ADVERTISEMENT

4ನೇ ತರಗತಿ, SSLC ಪಾಸು: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 9:23 IST
Last Updated 3 ಮಾರ್ಚ್ 2020, 9:23 IST
   

ಬಾಗಲಕೋಟೆ:ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ 46 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು.

ಅಂಗನವಾಡಿ ಕಾರ್ಯಕರ್ತೆಯಾಗಲು ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯರಾಗಲು ಕನಿಷ್ಠ 4ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 06/03/2020 ಕೊನೆಯ ದಿನವಾಗಿರುತ್ತದೆ.

ADVERTISEMENT

ಹುದ್ದೆಗಳ ವಿವರ

1)ಅಂಗನವಾಡಿ ಕಾರ್ಯಕರ್ತೆ: 18

2) ಅಂಗನವಾಡಿಸಹಾಯಕಿ: 28

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು

1 ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿ (ಆನ್‌ಲೈನ್‌ )

2 ಜನನ ಪ್ರಮಾಣ ಪತ್ರ /ಜನ್ಮದಿನಾಂಕ ಇರುವ ಎಸ್ಎಸ್‌ಎಲ್‌ಸಿ ಅಂಕಪಟ್ಟಿ

3ತಹಶೀಲ್ದಾರರು /ಉಪತಹಶೀಲ್ದಾರರು ಪಡೆದ1 ವರ್ಷದೊಳಗಿನ ವಾಸಸ್ಥಳ ದೃಢೀಕರಣ

4 ಅಗತ್ಯ ಶೈಕ್ಷಣಿಕ ದಾಖಲೆ ಪತ್ರಗಳುನ್ನು ಲಗತ್ತಿಸಬೇಕು.

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವುದು.

ಅಧಿಸೂಚನೆ ಲಿಂಕ್‌:https://anganwadirecruit.kar.nic.in/docs/1392218135.pdf

ವೆಬ್‌ಸೈಟ್‌:https://anganwadirecruit.kar.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.