ADVERTISEMENT

ಭಾರತೀಯ ನೌಕಾಪಡೆ: 2700 ನಾವಿಕ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 7:16 IST
Last Updated 8 ನವೆಂಬರ್ 2019, 7:16 IST
   

ಭಾರತೀಯ ನೌಕಾ ಪಡೆಯಲ್ಲಿ ಖಾಲಿ ಇರುವ ನಾವಿಕ (ಸೈಲರ್‌) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 2700 ಹುದ್ದೆಗಳಲ್ಲಿ ಸೀನಿಯರ್‌ ಸೆಕೆಂಡರಿ(ಎಸ್‌ಎಸ್‌ಆರ್‌) 2200 ಹಾಗೂ 500 ಆರ್ಟಿಫಿಶಿಯರ್‌ ಅಪ್ರಂಟೀಸ್‌ಗಳನ್ನು(ಎಎಸ್‌) ನೇಮಕಾತಿ ಮಾಡಿಕೊಳ್ಳಲಾಗುವುದು. ಇದು 2020ರ ಆಗಸ್ಟ್‌ ಬ್ಯಾಚ್‌ ನೇಮಕಾತಿಯಾಗಿದೆ. ಅವಿವಾಹಿತರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಿದ್ಯಾರ್ಹತೆ...

ಎಸ್‌ಎಸ್‌ಆರ್‌ ಹುದ್ದೆಗಳು:ದ್ವಿತೀಯ ಪಿಯುಸಿವಿಜ್ಞಾನ ನಿಕಾಯದಲ್ಲಿ ಉತ್ತೀರ್ಣರಾಗಿರಬೇಕು. ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಅಧ್ಯಯನ ಮಾಡಿರಬೇಕು.

ADVERTISEMENT

ಎಎಸ್‌ ಹುದ್ದೆಗಳು:ಶೇ 60 ರಷ್ಟು ಅಂಕಗಳೊಂದಿಗೆದ್ವಿತೀಯಪಿಯುಸಿ ವಿಜ್ಞಾನ ನಿಕಾಯದಲ್ಲಿ ಉತ್ತೀರ್ಣರಾಗಿರಬೇಕು.ಭೌತಶಾಸ್ತ್ರ ಮತ್ತು ಗಣಿತ ಕಡ್ಡಾಯ ವಿಷಯಗಳಾಗಿರಬೇಕು.

ವಯೋಮಿತಿ:ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಗಸ್ಟ್‌ 1, 2000ನೇ ವರ್ಷ ಹಾಗೂ ಜುಲೈ 31, 2003ರ ನಡುವೆ ಜನಿಸಿರಬೇಕು.

ವೇತನ ಶ್ರೇಣಿ:ತರಬೇತಿ ಸಮಯದಲ್ಲಿ ₹14,600 ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ₹21,700- ₹69,100 ವೇತನ ನಿಡಲಾಗುವುದು.

ನೇಮಕಾತಿ ವಿಧಾನ: ಅಭ್ಯರ್ಥಿಗಳ ಆಯ್ಕೆಯು 2 ಹಂತಗಳಲ್ಲಿ ನಡೆಯಲಿದೆ. ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಕ್ಷಮತೆ ಪರೀಕ್ಷೆಯ ಮೂಲಕಆಯ್ಕೆ ನಡೆಯಲಿದೆ.ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುವುದು.

ಪರೀಕ್ಷೆ ಶುಲ್ಕ: ₹ 250 ಮಾತ್ರ

ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 18–11–2019

ಅಧಿಸೂಚನೆ ಲಿಂಕ್‌:https://bit.ly/2pU9PXb

ವೆಬ್‌ಸೈಟ್‌:www.joinindiannavy.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.