ಬೆಂಗಳೂರು: ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಪ್ರವೇಶ ಸಲುವಾಗಿ ನಡೆಸುವ ವಿಶೇಷ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು, ನ.14ರ ಸಂಜೆ 6ರವರೆಗೆ ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ.
ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಹಾಗೂ ಹೆಚ್ಚುವರಿ ಸೀಟುಗಳ ಲಭ್ಯತೆ ಕಾರಣಕ್ಕೆ ಮತ್ತಷ್ಟು ಸಮಯ ನೀಡಿದ್ದು, ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕೆಇಎ ಹೇಳಿದೆ.
ಸೀಟು ಹಂಚಿಕೆ ಫಲಿತಾಂಶ ನ. 15ರ ಸಂಜೆ 6ಕ್ಕೆ ಪ್ರಕಟಿಸಲಾಗುತ್ತದೆ. ನ.19ರೊಳಗೆ ಶುಲ್ಕ ಪಾವತಿಸಿ, ಕಾಲೇಜುಗಳಿಗೆ ಪ್ರವೇಶ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.