವರಿ 2026, 4:49 IST
ಗುರುಮಠಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮದಲ್ಲಿ ಮುಧೋಳ–ಯಲಗೇರಾ ಆಂಧ್ರ ಬಾರ್ಡ್‌ರವರೆಗೆ ₹4 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಅಡಿಗಲ್ಲು ಪೂಜೆ ನೆರವೇರಿಸಿದರು
ಗುರುಮಠಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮದಲ್ಲಿ ಮುಧೋಳ–ಯಲಗೇರಾ ಆಂಧ್ರ ಬಾರ್ಡ್‌ರವರೆಗೆ ₹4 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಅಡಿಗಲ್ಲು ಪೂಜೆ ನೆರವೇರಿಸಿದರು   

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಗುಣಮಟ್ಟದ ರಸ್ತೆಗಳ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಕೆಟ್ಟು ಹೋದ ರಸ್ತೆಗಳನ್ನು ಮರು ನಿರ್ಮಿಸಲಾಗುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಆದ್ಯತೆ ನೀಡಬೇಕು. ಅಧಿಕಾರಿಗಳು ಆಗಾಗ ಪರಿಶೀಲಿಸಬೇಕು. 6 ತಿಂಗಳ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸೂಚಿಸಿದರು.

ಗುರುಮಠಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮದಲ್ಲಿ ಮುಧೋಳ–ಯಲಗೇರಾ ಆಂಧ್ರ ಬಾರ್ಡ್‌ರವರೆಗೆ ₹4 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮತಕ್ಷೇತ್ರದ ಎಲ್ಲ ಸಮುದಾಯವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಸಿಸಿ ರಸ್ತೆ ಸೇರಿದಂತೆ ಗುಣಮಟ್ಟದ ರಸ್ತೆಗಳ ಸುಧಾರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ಹಳ್ಳಿಗಳ ಪ್ರಗತಿ ಸಾಧ್ಯವಿದ್ದು, ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಪಕ್ಕಾ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ರಸ್ತೆ ಸುಧಾರಣೆ ಕಾರ್ಯ ನಡೆಯುವಾಗ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಡಬ್ಲ್ಯೂಡಿ ಎಇಇ ಪರಶುರಾಮ ಮುಷ್ಟೂಕರ್, ತಾಪಂ ಇಒ ಅಮರೇಶ ಪಾಟೀಲ, ಅಮರನಾಥರಡ್ಡಿ ವಂಕಸಂಬ್ರ, ಬನ್ನಪ್ಪಗೌಡ ವಂಕಸಂಬ್ರ, ಶಂಕ್ರಪ್ಪ ಕಾಳಗಿ, ಶರಣಗೌಡ, ಸಾಯಪ್ಪ, ಗೋಪಾಲ, ಶಿವರಾಜ, ಜಾನಪ್ಪ, ಶಂಕರರಡ್ಡಿ ಯಲಸತ್ತಿ, ವೀರೇಂದ್ರರಡ್ಡಿ ಯಲಸತ್ತಿ, ರಾಘವೇಂದ್ರ ರಡ್ಡಿ ವಡವಟ್, ಆನಂದ ವಡವಟ್, ಗುರುನಾಥರಡ್ಡಿ, ಮಲ್ಲಿಕಾರ್ಜುನ ಅರುಣಿ, ನರಸಪ್ಪ ಕವಡೆ, ಪರ್ವತರಡ್ಡಿ ಕಾಳಬೆಳಗುಂದಿ, ರಾಘವೇಂದ್ರ ಜೈಗ್ರಾಮ, ಭೀಮರಾಯ ಗುಡ್ಲಗುಂಟಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.