ADVERTISEMENT

ರೈಲ್ವೆಯಲ್ಲಿ ಉದ್ಯೋಗಾವಕಾಶ: ನಿವೃತ್ತ ಸಿಬ್ಬಂದಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2025, 7:50 IST
Last Updated 27 ಅಕ್ಟೋಬರ್ 2025, 7:50 IST
   

ಭಾರತೀಯ ರೈಲ್ವೆ ಇಲಾಖೆಯ ನೈಋತ್ಯ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಗುತ್ತಿಗೆ ಆಧಾರದಲ್ಲಿ ನಿವೃತ್ತ ರೈಲ್ವೆ ನೌಕರರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಿದೆ.

ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇದ್ದು, ನೇಮಕಾತಿಯು 2026ರ ಅಕ್ಟೋಬರ್‌ 14ರವರೆಗೆ ಚಾಲ್ತಿ ಇರಲಿದೆ ಎಂದು ಇಲಾಖೆ  ತಿಳಿಸಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ.

ನೇಮಕಾತಿ 2026ರ ಅಕ್ಟೋಬರ್‌ 14 ರವರೆಗೆ ಅಥವಾ ನಿಯಮಿತ ಆಯ್ಕೆಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಮಾನ್ಯವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.

ADVERTISEMENT

ವಯೋಮಿತಿ : 

  • ಮರು ನೇಮಕಾತಿಗೆ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳು.

ಹುದ್ದೆಗಳ ವಿವರ:

ಬೆಂಗಳೂರು ವಿಭಾಗ: 

  • ಇಂಜಿನಿಯರಿಂಗ್‌ ವಿಭಾಗ: ಎಸ್ಎಸ್‌ಇ (ಪಬ್ಲಿಕ್ ವರ್ಕ್ಸ್ ಮತ್ತು ಕಾಮಗಾರಿಗಳು), ಜೆಇ, ಹಿರಿಯ ತಾಂತ್ರಿಕ (ವೆಲ್ಡರ್ ಮತ್ತು ಕಮ್ಮಾರ)

  • ವಿದ್ಯುತ್ ಸಾಮಾನ್ಯ ವಿಭಾಗ: ಜೆಇ (ಎಸಿ, ಟಿಎಲ್ ‌ಮತ್ತು ಪಿ), ಸೀನಿಯರ್, ಟೆಕ್ (ಪವರ್, ಟಿಎಲ್‌ಡಿ, ಎಸಿ)

  • ವಿದ್ಯುತ್‌ ಟಿಆರ್‌ಎಸ್‌ ವಿಭಾಗ: ಎಸ್‌ಎಸ್‌ಇ, ಟಿಆರ್‌ಎಸ್‌, ವಿದ್ಯುತ್‌ ಟಿಆರ್‌ಓ ವಿಭಾಗ: ಸಿಎಲ್‌ಐ, ಸಿಆರ್‌ಸಿ, ಪಿಆರ್‌ಸಿ, ಟಿಎಲ್‌ಸಿ

  • ವಿದ್ಯುತ್‌ ಟಿಆರ್‌ಡಿ ವಿಭಾಗ: ಎಸ್‌ಎಸ್‌ಇ, ಟಿಆರ್‌ಡಿ, ವಿದ್ಯುತ್‌ ಮಿನಿಸ್ಟೀರಿಯಲ್ ವಿಭಾಗ: ಕಚೇರಿ ಅಧೀಕ್ಷಕರು  

  • ಮೆಕ್ಯಾನಿಕಲ್ ಸಿ ಅಂಡ್‌ ಡಬ್ಲ್ಯು ವಿಭಾಗ: ಟೆಕ್‌–1 (ಸಿ ಅಂಡ್‌ ಡಬ್ಲ್ಯು), ಟೆಕ್‌–2 (ಸಿ ಅಂಡ್‌ ಡಬ್ಲ್ಯು), ಟೆಕ್‌–3 (ಸಿ ಅಂಡ್‌ ಡಬ್ಲ್ಯು).

  • ಮೆಕ್ಯಾನಿಕಲ್ ಡಿಎಸ್‌ಎಲ್‌ ಶೆಡ್‌ ವಿಭಾಗ: ಟೆಕ್‌–1 ಮತ್ತು 3 (ಎಂ–ವಿಗ್‌), ಟೆಕ್‌–3 (ಇ–ವಿಂಗ್)

  • ಮೆಕ್ಯಾನಿಕಲ್ ಮಿನಿಸ್ಟೀರಿಯಲ್ ವಿಭಾಗ: ಕಚೇರಿ ಅಧೀಕ್ಷಕರು

  • ಆಪರೇಟಿಂಗ್ ವಿಭಾಗ: ಗೂಡ್ಸ್‌ ಮ್ಯಾನೇಜರ್, ಸ್ಟೇಷನ್ ಮಾಸ್ಟರ್, ಸೆಕ್ಷನ್ ಕಂಟ್ರೋಲರ್, ಪಾಯಿಂಟ್ಸ್ ಮ್ಯಾನ್

  • ವಾಣಿಜ್ಯ ವಿಭಾಗ: ಸಿಎಸ್‌, ಸಿಸಿಸಿಟಿಎಸ್‌, ಎಂಡಿಡಿಟಿಐ: ಲೋಕೋ ಇನ್ಸ್‌ಟ್ರಿಕ್ಟರ್

ಹುಬ್ಬಳ್ಳಿ ವಿಭಾಗ: 

  • ಆಪರೇಟಿಂಗ್‌ ಇಲಾಖೆ: ಸ್ಟೇಷನ್ ಮಾಸ್ಟರ್‌ಗಳು, ನಿಯಂತ್ರಕರು, ರೈಲು ವ್ಯವಸ್ಥಾಪಕರು (ಸರಕು/ಪ್ರಯಾಣಿಕರು)

  • ಯಾತ್ರಿಕ ಇಲಾಖೆ: ಸಿಆರ್‌ಸಿ, ಪಿಆರ್‌ಸಿ, ಟಿಎಲ್‌ಸಿ.

  • ಇಂಜನಿಯರಿಂಗ್ ಇಲಾಖೆ: ಟ್ರ್ಯಾಕ್‌ ನಿರ್ವಹಣೆದಾರರು, ತಂತ್ರಜ್ಞರು, ಎಸ್ಎಸ್ಇಗಳು, ಜೆಇ ಗಳು.

ಮೈಸೂರು ವಿಭಾಗ:

ಅಪರೇಟಿಂಗ್‌: 3 ಎಸ್.ಎಂ, 4 ಎಸ್‌ಎಸ್‌, 14 ಟಿಎಎಂಆರ್‌ಎಸ್. ವೈದ್ಯಕೀಯ: 2 ಫಾರ್ಮಾಸಿಸ್ಟ್‌ಗಳು

ವಾಣಿಜ್ಯ: 5 ಟಿಕೇಟು ಸಿಬ್ಬಂದಿ, ಎಲೆಕ್ಟ್ರಿಕಲ್‌ : 28 ಸಿಆರ್‌ಸಿ, ಪಿಆರ್‌ಸಿ, ಟಿಎಲ್‌ಸಿ 

ಇಂಜಿನಿಯರಿಂಗ್‌: 2 ಎಸ್ಎಸ್‌ಇ, ವರ್ಕ್ಸ್, ಪಿ ಮತ್ತು ಜಿ: 3 ಚೀಫ್ ಓಎಸ್‌, 4 ಸ್ಟೆನೊ

ಯಾರು ಅರ್ಜಿ ಸಲ್ಲಿಸಬಹುದು

  • ನಿವೃತ್ತ ರೈಲ್ವೆ ನೌಕರರು ಮಾತ್ರ

  • ಕೊನೆಯ 5 ಎಪಿಎಆರ್‌ಗಳಲ್ಲಿ ‘ಉತ್ತಮ‘ ಶ್ರೇಣಿ ಪಡೆದಿರಬೇಕು.

  • ಹುದ್ದೆಗೆ ವೈದ್ಯಕೀಯವಾಗಿ ಸೂಕ್ತವಿರಬೇಕು.

  • ಎಲ್ಎಆರ್‌ಜಿಇಎಸ್‌ಎಸ್ ಅಡಿಯಲ್ಲಿ ನಿವೃತ್ತಿ ಹೊಂದಿರಬಾರದು.

  • ಡಿಎಆರ್ ಅಡಿಯಲ್ಲಿ ತೆಗೆದುಹಾಕಿರುವ ಅಥವಾ ವಜಾಗೊಳಿಸಿರುವವರು ಅನರ್ಹರು.

ಪರಿಶೀಲನೆ ಮತ್ತು ಆಯ್ಕೆ:

  • ಅರ್ಜಿಯನ್ನು ಸಮಿತಿ ಪರಿಶೀಲಿಸಿ, ಅರ್ಹತೆ ಹಾಗೂ ವೈದ್ಯಕೀಯ ಅರ್ಹತೆ ಮೇಲೆ ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ?

  • ಬೆಂಗಳೂರು ವಿಭಾಗ:

  • https://swr.indianrailways.gov.in/ -> About Us > Divisions > > Bangalore Division > Personnel Branch > Notifications to ಅರ್ಜಿಯು ಲಭ್ಯವಿದೆ.

  • ಮೈಸೂರು ವಿಭಾಗ:

  • https://swr.indianrailways.gov.in/ About Us > Divisions > Mysore Division > Personnel Branch > Notifications tirom  ಅರ್ಜಿಯು ಲಭ್ಯವಿದೆ

ಅರ್ಜಿ ಸಲ್ಲಿಸಲು ವಿಳಾಸ 

ಬೆಂಗಳೂರು ವಿಭಾಗ:

  • ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ

  • ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ,

  • ಬೆಂಗಳೂರು – 560 023

  • ದೂ: 9731666622

ಹುಬ್ಬಳ್ಳಿ ವಿಭಾಗ:

  • ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ

  • ಸಿಬ್ಬಂದಿ ಶಾಖೆ

  • ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ, ಹುಬ್ಬಳ್ಳಿ – 560 020

  • SRDPBUL@GMAIL.COM

  • ದೂ: 9731668612

ಮೈಸೂರು ವಿಭಾಗ:

  • ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ

  • ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ,

  • ಮೈಸೂರು – 570 001

  • ದೂ: 9943356645, 8105832038

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.