ADVERTISEMENT

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 6.83 ಲಕ್ಷ ಹುದ್ದೆಗಳು ಖಾಲಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 12:56 IST
Last Updated 5 ಫೆಬ್ರುವರಿ 2020, 12:56 IST
   

ನವ ದೆಹಲಿ:ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 6.83 ಲಕ್ಷಕ್ಕೂ ಅಧಿಕಹುದ್ದೆಗಳು ಖಾಲಿ ಇರುವುದಾಗಿ ಬುಧವಾರ ಕೇಂದ್ರಸರ್ಕಾರಲೋಕಸಭೆಗೆ ತಿಳಿಸಿದೆ.

ಕಳೆದ ವರ್ಷಸುಮಾರು38,02,779 ಹುದ್ದೆಗಳ ಪೈಕಿ31,18,956 ಗಳನ್ನು ಭರ್ತಿ ಮಾಡಲಾಗಿದೆ ಎಂದುಕೇಂದ್ರ ಸಚಿವಜಿತೇಂದ್ರಸಿಂಗ್ಅವರುಆದಾಯಮತ್ತು ಸಂಶೋಧನೆ ಇಲಾಖೆಯವಾರ್ಷಿಕವರದಿಯನ್ನಾಧರಿಸಿರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರನೀಡಿದ್ದಾರೆ.

2018ರಮಾರ್ಚ್ವೇಳೆಗೆ 6,83,823 ಹುದ್ದೆಗಳು ಖಾಲಿ ಇವೆ ಎಂದುಅವರು ಮಾಹಿತಿ ನೀಡಿದ್ದಾರೆ.

ADVERTISEMENT

ನಿವೃತ್ತಿ, ರಾಜೀನಾಮೆ, ಸಾವು, ಬಡ್ತಿಮುಂತಾದಕಾರಣಗಳಿಗಾಗಿ ಸ್ಥಾನಗಳುಖಾಲಿಯಾಗಿದ್ದು,ಸರ್ಕಾರದನೇಮಕಾತಿ ನಿಯಮಗಳ ಪ್ರಕಾರ ಬಾಕಿ ಇವರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ನೇಮಕಾತಿ ಪ್ರಕ್ರಿಯೆಯುನಿರಂತರವಾಗಿದ್ದುಅದುಇಲಾಖೆಗಳವಾರ್ಷಿಕಯೋಜನೆಗಳಿಗೆಅನುಗುಣವಾಗಿಆಯ್ಕೆ ಪ್ರಕ್ರಿಯೆ ನಡೆಯತ್ತದೆ ಎಂದರು. 2019–20 ಸಾಲಿನಲ್ಲಿ ಯುಪಿಎಸ್‌ಸಿ, ಎಸ್‌ಎಸ್‌ಸಿ ಮತ್ತುರೈಲ್ವೆ ಇಲಾಖೆಯಿಂದಸುಮಾರು 1,34 ಲಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಬೇಡಿಕೆ ಬಂದಿದೆ ಎಂದರು. ರೈಲ್ವೆನೇಮಕಾತಿ ಮಂಡಳಿಯಿಂದ 1,16,391 ಹುದ್ದೆಗಳು, ಎಸ್‌ಎಸ್‌ಸಿಯಿಂದ13,995 ಹುದ್ದೆಗಳು ಮತ್ತು ಕೇಂದ್ರ ಲೋಕ ಸೇವಾ ಆಯೋಗದಿಂದ4,399 ಹುದ್ದೆಗಳ ನೇಮಕಾತಿಗೆಬೇಡಿಕೆ ಬಂದಿದೆ ಎಂದು ಅವರು ವಿವರಿಸಿದರು.

ನಿರ್ದಿಷ್ಟ ಸಮಯದೊಳಗೆನೇಮಕಾತಿ ಮಾಡುವಂತೆಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.