ADVERTISEMENT

ಅಭಿನಯ, ಆ್ಯಂಕರಿಂಗ್ ಡಿಪ್ಲೋಮಾ ಕೋರ್ಸ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:30 IST
Last Updated 6 ಆಗಸ್ಟ್ 2019, 19:30 IST
   

ಎಂಟು ದಶಕಗಳ ಇತಿಹಾಸವನ್ನು ಪಡೆದಿರುವ ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರ ಈ ಸಾಲಿನಿಂದ ಎರಡು ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತಿದೆ.

ಆ್ಯಂಕರಿಂಗ್ ಮತ್ತು ಸ್ಕ್ರಿಪ್ಟ್‌ ರೈಟಿಂಗ್ ಕೋರ್ಸ್

ಇಂದು ಜಗತ್ತಿನಾದ್ಯಂತ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮ ಕ್ಷೇತ್ರದಲ್ಲಿ ತ್ವರಿತ ಗತಿಯಲ್ಲಿ ಬದಲಾವಣೆಗಳು ನಡೆಯುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ವಿದ್ಯುನ್ಮಾನ ಕ್ಷೇತ್ರ ಹೊಸ ಸ್ವರೂಪವನ್ನು ಪಡೆದುಕೊಂಡಿರುವಂತೆ ಆ್ಯಂಕರಿಂಗ್ ಮತ್ತು ಸ್ಕ್ರಿಪ್ಟ್ ರೈಟಿಂಗ್‌ನಲ್ಲಿ ಹಲವು ಹೊಸ ಶಾಖೆಗಳು ಆರಂಭವಾಗಿವೆ. ಈ ಹೊಸ ಸಾಧ್ಯತೆಗಳಿಗೆ ಅನುಗುಣವಾಗಿ ಪ್ರಸ್ತುತ ಕೋರ್ಸ್ ರೂಪಿಸಲಾಗಿದ್ದು ಇದು ಉದ್ಯೋಗ ಅವಕಾಶಗಳ ವಿಫುಲ ಸಾಧ್ಯತೆಯನ್ನು ಒದಗಿಸಲಿದೆ. ಒಂದೇ ಕೋರ್ಸ್‌ನಲ್ಲಿ ಹಲವು ಮಾದರಿಯ ಕಲಿಕೆಗಳು ಸಾಧ್ಯವಾಗುವ ಅಪರೂಪದ ಅವಕಾಶ ಇದು. ವಿವಿಧ ಮಾಧ್ಯಮಗಳಲ್ಲಿ ‍ಕೆಲಸ ಮಾಡಿರುವ ಪರಿಣತರು ಮಾರ್ಗದರ್ಶನವನ್ನು ನೀಡುವರು.

ADVERTISEMENT

ಅಭಿನಯದಲ್ಲಿ ಡಿಪ್ಲೋಮಾ

ನಾಡಿನ ಹಲವೆಡೆ ಅಭಿನಯ ತರಬೇತಿ ಶಾಲೆಗಳಿದ್ದರೂ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಹೀಗೆ ಮೂರು ಕ್ಷೇತ್ರಗಳಲ್ಲಿ ತರಬೇತಿ ನೀಡುವ ಸಂಸ್ಥೆಗಳ ಕೊರತೆ ಇದೆ. ಇದು ಒಂದು ವರ್ಷದ ಪರಿಪೂರ್ಣ ಕೋರ್ಸ್ ಆಗಿದ್ದು ಕೇವಲ ನಟ– ನಟಿಯನ್ನು ಮಾತ್ರವಲ್ಲದೆ ಮೂರೂ ಕ್ಷೇತ್ರಕ್ಕೆ ಸಲ್ಲುವ ಕೌಶಲವನ್ನು ಕಲಿಸಲಿದೆ. ಭಾರತೀಯ ವಿದ್ಯಾ ಭವನವು ಕೆ.ವಿ. ಸುಬ್ಬಣ್ಣ ಆಪ್ತ ರಂಗ ಮಂದಿರದ ಸಹಯೋಗದಲ್ಲಿ ಈ ಒಂದು ವರ್ಷದ ಡಿಪ್ಲೋಮಾ ಕೋರ್ಸ್ ರೂಪಿಸಿದೆ. ಸ್ವತಃ ರಂಗ ಕ್ಷೇತ್ರದ ಪರಿಣತರು ಎನ್ನಿಸಿಕೊಂಡಿರುವವರು ಬಿ.ಆರ್. ಗೋಪಿನಾಥ್ ಈ ಕೋರ್ಸ್‌ನ ಸಂಪೂರ್ಣ ಹೊಣೆ ಹೊತ್ತಿದ್ದು, ಜಾಗತಿಕ ಮನ್ನಣೆ ಪಡೆದ ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಎಚ್.ಜಿ. ದತ್ತಾತ್ರೇಯ ಹೊಸ ಪೀಳಿಗೆಯ ಬೇಡಿಕೆಯ ತಾರೆಯರಾದ ಹರಿಪ್ರಿಯ, ಶೃತಿ ಹರಿಹರನ್, ಮಾಧ್ಯಮ ಕ್ಷೇತ್ರದ ಪರಿಣತ ಅಬ್ದುಲ್ ರೆಹಮಾನ್ ಪಾಷಾ, ವಿವಿಧ ಕ್ಷೇತ್ರದ ಪರಿಣತರಾದ ಎನ್.ಎಸ್. ಶ್ರೀಧರ ಮೂರ್ತಿ, ಶ್ರೀಪತಿ ಮಂಜಲಬೈಲು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ್ ಮೊದಲಾದವರು ಇಲ್ಲಿ ತರಬೇತಿ ನೀಡಲಿದ್ದಾರೆ.

ವಿವರಗಳಿಗೆ: 7975814252, 9980055864.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.