ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

 1) ಅಮೆರಿಕದ ಸಂಸ್ಕೃತಿ, ಆರ್ಥಿಕತೆ, ವೈದ್ಯಕೀಯ, ವಿಜ್ಞಾನ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಲಸಿಗರಿಗಾಗಿ ಅಮೆರಿಕ ಸರ್ಕಾರ ‘ಶ್ರೇಷ್ಠ ವಲಸಿಗರು’ ( ಗ್ರೇಟ್ ಎಮಿಗ್ರೆಂಟ್ಸ್‌ ) ಎಂಬ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಈ ಪ್ರಶಸ್ತಿಯನ್ನು ಪಡೆದ ಕನ್ನಡಿಗ ಯಾರು?   
a) ಡಾ. ವಿವೇಕ್ ಮೂರ್ತಿ
b) ಶಂತನು ನಾರಾಯಣ್
c) ನೀರಜ್ ಪಟೇಲ್
d) ಶಾಂತಿ ಹೆಗಡೆ

2) ಇತ್ತೀಚೆಗೆ ಯಾವ ದೇಶ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿತು? 
a) ಸೌದಿ ಅರೇಬಿಯಾ
b) ರಷ್ಯಾ
c) ಇಂಗ್ಲೆಂಡ್
d) ಜರ್ಮನಿ

3) ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಾನುವಾರುಗಳಿಗಾಗಿ ‘ರಕ್ತನಿಧಿ’ಯನ್ನು ಸ್ಥಾಪನೆ ಮಾಡಿದ ರಾಜ್ಯ ಯಾವುದು?   
a) ಹರಿಯಾಣ 
b) ಒಡಿಶಾ
c) ಉತ್ತರ ಪ್ರದೇಶ
d) ಗುಜರಾತ್

ADVERTISEMENT

4) ಪಶ್ಚಿಮ ಬಂಗಾಳದಲ್ಲಿ ‘ಕನ್ಯಾಶ್ರೀ ಪ್ರಕಲ್ಪ’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಶ್ವಸಂಸ್ಥೆ ‘ ಸಾರ್ವಜನಿಕ ಸೇವಾ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಯೋಜನೆ ಯಾವುದಕ್ಕೆ ಸಂಬಂಧಿಸಿದೆ? 
 a) ಹೆಣ್ಣುಮಕ್ಕಳ ಶಿಕ್ಷಣ  ಯೋಜನೆ
b) ಹೆಣ್ಣುಮಕ್ಕಳ ವಿವಾಹ ಯೋಜನೆ
c) ಹೆಣ್ಣುಮಕ್ಕಳ ಪಿಂಚಣಿ ಯೋಜನೆ
d)ಹೆಣ್ಣುಮಕ್ಕಳ ವಸತಿ ಯೋಜನೆ

5) ಪ್ರತಿ ವರ್ಷ ಜೂನ್‌ 21ನೇ ದಿನವನ್ನು ಅಂತರರಾಷ್ಟ್ರೀಯ ‘ಯೋಗದಿನ’ವನ್ನಾಗಿ ಆಚರಣೆ ಮಾಡಲಾಗುತ್ತದೆ. ಜೂನ್‌ 23ನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ
a) ಅಂತರರಾಷ್ಟ್ರೀಯ ಕ್ರೀಡಾ ದಿನ
‌b) ಅಂತರರಾಷ್ಟ್ರೀಯ ಆರೋಗ್ಯ ದಿನ
c) ಅಂತರರಾಷ್ಟ್ರೀಯ ಒಲಿಂಪಿಕ್ ದಿನ
d) ಅಂತರರಾಷ್ಟ್ರೀಯ ಮಾನವಹಕ್ಕುಗಳ ದಿನ

6) ಇಸ್ರೇಲ್ ಸಾಹಿತಿ ಡೇವಿಡ್ ಗ್ರಾಸ್‌ಮನ್‌ ಅವರು ಪ್ರಸಕ್ತ ಸಾಲಿನ ಮ್ಯಾನ್‌ – ಬುಕರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರ ಕೃತಿಯನ್ನು ಗುರುತಿಸಿ?  
a) ಎ ಹಾರ್ಸ್ ವಾಕ್ಸ್ ಇನ್‌ ಟೂ ಎ ಬಾರ್
b) ಸೀ ಅಂಡರ್: ಲವ್
c) ದ ಯಲ್ಲೋ ವಿಂಡ್
d) ಮೇಲಿನ ಎಲ್ಲವು

7) ದೇಶದ ಮೊಟ್ಟಮೊದಲ ಖಾಸಗಿ ರೈಲು ನಿಲ್ದಾಣವನ್ನು ‘ಹಬೀಬ್ ಗಂಜ್‌’ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಳ ಯಾವ ರಾಜ್ಯದಲ್ಲಿದೆ? 
a) ಹರಿಯಾಣ 
b) ಗುಜರಾತ್‌
c) ಮಧ್ಯಪ್ರದೇಶ
d) ಕೇರಳ

8) ಪ್ರೀತ್‌ಕೌರ್‌ ಗಿಲ್‌ ಅವರು ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ ಮೊಟ್ಟಮೊದಲ ಸಿಖ್ ಮಹಿಳೆಯಾಗಿದ್ದಾರೆ. ಇವರು ಯಾವ ರಾಜಕೀಯ ಪಕ್ಷಕ್ಕೆ ಸೇರಿದ್ದಾರೆ? 
a) ಲೇಬರ್‌ ಪಕ್ಷ
b) ಕನ್ಸರ್ವೇಟಿವ್ ಪಕ್ಷ
c) ಡೆಮಾಕ್ರಟಿಕ್‌ ಪಕ್ಷ
‌d) ರಿಪಬ್ಲಿಕ್ ಪಕ್ಷ

9) 2017ರ ಮೇ ತಿಂಗಳಲ್ಲಿ ಈ ಕೆಳಕಂಡ ಯಾವ ದೇಶದಲ್ಲಿ ಆರ್ಚರಿ ವಿಶ್ವಕಪ್‌ ಟೂರ್ನಿಯನ್ನು ನಡೆಸಲಾಯಿತು?
a) ಭಾರತ–ನವದೆಹಲಿ
‌b) ಚೀನಾ–ಶಾಂಘೈ
c) ಅಮೆರಿಕ– ನ್ಯೂಯಾರ್ಕ್
d) ಜಪಾನ್‌–ಟೋಕಿಯೊ

10) ವಿಶ್ವದ ಅತ್ಯಂತ ಅಳವಾದ ಸಿಹಿನೀರಿನ ಬೈಕಲ್ ಸರೋವರ ಯಾವ ದೇಶದಲ್ಲಿದೆ?
a) ರಷ್ಯಾ                   b) ಜರ್ಮನಿ
c) ಫಿನ್‌ಲ್ಯಾಂಡ್         d) ಈಜಿಫ್ಟ್‌

ಉತ್ತರಗಳು.... 1–a, 2–d, 3–b, 4–a, 5–c, 6–d, 7–c, 8–a, 9–b, 10–a v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.