ADVERTISEMENT

ವೇತನ ₹ 57,000: LICಯಲ್ಲಿ 218 ಆಡಳಿತಾಧಿಕಾರಿ, ತಾಂತ್ರಿಕ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 7:46 IST
Last Updated 26 ಫೆಬ್ರುವರಿ 2020, 7:46 IST
   

ಬೆಂಗಳೂರು:ಅಸಿಸ್ಟಂಟ್‌ ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ಎಎಒ/ಸಹಾಯಕ ಆಡಳಿತಾಧಿಕಾರಿ) ಹಾಗೂಅಸಿಸ್ಟಂಟ್‌ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗಾಗಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ)ಅರ್ಜಿಗಳನ್ನು ಆಹ್ವಾನಿಸಿದೆ.

ಸಿವಿಲ್, ಎಲೆಕ್ಟ್ರಿಕಲ್, ಸ್ಟ್ರಕ್ಚರಲ್, ಎಂಇಪಿ ಮತ್ತುಆರ್ಕಿಟೆಕ್ಟ್‌ ವಿಭಾಗದಲ್ಲಿ 50ಅಸಿಸ್ಟಂಟ್‌ ಎಂಜಿನಿಯರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ 168ಸಹಾಯಕ ಆಡಳಿತಾಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಭರ್ತಿ ಮಾಡಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಹುದ್ದೆಗಳ ವಿವರ

ADVERTISEMENT

1)ಅಸಿಸ್ಟಂಟ್‌ ಎಂಜಿನಿಯರ್‌: 50 ಹುದ್ದೆಗಳು

ಮೀಸಲಾತಿ: ಸಾಮಾನ್ಯ ವರ್ಗ–26, ಪ.ಜಾತಿ–06, ಪ.ಪಂಗಡ–01, ಹಿಂದುಳಿದ ವರ್ಗ (ಒಬಿಸಿ)–12, ಇವಿಎಸ್‌–5

ವಿದ್ಯಾರ್ಹತೆ: ಹುದ್ದೆಗಳಿಗೆ ಸಂಬಂಧಿಸಿದಂತೆ ಆಯಾ ವಿಭಾಗದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ/ಬಿ.ಟೆಕ್‌ ಪದವಿ ಪಡೆದಿರಬೇಕು. ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.

ವೇತನ ಶ್ರೇಣಿ: ₹32,795/-(ಮೂಲ ವೇತನ)ರಿಂದ ₹62,650 ( ಇತರೆ ಭತ್ಯೆಗಳು ಸೇರಿ ಮಾಸಿಕ₹ 57,000 ವೇತನ ಪಡೆಯಬಹುದು)

ವಯಸ್ಸು: ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು. ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇದೆ.

2)ಸಹಾಯಕ ಆಡಳಿತಾಧಿಕಾರಿ: 168 ಹುದ್ದೆಗಳು

ಮೀಸಲಾತಿ:ಸಾಮಾನ್ಯ ವರ್ಗ–68, ಪ.ಜಾತಿ–25, ಪ.ಪಂಗಡ–14, ಹಿಂದುಳಿದ ವರ್ಗ (ಒಬಿಸಿ)–45, ಇವಿಎಸ್‌–16

ವಿದ್ಯಾರ್ಹತೆ: ಹುದ್ದೆಗಳಿಗೆ ಸಂಬಂಧಿಸಿದಂತೆ ಆಯಾ ವಿಭಾಗದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.

ವೇತನ ಶ್ರೇಣಿ: ₹32,795/-(ಮೂಲ ವೇತನ)ರಿಂದ ₹62,650 ( ಇತರೆ ಭತ್ಯೆಗಳು ಸೇರಿ ಮಾಸಿಕ₹ 57,000 ವೇತನ ಪಡೆಯಬಹುದು)

ವಯಸ್ಸು: ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು. ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ನಿಗದಿತ ಶುಲ್ಕ: 2ಎ, 2ಬಿ, 3ಎ ಮತ್ತು 3ಬಿ ಸೇರಿದ ಅಭ್ಯರ್ಥಿಗಳು ₹ 700 ಪಾವತಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ ₹ 85 ಮಾತ್ರ.

ನೇಮಕಾತಿ ವಿಧಾನ: ನೇಮಕಾತಿಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗುವುದು. ಅತಿ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಈ ಅಧಿಸೂಚನೆ ಲಿಂಕ್‌ ನೋಡಿ.

ಅರ್ಜಿ ಸಲ್ಲಿಸುವ ಕೊನೆಯ ದಿನ: 15–03–2020

ವೆಬ್‌ಸೈಟ್‌:https://licindia.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.