ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 21:00 IST
Last Updated 19 ಅಕ್ಟೋಬರ್ 2021, 21:00 IST
   

ಭಾಗ– 79

1081. ಮಾನವ ಶರೀರದಲ್ಲಿ ಅತಿ ದೊಡ್ಡ ಮೂಳೆ ಯಾವುದು?

ಎ) ತೊಡೆ ಎಲುಬು ಬಿ) ದವಡೆ ಮೂಳೆ

ADVERTISEMENT

ಸಿ) ಹೆಗಲ ಮೂಳೆ ಡಿ) ಕಾಲರ್‌ ಮೂಳೆ

1082. ನಮ್ಮ ಗ್ಯಾಲಕ್ಸಿ ಹೆಸರೇನು?

ಎ) ಮಿಲ್ಕಿ ವರ್ಲ್ಡ್‌ ಬಿ) ಮಿಲ್ಕಿ ಗ್ಯಾಲಕ್ಸಿ

ಸಿ) ಮಿಲ್ಕಿವೇ ಡಿ) ಇವುಗಳಲ್ಲಿ ಯಾವುದೂ ಅಲ್ಲ

1083. ಕಂಪ್ಯೂಟರ್‌ ಲ್ಯಾನ್ (ಲೋಕಲ್‌ ಏರಿಯಾ ನೆಟ್ವರ್ಕ್‌) ಸಂಪರ್ಕಗೊಳಿಸಿದರೆ?

ಎ) ವೇಗವಾಗಿ ಚಲಿಸುತ್ತದೆ

ಬಿ) ಅಂತರ್ಜಾಲ ಸಂಪರ್ಕಕ್ಕೆ ಹೋಗುವುದು

ಸಿ) ಮಾಹಿತಿ ಮತ್ತು ಉಪಕರಣಗಳನ್ನು ಹಂಚಿಕೊಳ್ಳುವುದು

ಡಿ) ಇವುಗಳಲ್ಲಿ ಯಾವುದೂ ಅಲ್ಲ

1084. ಯಾವುದರ ಕೊರತೆಯಿಂದಾಗಿ ಗಂಟಲುವಾಳ ಉಂಟಾಗುತ್ತದೆ?

ಎ) ಐಯೋಡಿನ್‌ ಬಿ) ಬೇಟಾಡಿನ್‌

ಸಿ) ಕ್ಯಾಲ್ಸಿಯಂ ಡಿ) ಪೊಟ್ಯಾಸಿಯಂ

1085. ದೂರವಾಣಿಯನ್ನು ಕಂಡುಹಿಡಿದವರು ಯಾರು?

ಎ) ಥಾಮಸ್‌ಅಲ್ವಾ ಎಡಿಸನ್‌

ಬಿ) ಅಲೆಕ್ಸಾಂಡರ್‌ ವಿಲ್ಲಿಯಂ

ಸಿ) ಅಕೆರ್‌ಮನ್‌ ಡಿ) ಗ್ರಾಹಂಬೆಲ್‌

1086. ಹಗುರವಾದ ಅನಿಲ ಯಾವುದು?

ಎ) ಆಮ್ಲಜನಕ ಬಿ) ಇಂಗಾಲ

ಸಿ) ಹೈಡ್ರೋಜನ್‌ ಡಿ) ಸಾರಜನಕ

1087. ಕೌಟಿಲ್ಯನ ‘ಅರ್ಥಶಾಸ್ತ್ರ’ ಯಾವುದನ್ನು ವ್ಯವಹರಿಸುತ್ತದೆ?

ಎ) ಜ್ಯೋತಿಷ್ಯ ಬಿ) ಆಯುರ್ವೇದ

ಸಿ) ಖಗೋಳ ವಿಜ್ಞಾನ ಡಿ) ಸಾರ್ವಜನಿಕ ಆಡಳಿತ

1088. ಎವೆರೆಸ್ಟ್‌ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಯಾರು?

ಎ) ಸುನೀತಾ ವಿಲಿಯಮ್ಸ್‌ ಬಿ) ಬಚೇಂದ್ರಿಪಾಲ್

ಸಿ) ರಾಣಿಕುಮಾರಿ ಡಿ) ಪಿ.ಟಿ.ಉಷಾ

1089. 1024 ಕಿಲೋ ಬೈಟ್‌ಗಳು ಇದಕ್ಕೆ ಸಮಾನವಾಗಿರುತ್ತವೆ?

ಎ)1 ಮೆಗಾಬೈಟ್‌ (ಎಂಬಿ)

ಬಿ)1 ಕಿಲೋಬೈಟ್‌ (ಕೆಬಿ) ಸಿ)1 ಟೆರಾಬೈಟ್‌ (ಟಿಬಿ)

ಡಿ) 1 ಗೀಗಾಬೈಟ್‌ (ಜಿಬಿ)

1090. ಯಾವ ಸಸ್ಯಗಳು ಮರುಭೂಮಿಯಲ್ಲಿ ಬೆಳೆಯುತ್ತವೆ?

ಎ) ಆಲ್ಫೈನ್‌ ಬಿ) ಕಳ್ಳಿ ಸಿ) ಸಿಲ್ವರ್‌ವುಡ್‌ ಡಿ) ತೇಗ

1091. ಐತಿಹಾಸಿಕ ಸ್ಮಾರಕ ಗೋಲ್‌ಗುಂಬಜ್‌ ಯಾವ ಸ್ಥಳದಲ್ಲಿದೆ?

ಎ) ವಿಜಯನಗರ ಬಿ) ಹೈದರಾಬಾದ್‌

ಸಿ) ವೆಲ್ಲೋರ್‌ ಡಿ) ವಿಜಯಪುರ

1092. ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಚನ್ನಪಟ್ಟಣವು ಯಾವುದಕ್ಕೆ ಪ್ರಸಿದ್ಧವಾಗಿದೆ?

ಎ) ರೇಷ್ಮೆ ಬಿ) ಶ್ರೀಗಂಧ

ಸಿ) ಆಟಿಕೆಗಳು ಡಿ) ಅಗರಬತ್ತಿ

1093. ಅಧಿಕ ವರ್ಷದಲ್ಲಿ ಎಷ್ಟು ದಿನಗಳಿರುತ್ತವೆ?

ಎ) 364 ಬಿ) 365 ಸಿ) 366 ಡಿ) 367

1094. ಜೇನುನೊಣಗಳನ್ನು ಇಡುವ ಸ್ಥಳವನ್ನು ಏನೆಂದು ಕರೆಯಲಾಗುತ್ತದೆ?

ಎ) ಮೋರಿ (ಕೆನ್ನೆಲ್)‌
ಬಿ) ಪಂಜರ (ವಿಯರಿ)

ಸಿ) ಜೇನುನೊಣ (ಪಿಯರಿ)
ಡಿ) ಬಿಲ (ಬರೊವ್‌)

1095. ವಿಂಡೋಸ್‌ 95, ವಿಂಡೋಸ್‌ 98 ಮತ್ತು ವಿಂಡೋಸ್‌ ಎನ್‌.ಟಿ.ಯನ್ನು ಕರೆಯುವರು?

ಎ) ಪ್ರೊಸೆಸರ್‌ ಬಿ) ಆಪರೇಟರ್ಸ್‌

ಸಿ) ಡೊಮೈನ್‌ ಹೆಸರು
ಡಿ) ಆಪರೇಟಿಂಗ್‌ ಸಿಸ್ಟಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.