ADVERTISEMENT

ಪುತ್ರಿಯ ಒತ್ತಾಯಕ್ಕೆ ಮಣಿದು 55ನೇ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಶಾಸಕ

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 4:50 IST
Last Updated 20 ಜುಲೈ 2018, 4:50 IST
ಪರೀಕ್ಷೆ ಬರೆದ ಶಾಸಕ ಪೂಲ್‌ ಸಿಂಗ್‌(ಒಳ ಚಿತ್ರ)
ಪರೀಕ್ಷೆ ಬರೆದ ಶಾಸಕ ಪೂಲ್‌ ಸಿಂಗ್‌(ಒಳ ಚಿತ್ರ)   

ಉದಯ್‌ಪುರ:ಶಿಕ್ಷಣ ಎಂಬುದು ನಿರಂತರ ಕಲಿಕೆ. ಅದಕ್ಕೆ ಕೊನೆ ಎಂಬುದೇ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ರಾಜಸ್ಥಾನದ ಉದಯಪುರದ ಶಾಸಕ.

ಇವರದ್ದು ಜ್ಞಾನಾರ್ಜನೆಗಾಗಿ ಮಾತ್ರ ಓದಲ್ಲ. ಜತೆಗೆ, ಪದವಿ ಗಳಿಕೆಗಾಗಿ! ಅದಕ್ಕೂ ಮೇಲಾಗಿ ಪುತ್ತಿಯ ಮನವಿ, ಒತ್ತಾಯಕ್ಕೆ ಮಣಿದು ಶಿಕ್ಷಣ ಮುಂದುವರಿಸುವ ನಿರ್ಧಾರ ಮಾಡಿದ್ದಾರೆ.

ಹೌದು, ಉದಯಪುರ ಗ್ರಾಮೀಣ ಕ್ಷೇತ್ರದ ಶಾಸಕ ಪೂಲ್ ಸಿಂಗ್‌ ಮೀನಾ ಅವರು ತಮ್ಮ 55ನೇ ವಯಸ್ಸಿನಲ್ಲಿ ಪದವಿ ಶಿಕ್ಷಣದ ಮೊದಲ ವರ್ಷದ ಪರೀಕ್ಷೆ ಬರೆದಿದ್ದಾರೆ.

ADVERTISEMENT

ಪೂಲ್‌ ಸಿಂಗ್‌ ಅವರು ಗುರುವಾರ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಈ ವೇಳೆ ಪ್ರತಿಕ್ರಿಯೆ ನೀಡಿರುವ ಪೂಲ್‌ ಸಿಂಗ್‌ ಮೀನಾ ಅವರು, ‘ನನ್ನ ಮಗಳು ಶಿಕ್ಷಣವನ್ನು ಮುಂದುವರಿಸುವಂತೆ ನನ್ನನ್ನು ಕೇಳಿಕೊಂಡಳು. ನನಗೆ ವಯಸ್ಸಾಗಿದೆ ಎಂದು ಹೇಳಿದೆ. ಅಂತಿಮವಾಗಿ ನನ್ನ ಪುತ್ರಿ ಪರೀಕ್ಷೆ ಬರೆಯುವಂತೆ ಮನವರಿಕೆ ಮಾಡಿದಳು’ ಎಂದು ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.

‘ನಾನು ಮುಂದಿನ ದಿನಗಳಲ್ಲಿ ಪಿ.ಎಚ್‌ಡಿ ಮಾಡಲು ಬಯಸಿದ್ದೇನೆ’ ಎಂದು ಅವರು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.