ಬೆಂಗಳೂರು: ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗದಲ್ಲಿ ಖಾಲಿ ಇರುವ61 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಹುದ್ದೆಗಳು ಗ್ರೂಪ್ ಎ ಶ್ರೇಣಿಯ ಹುದ್ದೆಗಳಾಗಿವೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹುದ್ದೆಗಳ ಸಂಖ್ಯೆ : 61
ಮೀಸಲಾತಿ: ಸಾಮಾನ್ಯ–11, ಪ.ಜಾತಿ–15, ಪ.ಪಂಗಡ–04, ಹಿಂದುಳಿದ ವರ್ಗ–31
ವಿದ್ಯಾರ್ಹತೆ:ಅಂಗೀಕೃತ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವಾ ಪಶು ವಿಶ್ವವಿದ್ಯಾಲಯದಿಂದಕನಿಷ್ಠ ಶೇ.50 ರಷ್ಟು ಅಂಕಗಳೊಂದಿಗೆ ಬಿ.ವಿ.ಎಸ್.ಸಿ ಅಥವಾ ಬಿ.ವಿ.ಎಸ್.ಸಿ ಮತ್ತು ಎ.ಹೆಚ್ ಪದವಿ ಹೊಂದಿರಬೇಕು ಹಾಗೂಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿಯಾಗಿರಬೇಕು. ಈ ಸಂಬಂಧದ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನಿಡಿರುವ ಅಧಿಸೂಚನೆ ಲಿಂಕ್ ನೋಡುವುದು.
ವೇತನ ಶ್ರೇಣಿ : ₹52,650 ರಿಂದ ₹ 97,100
ವಯಸ್ಸಿನ ಗರಿಷ್ಠ ಮಿತಿ
ಸಾಮಾನ್ಯ ಅಭ್ಯರ್ಥಿಗಳು: 35 ವರ್ಷಗಳು
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು: 38 ವರ್ಷಗಳು
ಎಸ್ಸಿ, ಎಸ್ಟಿ ಅಭ್ಯರ್ಥಿಗಳು: 40 ವರ್ಷಗಳು
ಅರ್ಜಿ ಶುಲ್ಕ
* ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು: ₹ 520
* ಪ.ಜಾತಿ, ಪ.ಪಂಗಡ ಅಭ್ಯರ್ಥಿಗಳು: ₹ 250
ಅರ್ಜಿ ಸಲ್ಲಿಕೆ ಮತ್ತು ನೇಮಕಾತಿ: ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ಹಾಗೂ ಮೀಸಲಾತಿಯನ್ನು ಪರಿಗಣಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು.ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಕೆ ಕಡೆ ದಿನಾಂಕ:29-02-2020
ಅಧಿಸೂಚನೆ ಲಿಂಕ್:https://bit.ly/3bbSzzG
ವೆಬ್ಸೈಟ್:http://www.ahvs.kar.nic.in/kn-home.asp
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.