ಕೇಂದ್ರ ಲೋಕಸೇವಾ ಆಯೋಗವು 2020ರ ಸಾಲಿನ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, 134 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳು: ವೈದ್ಯಾಧಿಕಾರಿ, ಸಂಶೋಧನಾ ಅಧಿಕಾರಿ ಹಾಗೂ ಅಂಥ್ರೊಪಾಲಜಿಸ್ಟ್.
ವಿದ್ಯಾರ್ಹತೆ: ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ (ಹುದ್ದೆಗೆ ಅನುಗುಣವಾಗಿ ವ್ಯತ್ಯಾಸಗಳಿವೆ).
ವಯೋಮಿತಿ: ಕನಿಷ್ಠ 30, ಗರಿಷ್ಠ 45.
ನೇಮಕಾತಿ ಪ್ರಕ್ರಿಯೆ: ಪರೀಕ್ಷೆ ಹಾಗೂ ಸಂದರ್ಶನ.
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ
ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳಿಗೆ
₹25.
ಉದ್ಯೋಗ ಸ್ಥಳ: ಭಾರತದ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ: 13 ಫೆಬ್ರುವರಿ 2020
ಹೆಚ್ಚಿನ ಮಾಹಿತಿಗೆ: https://bit.ly/2U4jaIP
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.