ADVERTISEMENT

SSC: ಗ್ರೂಪ್‌ ಬಿ, ಸಿ ಹುದ್ದೆಗಳ ನೇಮಕಾತಿಗೆ ಸಿಜಿಎಲ್‌ ಪರೀಕ್ಷೆಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 7:19 IST
Last Updated 23 ಅಕ್ಟೋಬರ್ 2019, 7:19 IST
   

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯ, ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಗ್ರೂಪ್‌ ‘ಬಿ‘ ಮತ್ತು ‘ಸಿ‘ ಹುದ್ದೆಗಳ ನೇಮಕಾತಿಗಾಗಿ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಕಂಬೈನ್ಡ್‌ ಗ್ರ್ಯಾಜುಯೆಟ್‌ ಲೆವಲ್‌ (ಸಿಜಿಎಲ್‌) ಪರೀಕ್ಷೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿಜಿಎಲ್‌ ಪರೀಕ್ಷೆ ಮುಖಾಂತರ ಸಹಾಯಕ ಆಡಿಟ್‌ ಅಧಿಕಾರಿಗಳು, ಸಹಾಯಕ ಅಕೌಂಟ್‌ ಆಫೀಸರ್‌, ಸಾಂಖ್ಯಿಕ ಅಧಿಕಾರಿ, ಸಹಾಯಕ ಸೆಕ್ಷನ್‌ ಆಫೀಸರ್‌, ಇನ್ಸ್‌ಪೆಕ್ಟರ್‌ (ತೆರಿಗೆ ಹಾಗೂ ವಾಣಿಜ್ಯ ತೆರಿಗೆ) ಇನ್ಸ್‌ಪೆಕ್ಟರ್‌ (ಸಿಬಿಐ) ತೆರಿಗೆ ಸಹಾಯಕ, ಅಕೌಂಟೆಂಟ್‌, ಆಡಿಟರ್‌ , ಪ್ರಥಮ ದರ್ಜೆ ಸಹಾಯಕ ಹಾಗೂಕ್ಲರ್ಕ್‌ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.

ವಿದ್ಯಾರ್ಹತೆ

1) ಸಾಂಖ್ಯಿಕ ಅಧಿಕಾರಿ: ಸ್ಟ್ಯಾಟಿಟಿಕ್ಸ್‌ ವಿಷಯದಲ್ಲಿ ಪದವಿ ಪಡೆದಿರಬೇಕು.

2) ಸಹಾಯಕ ಆಡಿಟ್‌ ಅಧಿಕಾರಿಗಳು, ಸಹಾಯಕ ಅಕೌಂಟ್‌ ಆಫೀಸರ್‌: ಯಾವುದಾದರೂ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಸಿಎ/ಮಾಸ್ಟರ್‌ ಇನ್‌ ಬ್ಯುಸಿನೆಸ್‌ (ಆಡಳಿತ)/ ಮಾಸ್ಟರ್‌ ಇನ್‌ ಬ್ಯುಸಿನೆಸ್‌ (ಎಕಾನಮಿಕ್ಸ್‌ )/ ಮಾಸ್ಟರ್‌ ಇನ್‌ ಕಾಮರ್ಸ್‌ ವಿದ್ಯಾರ್ಹತೆಯನ್ನು ಹೊಂದಿರಬೇಕು.

3) ಇತರೆ ಹುದ್ದೆಗಳು: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು.

ವೇತನ ಶ್ರೇಣಿ

ಸಹಾಯಕ ಆಡಿಟ್‌ ಅಧಿಕಾರಿಗಳು, ಸಹಾಯಕ ಅಕೌಂಟ್‌ ಆಫೀಸರ್‌: ₹ 47600 ರಿಂದ 151100

ಸಹಾಯಕ ಸೆಕ್ಷನ್‌ ಆಫೀಸರ್‌, ಸಹಾಯಕ, ತೆರಿಗೆ ಅಧಿಕಾರಿ, ಇನ್ಸ್‌ಪೆಕ್ಟರ್‌: ₹ 44900 ರಿಂದ 142400

ಪ್ರಥಮ ದರ್ಜೆ ಸಹಾಯಕ, ಕ್ಲರ್ಕ್‌: ₹ 25500 ರಿಂದ 81100

ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 30 ( ಇನ್ಸ್‌ಪೆಕ್ಟರ್‌, ಆಡಿಟರ್‌, ತೆರಿಗೆ ಸಹಾಯಕ, ಸಹಾಯಕ ಹುದ್ದೆಗಳಿಗೆ ಗರಿಷ್ಠ 27 ವರ್ಷಗಳು)

ವಯೋಮಿತಿ ಸಡಿಲಿಕೆ

ಎಸ್‌ಸಿ/ಎಸ್‌ಟಿ: 5 ವರ್ಷಗಳು

ಒಬಿಸಿ: 3 ವರ್ಷಗಳು

ಅಂಗವಿಕಲರು 10 ವರ್ಷಗಳು

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು ₹ 100 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ, ಅಂಗವಿಕಲರು, ಮಾಜಿ ಸೈನಿಕರು, ಮಹಿಳೆಯರು ಅರ್ಜಿಶುಲ್ಕವನ್ನು ಪಾವತಿಸುವಂತಿಲ್ಲ.

ನೇಮಕಾತಿ ಪರೀಕ್ಷೆ

ಕಂಬೈನ್ಡ್‌ ಗ್ರ್ಯಾಜುಯೆಟ್‌ ಲೆವಲ್‌ ಪರೀಕ್ಷೆಯು ನಾಲ್ಕು ಹಂತಗಳಲ್ಲಿ ನಡೆಯುವುತ್ತದೆ. ಎರಡು ಹಂತಗಳಲ್ಲಿ ಕಂಪ್ಯೂಟರ್‌ ಆಧಾರಿತ ಪರಿಕ್ಷೆ, ಮೂರನೆ ಹಂತದಲ್ಲಿ ಬರವಣಿಗೆ ಪರೀಕ್ಷೆ ಹಾಗೂ ನಾಲ್ಕನೇ ಹಂತದಲ್ಲಿ ಡಾಟಾ ಎಂಟ್ರಿ ಸ್ಕಿಲ್‌ ಹಾಗೂ ಕಂಪ್ಯೂಟರ್‌ ಕಲಿಕಾ ಪರೀಕ್ಷೆ ನಡೆಯಲಿದೆ. ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳ ಮೇರಿಟ್‌ ಲಿಸ್ಟ್‌ ತಯಾರಿಸಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುವುದು.

ಕರ್ನಾಟಕ, ಕೇರಳ ಮತ್ತು ಪುದುಚೇರಿ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪರೀಕ್ಷೆನಡೆಸಲಾಗುವುದು. ಪರೀಕ್ಷೆಯನ್ನು ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಬೇಕು.

ಅರ್ಜಿ ಸಲ್ಲಿಸುವ ವಿಧಾನ: ಕಂಬೈನ್ಡ್‌ ಗ್ರ್ಯಾಜುಯೆಟ್‌ ಲೆವಲ್‌ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಅಧಿಕೃತ ವೆಬ್‌ಸೈಟ್‌ https://ssc.nic.in ಗೆ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಕಡೆಯ ದಿನಾಂಕ: 25-11-2019 (ಸಂಜೆ 5 ಗಂಟೆ)

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ವೆಬ್‌ಸೈಟ್‌ ನೋಡುವುದು ಅಥವಾ ಈ ಕೆಳಗಿನ ನೇಮಕಾತಿ ಅಧಿಸೂಚನೆಯ ಲಿಂಕ್‌ ನೋಡಬಹುದು.

ಅಧಿಸೂಚನೆಯ ಲಿಂಕ್‌:https://bit.ly/2Jc5ULK

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.