ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 19:30 IST
Last Updated 7 ಜೂನ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಭಾಗ – 2

11. ಕರ್ನಾಟಕದ ಈ ಕೆಳಗಿನ ಯಾವ ಸ್ಥಳವು UNESCO ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಲ್ಲ?

ADVERTISEMENT

ಎ) ಪಶ್ಚಿಮ ಘಟ್ಟಗಳು

ಬಿ) ಪಟ್ಟದಕಲ್ಲು

ಸಿ) ಐಹೊಳೆ

ಡಿ) ಹಂಪಿ

12. ಕರ್ನಾಟಕದ ಕಾಶ್ಮೀರ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?

ಎ) ಉತ್ತರಕನ್ನಡ

ಬಿ) ದಕ್ಷಿಣಕನ್ನಡ

ಸಿ) ಕೊಡಗು

ಡಿ) ಮೈಸೂರು

13. ಓಝೋನ್ರಾಸಾಯನಿಕ ಸೂತ್ರ ಏನು?

ಎ) ಓ2

ಬಿ) ಓ3

ಸಿ) ಓ4

ಡಿ) ಸಿಓ2

14. ಈ ಕೆಳಗಿನ ಯಾವ ಜಿಲ್ಲೆ ಸಂವಿಧಾನದ 371 J ವಿಧಿ ಅಡಿಯಲ್ಲಿಬರುವುದಿಲ್ಲ?

ಎ) ಬೀದರ್

ಬಿ) ಯಾದಗಿರಿ

ಸಿ) ವಿಜಯಪುರ

ಡಿ) ಕೊಪ್ಪಳ

15. ಗ್ಲೂಕೋಸ್‌ನ ರಾಸಾಯನಿಕ ಸೂತ್ರ ಏನು?

ಎ) C6H6O6

ಬಿ) C12H12O11

ಸಿ) C6H12O11

ಡಿ) C6H12O6

16. ಪ್ರಸಕ್ತ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಅಧಿಕಾರಾವಧಿ ಎಷ್ಟು?

ಎ) 1 ವರ್ಷ

ಬಿ) 3.5 ವರ್ಷಗಳು

ಸಿ) 5 ವರ್ಷಗಳು

ಡಿ) 2.5 ವರ್ಷಗಳು

17. ನಮ್ಮ ದೇಶದ ಸಂಸದೀಯ ಮಾದರಿ ಸರ್ಕಾರವನ್ನು ಯಾವ ದೇಶದಿಂದ ಆಯ್ದುಕೊಳ್ಳಲಾಗಿದೆ?

ಎ) ಬ್ರಿಟನ್‌

ಬಿ) ಜರ್ಮನಿ

ಸಿ) ಅಮೆರಿಕ

ಡಿ) ಫ್ರಾನ್ಸ್

18. ಸಸ್ಯಗಳಲ್ಲಿ ಆಹಾರ ಸಾಗಣೆ ಮಾಡುವ ಅಂಗಾಂಶ ಯಾವುದು?

ಎ) ಕ್ಸೈಲಂ

ಬಿ) ಫ್ಲೋಯೆಂ

ಸಿ) ಕ್ಲೋರೋಫಿಲ್

ಡಿ) ಕ್ಸಾನೋಫಿಲ್

19. ಅತ್ಯಂತ ಗಟ್ಟಿಯಾದ ಅಲೋಹ ಯಾವುದು?

ಎ) ಯುರೇನಿಯಂ

ಬಿ) ಬೆಳ್ಳಿ

ಸಿ) ವಜ್ರ

ಡಿ) ಪ್ಲಾಟಿನಂ

20. ಜನಪ್ರಿಯ ‘ಬಾರೋ ಸಾಧನಕೇರಿಗೆ’ ಗೀತೆಯನ್ನು ರಚಿಸಿದವರು ಯಾರು?

ಎ) ಕುವೆಂಪು

ಬಿ) ಮೈಸೂರು ಅನಂತಸ್ವಾಮಿ

ಸಿ) ಅಂಬಿಕಾತನಯದತ್ತ

ಡಿ) ಡಾ.ಸಾ.ಶಿ.ಮರುಳಯ್ಯ

21. ರಾಮು ಸೋಮುವಿನ ವಯಸ್ಸಿಗಿಂತ 2 ಪಟ್ಟು ದೊಡ್ಡವನು ಮತ್ತು ಕಿಟ್ಟಿಗಿಂತ 4 ವರ್ಷ ದೊಡ್ಡವನು. ಈಗ ಕಿಟ್ಟಿಗೆ 8 ವರ್ಷ, ಹಾಗಾದರೆ ಸೋಮು ಕಿಟ್ಟಿಗಿಂತ ಎಷ್ಟು ವರ್ಷ ಚಿಕ್ಕವನು?

ಎ) 2 ವರ್ಷಗಳು

ಬಿ) 4 ವರ್ಷಗಳು

ಸಿ) 6 ವರ್ಷಗಳು

ಡಿ) 3 ವರ್ಷಗಳು

22. ‘ಪಾರಾದೀಪ್’ ಬಂದರು ಇರುವುದು ಯಾವ ರಾಜ್ಯದಲ್ಲಿ?

ಎ) ಪಶ್ಚಿಮ ಬಂಗಾಳ

ಬಿ) ಗುಜರಾತ್‌

ಸಿ) ಒಡಿಸ್ಸಾ

ಡಿ) ಆಂಧ್ರಪ್ರದೇಶ

23. ‘ಶಿಲ್ಪವೇದ’ ಯಾವುದರ ಭಾಗವಾಗಿದೆ?

ಎ) ಋಗ್ವೇದ

ಬಿ) ಯಜುರ್ವೇದ

ಸಿ) ಸಾಮವೇದ

ಡಿ) ಅಥರ್ವಣವೇದ

24. ‘ಭಾರತದ ನೆಪೋಲಿಯನ್’ ಎಂದು ಯಾರನ್ನು ಕರೆಯುತ್ತಾರೆ?

ಎ) ಚಕ್ರವರ್ತಿ ಅಶೋಕ

ಬಿ) ಧ್ರುವ

ಸಿ) ಇಮ್ಮಡಿ ಪುಲಿಕೇಶಿ

ಡಿ) ಸಮುದ್ರಗುಪ್ತ

25. ರಾಷ್ಟ್ರಪತಿ ಲೋಕಸಭೆಯನ್ನು ಯಾರ ಶಿಫಾರಸ್ಸಿನ ಮೇರೆಗೆ ವಿಸರ್ಜಿಸಬಹುದು?

ಎ) ಪ್ರಧಾನಮಂತ್ರಿ

ಬಿ) ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು

ಸಿ) ಲೋಕಸಭೆ ಸ್ಪೀಕರ್

ಡಿ) ರಾಜ್ಯಸಭೆ ಅಧ್ಯಕ್ಷ

ಭಾಗ–1ರ ಉತ್ತರ:

1. ಬಿ, 2. ಎ, 3. ಎ, 4. ಬಿ, 5. ಡಿ, 6. ಡಿ, 7. ಡಿ, 8. ಬಿ, 9. ಸಿ, 10. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.