ADVERTISEMENT

ಮೋಷನ್ ಮ್ಯಾಥ್ಸ್: ಕಪ್‌ಕೇಕ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 18:45 IST
Last Updated 20 ಆಗಸ್ಟ್ 2019, 18:45 IST
Cupcake_build
Cupcake_build   

ಮೋಷನ್ ಮ್ಯಾಥ್ಸ್: ಕಪ್‌ಕೇಕ್‌

ಗಣಿತ ಎಂದರೆ ಕಬ್ಬಿಣ ಕಡಲೆ ಎಂಬುದು ಇಂದಿಗೂ ಅನೇಕ ವಿದ್ಯಾರ್ಥಿಗಳ ಅಭಿಪ್ರಾಯ. ಅನೇಕ ಮಕ್ಕಳು ಶಾಲೆಯಿಂದ ಹೊರ ಹೋದ ಮೇಲೆ ಗಣಿತದ ಗುಣಾಕಾರ, ಭಾಗಾಕಾರ ಕಲಿಯಲು ಹಿಂದೇಟು ಹಾಕುತ್ತಾರೆ. ಮನೆಯಲ್ಲಿ ಗಣಿತದ ವಿಷಯವನ್ನು ಅಭ್ಯಾಸ ಮಾಡುವುದು ಅವರಿಗೆ ಕಷ್ಟ. ಆದರೆ ಮಕ್ಕಳಲ್ಲಿ ಗಣಿತ ಗುಮ್ಮನ ಭಯ ಹೋಗಲಾಡಿಸಿ ಉತ್ಸಾಹದಲ್ಲಿ ಗಣಿತ ಕಲಿಯುವಂತೆ ಮಾಡುವ ಸಲುವಾಗಿ ಈ ಆ್ಯಪ್ ಅನ್ನು ರಚಿಸಲಾಗಿದೆ. ಕಪ್‌ಕೇಕ್ ಮಾರಾಟ ಮಾಡುವ ವ್ಯವಹಾರದ ಮೂಲಕ ಸುಲಭವಾಗಿ ಗಣಿತವನ್ನು ಕಲಿಯಬಹುದಾಗಿದೆ. ಪ್ರತಿ ಕಪ್‌ಕೇಕ್‌ನ ಬೆಲೆ, ಆರ್ಡರ್‌ಗಳನ್ನು ಪೂರೈಸುವುದು, ಬ್ಯುಸಿನೆಸ್‌ಗೆ ಮಾಡಿದ ಸಾಲವನ್ನು ಹಿಂದಿರುಗಿಸುವುದು, ಬೇಕರಿಯನ್ನು ಹೇಗೆ ಯಶಸ್ವಿಯಾಗಿ ನಡೆಸುವುದು ಎಂಬುದೆನಲ್ಲಾ ಮ್ಯಾಥ್ ಮೂಷನ್ ಮೂಲಕ ಕಲಿಯಬಹುದು. ಇದರಲ್ಲಿ ಪ್ರಾಥಮಿಕ ಶಾಲಾ ಹಂತದ ಗಣಿತ ಪಾಠಗಳನ್ನು ಸುಲಭವಾಗಿ ಕಲಿಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT