ಭಾರತೀಯ ರಿಸರ್ವ್ ಬ್ಯಾಂಕ್ 926 ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಶೇ 50ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ 20, ಗರಿಷ್ಠ 28 (ಮೀಸಲಾತಿ ಅನ್ವಯ ಸಡಿಲಿಕೆ ಇದೆ).
ನೇಮಕಾತಿ ಪ್ರಕ್ರಿಯೆ: ಆನ್ಲೈನ್ ಪರೀಕ್ಷೆ, ಭಾಷಾ ಸಾಮರ್ಥ್ಯ ಪರೀಕ್ಷೆ.
ಅರ್ಜಿ ಶುಲ್ಕ: ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹450. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಹಾಗೂ ಮಾಜಿಯೋಧ ಅಭ್ಯರ್ಥಿಗಳಿಗೆ ₹50.
ಉದ್ಯೋಗ ಸ್ಥಳ: ದೇಶದ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿಗೆ ಕೊನೆಯ ದಿನ: 16 ಜನವರಿ 2020.
ಹೆಚ್ಚಿನ ಮಾಹಿತಿಗೆ: https://bit.ly/2Zo61Lq
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.