ADVERTISEMENT

ಪ್ರಬಂಧ ಬರೆಯಿರಿ; ಜಾಗೃತಿ ಆಯುಕ್ತರಾಗಿ

ಪಿಟಿಐ
Published 1 ಏಪ್ರಿಲ್ 2019, 20:34 IST
Last Updated 1 ಏಪ್ರಿಲ್ 2019, 20:34 IST

ನವದೆಹಲಿ:ಭಷ್ಟಾಚಾರ ತಡೆ ಸಂಬಂಧಿಸಿ ಕೇಂದ್ರದ ಜಾಗೃತಿ ಆಯುಕ್ತರಾಗಬೇಕೇ? ಹಾಗಿದ್ದರೆ ಈ ಸಂಬಂಧಿಸಿ 300 ಪದಗಳ ಪ್ರಬಂಧ ಬರೆದು ಅರ್ಜಿ ಸಲ್ಲಿಸಿ.

ಆದರೆ ಐಎಎಸ್‌, ಐಪಿಎಸ್‌ ಅಥವಾ ಐಎಫ್‌ಎಸ್‌ ದರ್ಜೆಯ ಅಧಿಕಾರಿಗಳು ಮಾತ್ರ ಈ ರೀತಿ ಅರ್ಜಿ ಸಲ್ಲಿಸಲು ಅರ್ಹರು. ಕೇಂದ್ರದ ಸಿಬ್ಬಂದಿ ಸಚಿವಾಲಯವುಭ್ರಷ್ಟಾಚಾರ ವಿರುದ್ಧ ಕೇಂದ್ರ ಜಾಗೃತಿ (ಸಿವಿಸಿ) ವಿಭಾಗದ ಆಯುಕ್ತ ಮತ್ತು ಜಾಗೃತಿ ಆಯುಕ್ತ ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಜಿ ಕರೆಯುವಂತೆ ಆದೇಶ ಹೊರಡಿಸಿದೆ. ಆಸಕ್ತರು ಅರ್ಜಿ ಜತೆ ಪ್ರಬಂಧವನ್ನೂ ಬರೆದು ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT