ADVERTISEMENT

5G ತಂತ್ರಜ್ಞಾನದ ಉಪಯೋಗಗಳು

ಆಯೆಷಾ ಟಿ ಫರ್ಜಾನ
Published 25 ಮೇ 2022, 19:30 IST
Last Updated 25 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

5G ನೆಟ್‌ವರ್ಕ್ ತಂತ್ರಜ್ಞಾನವು ಅಧಿಕ ವೇಗ (ಗರಿಷ್ಠ ಜಿಬಿಪಿಎಸ್ ಡೇಟಾ ವೇಗ), ವಿಳಂಬವಿಲ್ಲದ (ಅಲ್ಟ್ರಾ-ಲೋ ಲೇಟೆನ್ಸಿ), ಹೆಚ್ಚಿನ ವಿಶ್ವಾಸಾರ್ಹತೆಯ, ಬೃಹತ್ ನೆಟ್‌ವರ್ಕ್ ಸಾಮರ್ಥ್ಯ, ಹೆಚ್ಚಿನ ಲಭ್ಯತೆಯೊಂದಿಗೆ ಬಳಕೆದಾರರಿಗೆ ಏಕರೂಪದ ಬಳಕೆಯ ಅನುಭವವನ್ನು ತಲುಪಿಸುತ್ತದೆ.

ಹೆಚ್ಚಿನ ಕಾರ್ಯಕ್ಷಮತೆ ಮತ್ತು ದಕ್ಷತೆಯು ಹೊಸ ಬಳಕೆದಾರರಿಗೆ ಸುಲಲಿತ ಅನುಭವಗಳನ್ನು ನೀಡುತ್ತದೆ ಮತ್ತು ಕೈಗಾರಿಕೋದ್ಯಮದಲ್ಲಿ ಈ ತಂತ್ರಜ್ಞಾನದ ಬಳಕೆಯು ಉತ್ಪಾದನಾ ಸಾಮರ್ಥ್ಯವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಬಹುದು.

5 ತಂತ್ರಜ್ಞಾನದ ವೈಶಿಷ್ಟ್ಯಗಳು

ADVERTISEMENT

ಮಿಲಿಮೀಟರ್ ತರಂಗಾಂತರದಲ್ಲಿ (30-300 GHz) ಕಾರ್ಯನಿರ್ವಹಿಸುವುದರಿಂದ, ಇದು ಬೃಹತ್ ಪ್ರಮಾಣದ ಡೇಟಾ (Big Data)ವನ್ನು ಅತ್ಯಂತ ಹೆಚ್ಚಿನ ವೇಗದಲ್ಲಿ ಪ್ರೊಸೆಸ್ ಮಾಡುವ ಶಕ್ತಿಯನ್ನು ಹೊಂದಿದೆ.

ಬೃಹತ್‌ ಡೇಟಾಗೆ ಉದಾಹರಣೆ:

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದಲ್ಲಿ ಆಟಗಾರನೊಬ್ಬ ಮೈದಾನದಲ್ಲಿ ಆಡುತ್ತಿರುವಾಗಲೇ, ಆತ ಹಿಂದಿನ ಎಲ್ಲಾ ಆಟಗಾರರ ದಾಖಲೆಗಳಿಗೆ ಸರಿಸಮನಾಗಲು ಅಥವಾ ದಾಖಲೆಯನ್ನು ಮುರಿಯಬೇಕಾದರೆ ಇನ್ನೆಷ್ಟು ರನ್‌ಗಳನ್ನು ಗಳಿಸಬೇಕಾಗಬಹುದು ಎಂಬ ಮಾಹಿತಿಯನ್ನು ಕ್ಷಣಗಳಲ್ಲಿ ನೀಡಲಾಗುತ್ತದೆ. ಈ ಮಾಹಿತಿಯು ಕ್ರೀಡಾಲೋಕಕ್ಕೆ ಬಹಳ ಮಹತ್ವದ್ದಾಗಿರುತ್ತದೆ.

ಸಾರ್ವಜನಿಕ ವಲಯ, ವ್ಯಾಪಾರ ಮತ್ತು ನಿತ್ಯ ಬಳಕೆಗೆ 5G ಇಂದಿನ 4G ನೆಟ್‌ವರ್ಕ್‌ಗಳಿಗಿಂತ ಹಲವು ರೀತಿಯ ವಿಶೇಷ ಪ್ರಯೋಜನಗಳನ್ನು ಒದಗಿಸುವ ಭರವಸೆ ನೀಡುತ್ತದೆ.

ಇಂಟರ್ನೆಟ್ ಆಫ್ ಥಿಂಗ್ಸ್ (IoT)

ಉದಾ: ಮನೆಯೊಳಗೆ ಮೊಬೈಲ್‌ನಿಂದಲೇ ಹವಾನಿಯಂತ್ರಿತ ಯಂತ್ರ (ಎಸಿ), ಡೋರ್ ಲಾಕ್‌ಗಳು ಮತ್ತು ವಾಷಿಂಗ್ ಮಷಿನ್‌ನಂತಹ ಉಪಕರಣಗಳೆಲ್ಲವನ್ನೂ ನಿಯಂತ್ರಿಸಬಹುದು. ಮೊಬೈಲ್‌ಗೆ ಲಿಂಕ್ ಮಾಡಿಕೊಂಡು ದೂರದಲ್ಲಿದ್ದರೂ ಮನೆಯೊಳಗಿನ ಈ ಉಪಕರಣಗಳನ್ನು ನಿಯಂತ್ರಿಸಬಹುದು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್

ಸ್ಮಾರ್ಟ್ ಮೀಟರ್‌ಗಳು, ಸೆನ್ಸರ್‌ಗಳು ಮತ್ತು ಇತರ ವಿಧಾನಗಳ ಮೂಲಕ ನೀರು ಸರಬರಾಜು, ವಿದ್ಯುತ್ ಸರಬರಾಜು, ಮೂಲಸೌಕರ್ಯಗಳಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ 5G ವೇಗದ ತಂತ್ರಜ್ಞಾನ ತನ್ನದೇ ರೀತಿಯಲ್ಲಿ ನೆರವು ನೀಡುತ್ತದೆ. ಜೊತೆಗೆ, ಇದರಿಂದ ಅನವಶ್ಯಕವಾಗಿ ಹಣ ವ್ಯಯವಾಗುವುದನ್ನು ಉಳಿಸಬಹುದು.

ಚಲನಚಿತ್ರ ಉದ್ದಿಮೆ: ಬೃಹತ್ ಚಲನಚಿತ್ರ ನಿರ್ಮಾಣಕ್ಕೆ ಹೆಚ್ಚಿನ‌ ಸಂಖ್ಯೆಯ ಸಿಬ್ಬಂದಿ, ದುಬಾರಿ ಉಪಕರಣಗಳು ಅಗತ್ಯ. ಇದಕ್ಕಾಗಿ ದೊಡ್ಡ ಮಟ್ಟದ ಹಣಹೂಡಿಕೆಯ ಅವಶ್ಯಕತೆ ಇದೆ. ಆದರೆ ಈ 5G ತಂತ್ರಜ್ಞಾನದ ಬಳಕೆಯಿಂದ ಇವೆಲ್ಲವನ್ನೂ ಕಡಿತಗೊಳಿಸಬಹುದು.

5G ಸಂಪರ್ಕದ ನೆರವಿನೊಂದಿಗೆ ಆಗ್ಮೆಂಟೆಡ್ ರಿಯಾಲಿಟಿ, ಅಂದರೆ ಕಣ್ಣಿಗೆ ಕನ್ನಡಕದಂತಹ ವಸ್ತುವನ್ನು ಧರಿಸಿದಾಗ ಸಂಪೂರ್ಣ ನಮ್ಮ ಕಣ್ಣಿನ ದೃಷ್ಟಿ ಹೊರಳುವಷ್ಟೇ ವಿಶಾಲವಾಗಿ ಪರದೆಗಳನ್ನು ನೋಡಬಹುದು (ಹೆಡ್ ಫೋನ್‌ಗಳನ್ನು ಕಿವಿಗೆ ಧರಿಸಿದಾಗ ಆಲಿಸುವುದರಲ್ಲಿ ಸಿಗುವ ವಿಶೇಷ ಅನುಕೂಲಗಳ ಹಾಗೆ). ಗೇಮ್ಸ್ ಆಡುವಲ್ಲಿ‌ ಮತ್ತು ಸಂಶೋಧನಾತ್ಮಕ ಕಲಿಕೆಯಲ್ಲಿ‌ ಇದರ ಬಳಕೆಯು ಹೆಚ್ಚಿರುತ್ತದೆ. ಅಂತಹದೇ ಮಾದರಿಯ ವರ್ಚುವಲ್ ರಿಯಾಲಿಟಿಯಂತಹ ರಿಮೋಟ್ ಮೂಲಕ ಸಾಧಿಸಬಹುದಾದ ಅಪ್ಲಿಕೇಶನ್‌ಗಳನ್ನು 5ಜಿ ಲಭ್ಯವಾಗಿಸುತ್ತದೆ, ಮಾತ್ರವಲ್ಲ, ಸುಲಭವಾಗಿ ಕೈಗೆಟುಕುವಂತೆ ಮಾಡುತ್ತದೆ.

ಬಳಕೆದಾರನಿಗೆ ಸ್ಮಾರ್ಟ್ ಫೋನ್‌ನ ಅತ್ಯದ್ಭುತ ಬಳಕೆಯ ಅನುಭವವನ್ನು ನೀಡುತ್ತದೆ.

ಕೃಷಿ ನಿಗಾ ವ್ಯವಸ್ಥೆ

5ಜಿ ತರಂಗಾಂತರ, ಕೃಷಿ ವಲಯಕ್ಕೆ ಬೇಕಾಗುವ ನೀರು, ಔಷಧ ಸಿಂಪಡಣೆ, ಕ್ರಿಮಿನಾಶಕದ ಅವಶ್ಯಕತೆ, ನೈಸರ್ಗಿಕ ಅವಘಡಗಳಾದಾಗ ಫಸಲು ನಷ್ಟದ ಸಮೀಕ್ಷೆ ಮತ್ತಿತರ ವರದಿಗಳನ್ನು ಡ್ರೋಣ್‌ ಸಹಾಯದಿಂದ ಬಹಳ ವೇಗವಾಗಿ ನೀಡಲು ನೆರವಾಗುತ್ತದೆ. ಹಾಗೆಯೇ ವಿಳಂಬದ ಕಾರಣದಿಂದ ಬೆಳೆಗಾರನಿಗೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.

ಟೆಲಿ ಮೆಡಿಸಿನ್

ವೈದ್ಯರನ್ನು ನೇರವಾಗಿ ಭೇಟಿಯಾಗಿ ಚಿಕಿತ್ಸೆ ಪಡೆಯಲಾಗದಿದ್ದರೂ, ವಿಡಿಯೊ ಕಾಲ್ ಮೂಲಕ ಆರೋಗ್ಯ ಸಂಬಂಧಿ ಸಮಸ್ಯೆಗಳ ಪರಿಹಾರಗಳನ್ನು ಪಡೆಯಬಹುದು. ವೈದ್ಯರು ವಿಡಿಯೊ ಕಾಲಿಂಗ್ ಮೂಲಕವೂ ದೂರಪ್ರದೇಶದ ರೋಗಿಯ ಆರೋಗ್ಯದ ಏರುಪೇರಿನ ನಿಗಾವಣೆಯನ್ನೂ ಮಾಡುತ್ತಿರಬಹುದು. ಈ ಸಂವಹನ ಪ್ರಕ್ರಿಯೆಯ ಸುಧಾರಣೆಗೆ 5ಜಿ ತಂತ್ರಜ್ಞಾನ ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.