ADVERTISEMENT

‘ಯೋಗ, ಧ್ಯಾನದಿಂದ ಋಷಿಗಳಗೆ ದೀರ್ಘಾಯುಷ್ಯ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:11 IST
Last Updated 21 ಜೂನ್ 2025, 14:11 IST
ಯಾದಗಿರಿ ನಗರದ ಸ್ವಪ್ನಾ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚಾಲನೆ ನೀಡಿದರು.
ಯಾದಗಿರಿ ನಗರದ ಸ್ವಪ್ನಾ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚಾಲನೆ ನೀಡಿದರು.   

ಯಾದಗಿರಿ: ‘ಹಿಂದಿನ ಕಾಲದಲ್ಲಿ ಋಷಿಗಳು ದೀರ್ಘಾಯುಷಿಗಳಾಗಿರಲು ಯೋಗ, ವ್ಯಾಯಾಮ, ಧ್ಯಾನಗಳನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ನಿತ್ಯವೂ ನಿಯಮಿತ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯವನ್ನೂ ಹೊಂದಿದ್ದರು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ನಗರದ ಸ್ವಪ್ನಾ ಮೈದಾನದಲ್ಲಿ ಶನಿವಾರ ಜಿ.ಪಂ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಹಯೋಗದಲ್ಲಿ ಯೋಜಿಸಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ಯೋಗಾಭ್ಯಾಸದಿಂದಲೇ ಹಲವು ರೋಗಗಳನ್ನು ಗುಣಪಡಿಸಿಕೊಳ್ಳುವ ಕಾಲವಿತ್ತು. ಆದರೆ, ನಂತರದಲ್ಲಿ ಇಂಗ್ಲಿಷ್ ಔಷಧಿಗಳ ಪ್ರಭಾವದಿಂದ ದೇಸಿ ಪದ್ಧತಿ ಮೇಲಿನ ಕಾಳಜಿ ಕಡಿಮೆಯಾಯಿತು. ಇತ್ತೀಚೆಗೆ ಮತ್ತೆ ಯೋಗ ಸೇರಿದಂತೆ ದೈಹಿಕ ವ್ಯಾಯಾಮಗಳತ್ತ ಜನ ಮರಳುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಪ್ರತಿ ನಿತ್ಯ ಬೆಳಗ್ಗೆ ಯೋಗ ಮಾಡುವುದರಿಂದ ಒತ್ತಡ ಕಳೇದು, ಲವಲವಿಕೆಯಿಂದ ಕೆಲಸದಲ್ಲಿ ತೊಡಗಬಹುದು. ದುಶ್ಚಟಗಳಿಗೆ ದಾಸರಾಗದೆ ಆರೋಗ್ಯಕ್ಕೆ ಆಧ್ಯತೆ ನೀಡಬೇಕು, ಮೊಬೈಲ್ ಬಳಕೆ ಕಡಿಮೆ ಮಾಡಿ, ಶುದ್ಧ ಆಹಾರ ಸೇವನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಲಿ ಅವರು ಸಲಹೆ ನೀಡಿದರು.

ಜಿ.ಪಂ ಸಿಇಒ ಲವೀಶ ಒರಡಿಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ, ನಗರಸಭೆ ಆಯುಕ್ತ ಉಮೇಶ ಚವ್ಹಾಣ, ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಜೆ.ಗಾಳಿ, ಯೋಗಶಿಕ್ಷಕ ಸೋಮನಾಥರೆಡ್ಡಿ ಎಲ್ಹೇರಿ, ಡಿಡಿಪಿಯು ಪಂಡೀತರಾವ, ರೇಶ್ಮೆ ಇಲಾಖೆಯ ಸಂತೋಷ, ವೈದ್ಯಾಧಿಕಾರಿ ಡಾ.ಪ್ರಕಾಶ ರಾಜಾಪೂರೆ, ಬ್ರಹ್ಮಾಕುಮಾರಿ ವೀಣಾ ಅಕ್ಕಾ ಉಪಸ್ಥಿತರಿದ್ದರು.

ಯಾದಗಿರಿ ನಗರದ ಸ್ವಪ್ನಾ ಮೈದಾನದಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಾಭ್ಯಾಸ ನಿರತ ಗಣ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.