ಬೆಂಗಳೂರು: ಬಳ್ಳಾರಿ ಜಿಲ್ಲಾ ಸತ್ರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಟೈಪಿಸ್ಟ್, ಆದೇಶ ಜಾರಿಕಾರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್ ನೋಡುವುದು.
ಹುದ್ದೆಗಳ ಸಂಖ್ಯೆ: 17
ಹುದ್ದೆಗಳ ವಿವರ
1)ಬೆರಳಚ್ಚುಗಾರರು: 06
2) ಬೆರಳಚ್ಚು ನಕಲುಗಾರರ: 09
3) ಆದೇಶ ಜಾರಿಕಾರರು: 02
*ಬೆರಳಚ್ಚುಗಾರರು
ವಿದ್ಯಾರ್ಹತೆ:ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಬೆರಳಚ್ಚು ಹಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಈ ವಿಷಯಗಳಲ್ಲಿ ಡಿಪ್ಲೋಮಾ ಪಡೆದಿರಬೇಕು.
ವೇತನ ಶ್ರೇಣಿ: ₹ 21,000 (ಮೂಲ ವೇತನ)–42,000 ಶ್ರೇಣಿಯಲ್ಲಿ ವೇತನ ನಿಡಲಾಗುವುದು.
*ಬೆರಳಚ್ಚು ನಕಲುಗಾರರು
ವಿದ್ಯಾರ್ಹತೆ:ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಬೆರಳಚ್ಚು ಹಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಈ ವಿಷಯಗಳಲ್ಲಿ ಡಿಪ್ಲೋಮಾ ಪಡೆದಿರಬೇಕು.
ವೇತನ ಶ್ರೇಣಿ: ₹ 21,000 (ಮೂಲ ವೇತನ)–42,000 ಶ್ರೇಣಿಯಲ್ಲಿ ವೇತನ ನಿಡಲಾಗುವುದು
ಅಧಿಸೂಚನೆ ಲಿಂಕ್:https://districts.ecourts.gov.in/sites/default/files/TCP.pdf
*ಆದೇಶ ಜಾರಿಕಾರರು
ವಿದ್ಯಾರ್ಹತೆ:ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ: ₹ 19,950 (ಮೂಲ ವೇತನ)–37,000 ಶ್ರೇಣಿಯಲ್ಲಿ ವೇತನ ನಿಡಲಾಗುವುದು
ಅಧಿಸೂಚನೆ ಲಿಂಕ್:https://districts.ecourts.gov.in/sites/default/files/pp1.pdf
ನಿಗದಿತ ಶುಲ್ಕ: ಸಾಮಾನ್ಯ, ಪ್ರವರ್ಗ- 1,2ಎ, 2ಬಿ, 3ಎ ಮತ್ತು 3ಬಿ ಸೇರಿದ ಅಭ್ಯರ್ಥಿಗಳು ₹250 ಪಾವತಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ ₹100 ಮಾತ್ರ.
ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸುವ ಕೊನೆಯ ದಿನ: 24-02-2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.