ADVERTISEMENT

ಗುರುಮಠಕಲ್: ಜಲಪಾತದಲ್ಲಿ ಯುವತಿ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:42 IST
Last Updated 4 ಅಕ್ಟೋಬರ್ 2021, 4:42 IST
ಐಶ್ವರ್ಯ ಶರಣು
ಐಶ್ವರ್ಯ ಶರಣು   

ಗುರುಮಠಕಲ್: ಇಲ್ಲಿನ ದಬ್ ದಬಿ ಜಲಪಾತದಲ್ಲಿ ಭಾನುವಾರ ಈಜಲು ಇಳಿದ ಯುವತಿನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರದ ನಿವಾಸಿ ಐಶ್ವರ್ಯಾ ಶರಣು (23) ಮೃತರು.

‘ಚಿತ್ತಾಪುರದಿಂದ ಐಶ್ವರ್ಯಾ ಅವರು ಕುಟುಂಬ ಮತ್ತು ನೆರೆಹೊರೆಯವರ ಜೊತೆ ಜಲಪಾತದ ವೀಕ್ಷಣೆಗೆ ಬಂದಿದ್ದರು. ಜಲಪಾತದಲ್ಲಿ ಈಜಲು ಇಳಿದಾಗ ನಾಲ್ವರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಧಾವಿಸಿ ಮೂವರನ್ನು ಕಾಪಾಡಿದ್ದಾರೆ. ಐಶ್ವರ್ಯಾ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಗುರುಮಠಕಲ್ ಸಿಪಿಐ ಖಾಜಾ ಹುಸೇನ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ನುರಿತ ಈಜುಪಟುಗಳ ನೆರವಿನಿಂದ ಯುವತಿಯ ಮೃತದೇಹ ಹೊರತೆಗೆಯಲಾಯಿತು. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಸಾವಿನ ಮನೆಯಾದ ಜಲಪಾತ: ಜಲಪಾತದ ಸೌಂದರ್ಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ದಬ್‌ ದಬೆಯು ಸಾವಿನ ಮನೆಯಾಗಿ ಮಾರ್ಪಟ್ಟಿದೆ. ಕಳೆದ ವರ್ಷದಿಂದ ಉತ್ತಮ ಮಳೆಯಾಗುತ್ತಿದ್ದು, ಜಲಪಾತದಲ್ಲಿ ನೀರಿನ ರಭಸ ಹೆಚ್ಚಳವಾಗಿದೆ.

‘ಕೆಳಭಾಗದಲ್ಲಿ ನೀರಿನ ಸೆಳೆತವೂ ಹೆಚ್ಚಿದ್ದು, ಈಜಲು ಇಳಿದವರಿಗೆ ಪ್ರಾಣಾಪಾಯ ಎದುರಿಸುತ್ತಿದ್ದಾರೆ. ತಾಲ್ಲೂಕು ಆಡಳಿತ ಎಚ್ಚರಿಕೆಯ ಫಲಕ ಅಳವಡಿಸಿಲ್ಲ. ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸುತ್ತಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.