ADVERTISEMENT

PUC, DEGREE ಪಡೆದವರಿಗೆ ಉದ್ಯೋಗ: ಸಿಬಿಎಸ್‌ಇಯಲ್ಲಿ 357 ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 7:42 IST
Last Updated 20 ನವೆಂಬರ್ 2019, 7:42 IST
ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ   

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ)ಯಲ್ಲಿ ಖಾಲಿ ಇರುವ 357ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಹಾಯಕ ಕಾರ್ಯದರ್ಶಿ, ಅನಲಿಸ್ಟ್‌, ಕಿರಿಯ ಭಾಷಾಂತರಕಾರರು, ಹಿರಿಯ ಸಹಾಯಕ, ಸ್ಟೆನೊ, ಕಿರಿಯ ಸಹಾಯಕ, ಅಕೌಂಟೆಂಟ್‌ ಹಾಗೂ ಜೂನಿಯರ್‌ ಅಕೌಂಟೆಂಟ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ದೇಶದಲ್ಲಿ ಇರುವಸಿಬಿಎಸ್‌ಇ ಪ್ರಾಂತೀಯ ಕಚೇರಿಗಳಲ್ಲಿ ಅಭ್ಯರ್ಥಿಗಳು ಕೆಲಸ ಮಾಡಲು ಸಿದ್ಧರಿರಬೇಕು.

ಹುದ್ದೆಗಳ ವಿವರ

ADVERTISEMENT

1)ಸಹಾಯಕ ಕಾರ್ಯದರ್ಶಿ–21 ಹುದ್ದೆಗಳು

2) ಅನಲಿಸ್ಟ್‌– 14 ಹುದ್ದೆಗಳು

3) ಕಿರಿಯ ಭಾಷಾಂತರಕಾರರು–8 ಹುದ್ದೆಗಳು

4)ಹಿರಿಯ ಸಹಾಯಕ–60 ಹುದ್ದೆಗಳು

5)ಸ್ಟೆನೊ–25 ಹುದ್ದೆಗಳು

6)ಅಕೌಂಟೆಂಟ್‌–6 ಹುದ್ದೆಗಳು

7) ಕಿರಿಯ ಸಹಾಯಕ–204 ಹುದ್ದೆಗಳು

8) ಜೂನಿಯರ್‌ ಅಕೌಂಟೆಂಟ್–19 ಹುದ್ದೆಗಳು

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಎರಡನೇಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. ವಿದ್ಯಾರ್ಹತೆ ವಿವರವನ್ನು ಈ ಕೆಳಗೆ ನೀಡಿರುವ ಅಧಿಸೂಚನೆಯಲ್ಲಿ ನೀಡಲಾಗಿದೆ.

ವಯಸ್ಸು: ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷದೊಳಗಿನವರಾಗಿರಬೇಕು. (ಮೀಸಲಾತಿ ನಿಯಮಗಳು ಅನ್ವಯಿಸುತ್ತವೆ).

ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ವೇತನ ಶ್ರೇಣಿ: ಕೇಂದ್ರ ಸರ್ಕಾರದ ಪೇ ಬ್ಯಾಂಡ್‌–7ರ ಅನ್ವಯ ವೇತನ ನೀಡಲಾಗುವುದು.

ನೇಮಕಾತಿ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು. ಇದರಲ್ಲಿ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು. ಮೂಲ ದಾಖಲೆಗಳನ್ನು ಪರೀಕ್ಷಿಸುವ ಮೂಲಕ ಅಂತಿಮವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ಶುಲ್ಕ, ವೇತನ, ವಿದ್ಯಾರ್ಹತೆಯ ಮಾಹಿತಿಗಾಗಿಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯwww.cbse.nic.in ಈ ವೆಬ್‌ಸೈಟ್‌ ನೋಡುವುದು.

ಅರ್ಜಿ ಸಲ್ಲಿಕೆ ಕಡೆ ದಿನಾಂಕ:16.12.2019

ಅಧಿಸೂಚನೆ ಲಿಂಕ್‌:https://bit.ly/2QzLiSh

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.