ಭಾರತೀಯ ಸ್ಟೇಟ್ ಬ್ಯಾಂಕ್ ದೇಶದಾದ್ಯಂತವಿರುವ ತಮ್ಮ ಶಾಖೆಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್ (ಉದ್ಯೋಗ ತರಬೇತಿ) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಸೆಪ್ಟೆಂಬರ್ 21, 2023, ಅರ್ಜಿ ಸಲ್ಲಿಸಲು ಕೊನೆಯ ದಿನ. ಎಸ್‌ಬಿಐ ನ ಅಧಿಕೃತ ವೆಬ್‌ಸೈಟ್ https://bank.sbi/web/careers ಗೆ ಲಾಗ್ ಆನ್ ಆಗಿ ಅರ್ಜಿ ಸಲ್ಲಿಸಬೇಕು. ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು ಲಿಖಿತ ಧೃಢೀಕರಣ ಅಪ್ ಲೋಡ್ ಮಾಡಿ ಶುಲ್ಕ ಪಾವತಿಸಬೇಕು.
ಕೇಂದ್ರಾಡಳಿತ ಪ್ರದೇಶಗಳ ಸಹಿತ ಅನೇಕ ರಾಜ್ಯಗಳಲ್ಲಿ ಅಪ್ರೆಂಟಿಸ್‌ಷಿಪ್ ಹುದ್ದೆಗಳಿಗೆ ನೇಮಕಾತಿ ನಡೆಯಲಿಎ. ಒಟ್ಟು ಹುದ್ದೆಗಳ ಸಂಖ್ಯೆ 6160. ಈ ಪೈಕಿ ಕರ್ನಾಟಕದಲ್ಲಿ 175 ಹುದ್ದೆಗಳಿವೆ. ಅದರಲ್ಲಿ 71 ಸಾಮಾನ್ಯ ವರ್ಗ, ಎಸ್ಸಿ 28, ಎಸ್ಟಿ 12, ಒಬಿಸಿ 47 ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ 17 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಅಭ್ಯರ್ಥಿಗಳು ಒಂದು ರಾಜ್ಯದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿಯಲ್ಲಿ ಒಮ್ಮೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಇದು ಒಂದು ವರ್ಷದ ಉದ್ಯೋಗ ತರಬೇತಿಯಾಗಿದೆ. ಈ ಹಿನ್ನೆಲೆಯಲ್ಲಿ, ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು.
ಜಿಲ್ಲಾವಾರು ಹುದ್ದೆಗಳು: ಬಾಗಲಕೋಟ-6, ಬಳ್ಳಾರಿ-9, ಬೆಳಗಾವಿ-8, ಬೆಂಗಳೂರು ಗ್ರಾಮಾಂತರ-2, ಬೆಂಗಳೂರು Urban-3,ಬೀದರ್-8, ಚಾಮರಾಜ ನಗರ-7, ಚಿಕ್ಕಮಗಳೂರು-4, ಚಿಕ್ಕಬಳ್ಳಾಪುರ-5, ಚಿತ್ರದುರ್ಗ-3, ದಕ್ಷಿಣ ಕನ್ನಡ-6, ದಾವಣಗೆರೆ-6, ಧಾರವಾಡ-3,ಗದಗ-3 ,ಹಾಸನ-8, ಹಾವೇರಿ-4 ,ಕಲ್ಬುರ್ಗಿ-8, ಕೊಡಗು-1,ಕೋಲಾರ-4, ಕೊಪ್ಪಳ-6, ಮಂಡ್ಯ-10,ಮೈಸೂರು-8,ರಾಯಚೂರು-8, ರಾಮನಗರ-4,ಶಿವಮೊಗ್ಗ-6, ತುಮಕೂರು-18, ಉಡುಪಿ-3, ಉತ್ತರಕನ್ನಡ-5, ವಿಜಯಪುರ-4,ಯಾದಗಿರಿ-5
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ, ವಾಣಿಜ್ಯ ವಿಜ್ಞಾನ ಅಥವಾ ಇನ್ನಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ: ಕನಿಷ್ಠ 20 ವರ್ಷಗಳು, ಗರಿಷ್ಠ 28 ವರ್ಷಗಳು (01.08.2023). ಸರ್ಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ/ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ/ ಮತ್ತು ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ₹300 ಹಾಗೂ ಎಸ್ಸಿ /ಎಸ್ಟಿ /ವಿಶೇಷ ಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
ಪರೀಕ್ಷಾ ಕೇಂದ್ರಗಳು: ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಕಲಬುರಗಿ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ.
ಆಯ್ಕೆ ಹೇಗಿರಲಿದೆ?
ಆನ್‌ಲೈನ್ ನಲ್ಲಿ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಜನರಲ್ /ಫೈನಾನ್ಶಿಯಲ್ ಅವೇರ್ನೆಸ್, ಜನರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಹಾಗೂ ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್ ವಿಷಯಗಳಿಗೆ ತಲಾ 25 ಅಂಕಗಳಂತೆ 25 ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದನ್ನು ಬರೆಯಲು ಪ್ರತಿ ಪತ್ರಿಕೆಗೆ 15 ನಿಮಿಷಗಳಂತೆ ಒಟ್ಟಾರೆ 1 ಗಂಟೆಯ ಅವಧಿ ನೀಡಲಾಗುತ್ತದೆ.
ಕನ್ನಡದಲ್ಲಿ ಪರೀಕ್ಷೆ:
ಇಂಗ್ಲಿಷ್‌ನಲ್ಲಿ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಯಾವುದೇ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬಹುದು. ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು ತಪ್ಪು ಉತ್ತರಕ್ಕೆ 0.25 ರಷ್ಟು ಋಣಾತ್ಮಕ ಮೌಲ್ಯ ಮಾಪನದಂತೆ ಅಂಕದ ಕಡಿತ ಕೂಡ ಇರಲಿದೆ. ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯುತ್ತೇವೆಂದು ಸಲ್ಲಿಸುವ ಅರ್ಜಿಯಲ್ಲಿ ನಮೂದಿಸಬೇಕು(ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನ ಮರೆಯದಿರಿ). ಇದೇ ವರ್ಷದ ಅಕ್ಟೋಬರ್/ನವೆಂಬರ್ ತಿಂಗಳಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಯಲಿದೆ.
ಭಾಷಾವಾರು ನೇಮಕಾತಿ:
ರಾಜ್ಯದ ಪಾಲಿನ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿ ಓದುವುದು, ಬರೆಯುವ ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣರಾಗಿರಬೇಕು. ರಾಜ್ಯದಲ್ಲಿ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಕನ್ನಡ ಭಾಷಾ ಜ್ಞಾನದ ಪರೀಕ್ಷೆ ನಡೆಸಲಾಗುವುದು. ಆನ್‌ಲೈನ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಇದನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿಫಲರಾದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದಿಲ್ಲ. 10ನೇ ಅಥವಾ 12ನೇ ತರಗತಿಯ ಅಂಕಪಟ್ಟಿ/ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಪಡಿಸಿದ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿದ್ದರೆ ಭಾಷೆಯ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ ಈ ಕಾರಣದಿಂದ. ಅಭ್ಯರ್ಥಿಗಳನ್ನು ಸ್ಥಳೀಯ ಭಾಷೆಯ ನಿರರ್ಗಳತೆ ಆಧಾರದಲ್ಲಿ ಕೂಡ ನೇಮಕಾತಿ ನಡೆಸಲಾಗುತ್ತಿದೆ ಎಂದು ಎಸ್‌ಬಿಐ ತಿಳಿಸಿದೆ. ಹೆಚ್ಚಿನ ಮಾಹಿತಿಗೆ www.sbi.co.in ಜಾಲತಾಣಕ್ಕೆ ಭೇಟಿ ನೀಡಿ.
(ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.