ADVERTISEMENT

ಭಾಗ -13- ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 19:30 IST
Last Updated 27 ಜೂನ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

171. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?

ಎ) ಎಸ್.ನಿಜಲಿಂಗಪ್ಪ

ಬಿ) ಬಿ.ಡಿ.ಜತ್ತಿ

ADVERTISEMENT

ಸಿ) ದೇವರಾಜ ಅರಸ್

ಡಿ) ಮೇಲ್ಕಂಡ ಯಾರೂ ಅಲ್ಲ

172. ಬೆಂಗಳೂರು ಅಂತರರಾಷ್ಟ್ರೀಯ
ವಿಮಾನ ನಿಲ್ದಾಣವನ್ನು ಏನೆಂದು ಮರು ನಾಮಕರಣ ಮಾಡಲಾಗಿದೆ?

ಎ)ಕಂಠೀರವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಬಿ)ಡಾ.ರಾಜಕುಮಾರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಸಿ)ಸಂಗೊಳ್ಳಿ ರಾಯಣ್ಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಡಿ)ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

173. ವಿಶ್ವ ಆರೋಗ್ಯ ಸಂಸ್ಥೆಯ (WHO) ಕೇಂದ್ರ ಸ್ಥಾನ ಎಲ್ಲಿದೆ?

ಎ) ಜಿನೇವಾ

ಬಿ) ಇಸ್ಲಾಮಾಬಾದ್

ಸಿ) ನ್ಯೂಯಾರ್ಕ್

ಡಿ) ಹೇಗ್‌

174. ರಕ್ತದೊತ್ತಡವನ್ನು ಅಳೆಯುವ ಉಪಕರಣ ಯಾವುದು?

ಎ) ಸ್ಪೀಡೊಮೀಟರ್

ಬಿ) ನ್ಯಾನೊಮೀಟರ್

ಸಿ) ಅಸಿಲೋಸ್ಕೋಪ್

ಡಿ) ಸ್ಪಿಗ್ಮೊಮಾನೋಮೀಟರ್

175. 1843ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಕನ್ನಡ ಪತ್ರಿಕೆ ಯಾವುದು?

ಎ) ಸಂಯುಕ್ತ ಕರ್ನಾಟಕ

ಬಿ) ಪ್ರಜಾವಾಣಿ

ಸಿ) ಮಂಗಳೂರು ಸಮಾಚಾರ

ಡಿ) ವಾರ್ತಾ ಭಾರತಿ

176. ಮೂರನೇ ದುಂಡುಮೇಜಿನ ಪರಿಷತ್ತು ನಡೆದ ವರ್ಷ ಯಾವುದು?

ಎ) 1931

ಬಿ) 1933

ಸಿ) 1932

ಡಿ) 1934

177. ಬಿದಿರು ಅತ್ಯಂತ ಎತ್ತರವಾದ ………

ಎ) ಮರ

ಬಿ) ಹುಲ್ಲು

ಸಿ) ಶಿಲಾವಲ್ಕ

ಡಿ) ಪಾಚಿ

178. ‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?

ಎ) ರಾಜೀವ್ ಗಾಂಧಿ

ಬಿ) ಇಂದಿರಾ ಗಾಂಧಿ

ಸಿ) ಸಿ.ರಾಜಗೋಪಾಲಾಚಾರಿ

ಡಿ) ಜವಾಹರಲಾಲ್‌ ನೆಹರೂ

179. ‘ಸಂಸ್ಕಾರ’ ಚಲನಚಿತ್ರಕ್ಕೆ ಚಿತ್ರಕಥೆ ಬರೆದವರು ಯಾರು?

ಎ) ಗಿರೀಶ್ ಕಾರ್ನಾಡ್

ಬಿ) ವೀರಭದ್ರಪ್ಪ

ಸಿ) ಯು.ಆರ್.ಅನಂತಮೂರ್ತಿ

ಡಿ) ಗಿರೀಶ್ ಕಾಸರವಳ್ಳಿ

180. ಈ ಕೆಳಗಿನವುಗಳಲ್ಲಿ ಯಾವುದು ಹಾರುವ ಸಸ್ತನಿ ಆಗಿರುತ್ತದೆ?

ಎ) ಬಾವಲಿ

ಬಿ) ಹದ್ದು

ಸಿ) ಕಾಗೆ

ಡಿ) ಗಿಳಿ

181. ‘ಲಿಥೋಸ್ಪಿಯರ್’ ಎಂದರೆ

ಎ) ಜೀವಗೋಳ

ಬಿ) ಭೂಮಿಯ ಹೊರಗಿನ ಮೇಲ್ಮೈ

ಸಿ) ಭೂಮಿಯ ಹೊರಪದರ

ಡಿ) ಭೂಗರ್ಭದಲ್ಲಿರುವ ಗೋಳ

182. ರಿಕ್ಟರ್ ಮಾಪನವನ್ನು ಈ ಕೆಳಗಿನ ಯಾವುದನ್ನು ಅಳೆಯಲು ಉಪಯೋಗಿಸುತ್ತಾರೆ?

ಎ) ಗಾಳಿಯ ವೇಗ

ಬಿ) ಭೂಕಂಪನ

ಸಿ) ಸಮುದ್ರದ ಆಳ

ಡಿ) ಭೂಗರ್ಭದ ಶಾಖ

183. ‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’- ಎಂದು ಹೇಳಿದವರು ಯಾರು?

ಎ) ಮಹಾತ್ಮಾ ಗಾಂಧೀಜಿ

ಬಿ) ಜವಾಹರಲಾಲ್ ನೆಹರೂ

ಸಿ) ಆನಿ ಬೆಸೆಂಟ್

ಡಿ) ಸುಭಾಷ್ ಚಂದ್ರ ಭೋಸ್

184. ಈ ಕೆಳಗಿನವುಗಳಲ್ಲಿ ಯಾವ ಬೆಳೆಗೆ ಗದ್ದೆಯಲ್ಲಿ ನೀರು ನಿಲ್ಲಬೇಕು?

ಎ) ಟೀ

ಬಿ) ಕಾಫಿ

ಸಿ) ಭತ್ತ

ಡಿ) ಸಾಸಿವೆ

185. ಈ ಕೆಳಗಿನವುಗಳಲ್ಲಿ ಯಾವ ಗ್ರಹವು ಸೂರ್ಯನಿಗೆ ಸಮೀಪದಲ್ಲಿದೆ?

ಎ) ಭೂಮಿ

ಬಿ) ಪ್ಲೂಟೋ

ಸಿ) ಗುರು

ಡಿ) ಶುಕ್ರ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.