ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ (ಡಿಆರ್‌ಡಿಓ) ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದೆ. ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ಪದಿವಿಯನ್ನು ಪಡೆದಿರುವವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಸಂಸ್ಥೆಯು ತಿಳಿಸಿದೆ.
ಹೈದರಾಬಾದ್ ಶಾಖೆಯ ಸಂಶೋಧನಾ ಕೇಂದ್ರದಲ್ಲಿ ತರಬೇತಿಗಾಗಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಮೆಕ್ಯಾನಿಕಲ್ ಹಾಗೂ ಕೆಮಿಕಲ್ ಜೊತೆಗೆ ಇತರ ವಿಭಾಗಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಅಕ್ಟೋಬರ್ 28ರೊಳಗೆ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆಯ ಆರಂಭ : ಸೆಪ್ಟೆಂಬರ್ 27
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 28
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳು: 195
ಗ್ರಾಜುಯೇಟ್ ಅಪ್ರೆಂಟಿಸ್: 40
ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್: 20
ಐಟಿಐ ಟ್ರೇಡ್ ಅಪ್ರೆಂಟಿಸ್: 135
ಅರ್ಜಿಸಲ್ಲಿಕೆಗೆ ಇರಬೇಕಾದ ಅರ್ಹತೆಗಳೇನು?
ಸಂಸ್ಥೆಯ ಅಧಿಸೂಚಿಯ ಅನ್ವಯ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಮೆಕ್ಯಾನಿಕಲ್ ಅಥವಾ ಕೆಮಿಕಲ್ ಹಾಗೂ ಸಂಬಂಧಿತ ವಿಭಾಗಗಳಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.
ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಪಡೆದಿರಬೇಕು.
ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಕ್ಯಾನಿಕ್-ಡೀಸೆಲ್, ಫಿಟ್ಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಟರ್ನರ್, ವೆಲ್ಡರ್, ಮೆಷಿನಿಸ್ಟ್, ಡ್ರಾಫ್ಟ್ಸ್‌ಮನ್ (ಮೆಕ್ಯಾನಿಕಲ್), ಎಲೆಕ್ಟ್ರಿಷಿಯನ್, ಸಿಒಪಿಎ ಅಥವಾ ಲೈಬ್ರರಿ ಅಸಿಸ್ಟೆಂಟ್‌ನಂತಹ ಟ್ರೇಡ್‌ಗಳಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷ ತುಂಬಿರಬೇಕು.
ಸರ್ಕಾರಿ ನಿಯಮಗಳ ಪ್ರಕಾರ ಮೀಸಲು ವರ್ಗಕ್ಕೆ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಶೈಕ್ಷಣಿಕ ಅರ್ಹತೆ ಮತ್ತು ತಾಂತ್ರಿಕ ಕೌಶಲ್ಯಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಯ ಜೊತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ದೊರೆಯುವ ಸಂಬಳ :
ಪದವೀಧರ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 9,000 ಸ್ಟೈಫಂಡ್ ಸಿಗಲಿದೆ.
ಡಿಪ್ಲೊಮಾ ಅಭ್ಯರ್ಥಿಗಳಿಗೆ ತಿಂಗಳಿಗೆ ₹8,000 ಸ್ಟೈಫಂಡ್ ಸಿಗಲಿದೆ.
ಅರ್ಜಿಯನ್ನು ಸಲ್ಲಿಸುವ ವಿಳಾಸ :
https://www.drdo.gov.in/drdo/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.