ಮಹಾನದಿ ಕೋಲ್ಫೀಲ್ಡ್ ಲಿಮಿಟೆಡ್ನಲ್ಲಿ ಖಾಲಿ ಇರುವ295 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳ ಪೈಕಿ, ಮೈನಿಂಗ್ ಸರ್ದಾರ್, ಜೂನಿಯರ್ ಓವರ್ಮನ್ ಹಾಗೂ ಸರ್ವೇಯರ್ ಹುದ್ದೆಗಳು ಸೇರಿವೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು.
ಹುದ್ದೆಗಳ ವಿವರ
ಜೂನಿಯರ್ ಓವರ್ಮನ್: 82
ಮೈನಿಂಗ್ ಸರ್ದಾರ್: 145
ಸರ್ವೇಯರ್: 68
ವಿದ್ಯಾರ್ಹತೆ
ಜೂನಿಯರ್ ಓವರ್ಮನ್: ಎಂಜಿನಿಯರಿಂಗ್ನಲ್ಲಿ ಮೈನಿಂಗ್ ಡಿಪ್ಲೊಮಾ ಅಥವಾ ಪದವಿ
ಮೈನಿಂಗ್ ಸರ್ದಾರ್: ಎಂಜಿನಿಯರಿಂಗ್ನಲ್ಲಿ ಮೈನಿಂಗ್ ಡಿಪ್ಲೊಮಾ ಅಥವಾ ಪದವಿ
ಸರ್ವೇಯರ್: ಮೈನಿಂಗ್ ಸರ್ವೇ ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು
ವಯಸ್ಸು
ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ:ಸಾಮಾನ್ಯ ಮತ್ತು ಒಬಿಸಿಯವರಿಗೆ ₹ 1180, ಎಸ್ಸಿ,ಎಸ್ಟಿ, ಅಂಗವಿಕಲರಿಗೆಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನ.
ಅರ್ಜಿಗೆ ಕೊನೆ ದಿನಾಂಕ: 23-01-2023
ವೆಬ್ಸೈಟ್ ವಿಳಾಸ: https://www.mahanadicoal.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.