ADVERTISEMENT

ಯುವ ಬ್ರಿಗೇಡ್‌ನಿಂದ ದೇಗುಲಗಳ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 7:44 IST
Last Updated 1 ಸೆಪ್ಟೆಂಬರ್ 2020, 7:44 IST
ಯಾದಗಿರಿಯ ಬೆಟ್ಟದ ಕೋಟೆಯ ಮೇಲಿನ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಜಿನ್ನಪ್ಪನ ಬೆಟ್ಟದ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿತ್ತು
ಯಾದಗಿರಿಯ ಬೆಟ್ಟದ ಕೋಟೆಯ ಮೇಲಿನ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಜಿನ್ನಪ್ಪನ ಬೆಟ್ಟದ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿತ್ತು   

ಯಾದಗಿರಿ:ನಗರದ ಬೆಟ್ಟದ ಕೋಟೆಯ ಮೇಲಿನ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಜಿನ್ನಪ್ಪನ ಬೆಟ್ಟದ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ನಗರದ ಹೊರವಲಯದಲ್ಲಿರುವ ಜಿನ್ನಪ್ಪನ ಬೆಟ್ಟ (ಜೈನ ಬಸದಿ)ಯನ್ನು ಮೊದಲ ಹಂತದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಂಡರು.

ವಿಭಾಗೀಯ ಸಹ ಸಂಚಾಲಕ ಸಂಗಮೇಶ ಕೆಂಭಾವಿ ಮಾತನಾಡಿ,2021ರ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ 75 ಮಾದರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದು, ಇದರ ಪೈಕಿ ಪ್ರಾಚೀನ ದೇವಸ್ಥಾನಗಳ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ.ಬ್ರಿಗೇಡ್‌ನ ಯುವಕರು ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ದೇವಸ್ಥಾನಗಳೆಲ್ಲವನ್ನು ಸ್ವಚ್ಛಗೊಳಿಸುವ ವಿಸ್ತೃತ ಯೋಜನೆ ಹಮ್ಮಿಕೊಂಡಿದ್ದಾರೆ. ಆಗಸ್ಟ್ ತಿಂಗಳಿನಿಂದ ಆರಂಭಗೊಂಡ ಅಭಿಯಾನ ಬರುವ ವರ್ಷದ ಆಗಸ್ಟ್ 15 ರವರೆಗೆ ಜಾರಿಯಲ್ಲಿರುತ್ತದೆ ಎಂದರು.

ADVERTISEMENT

ಯುವ ಬ್ರಿಗೇಡ್ ಸಂಪರ್ಕ ಪ್ರಮುಖ ವೆಂಕಟೇಶ ಕಲಬುರ್ಗಿ ಮಾತನಾಡಿದರು.ನಿತೀಶಕುಮಾರ ಜಕಾತಿ, ಸಿದ್ದಲಿಂಗರೆಡ್ಡಿ ನಾಯ್ಕಲ್, ನಿಖಿಲ್ ಪಾಟೀಲ, ವಿಠಲ್ ಕುಲಕಣಿ, ಡಾ.ನಾಗರಾಜ, ಡಾ.ಶಿವಕುಮಾರ, ರಘು ಕುಮಾರ ಖಾನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.