ಮೂಡುಬಿದಿರೆ (ದಕ್ಷಿಣ ಕನ್ನಡ): ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್ ಸತತ ಐದನೇ ಬಾರಿಗೆ ಶೇ 100 ಫಲಿತಾಂಶ ದಾಖಲಿಸಿದೆ.
ಸಂಸ್ಥೆಯ 29 ವಿದ್ಯಾರ್ಥಿಗಳು ಶೇ 95ಕ್ಕಿಂತ ಅಧಿಕ ಅಂಕ ಪಡೆದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಒಂದೇ ಶಾಲೆಯಿಂದ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನದಲ್ಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಮೋಘ ಬಿಳ್ಳೂರ, ದೀಕ್ಷಾ ಎಚ್.ಕೆ. (ಶೇ 98), ಹರ್ಷಿತಾ ಎಸ್.ಪಾಟೀಲ, ಪ್ರಜ್ವಲ್ ಕುಮಾರ್ ಬಿರಾದಾರ, ಅದಿತಿ ಭಟ್,ಸಂದೀಪ್, ಶಿವಾನಂದ (ಶೇ 97),ಮನಸ್ವಿ, ದರ್ಶ ಧಾರ್ಮಿಕ್, ಚೇತನ್ ಎಸ್., ಚಿನ್ಮಯಿ ಎಂ., ನಿಸರ್ಗ ಎಸ್., ಅನ್ವಿತ್ ಆರ್.,ಸಮರ್ಥ ಜೋಷಿ, ತನುಶ್ರೀ ಜಿ.ಆರ್., ಪೂನಮ್ ಸಾತಿ, ಅನುಷಾ ರಾಜೇಂದ್ರ (ಶೇ 96), ಕಿರಣ್ ಸಾರ್ವೆ, ಕಾರ್ತಿಕ್ ಎಸ್.,ಅಭಿಜ್ಞಾ ರಾವ್, ಅರುಂಧತಿ ಪಾಟೀಲ, ಸಾಧನಾ ಎಸ್., ಪ್ರಶಾಂತ್ ಹಿರೇಮಠ, ಪೂರ್ವಿಕ್ ಗೌಡ, ವೀರೇಶ್, ದೀಪಿಕಾ ಎಸ್.,ರೋಷನ್, ಹೇಮಸ್ವಿ ಸಿ., ಅಕುಲ್ ರವಿ (ಶೇ 95) ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಸಂಸ್ಕೃತದಲ್ಲಿ ನಾಲ್ವರು ವಿದ್ಯಾರ್ಥಿಗಳು, ಕನ್ನಡದಲ್ಲಿ ಮೂವರು, ವಿಜ್ಞಾನದಲ್ಲಿ ಇಬ್ಬರು ಪೂರ್ಣ ಅಂಕ ಗಳಿಸಿದ್ದಾರೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ಮೊಹ್ಮದ್ ಶಫಿ ಶೇಖ್, ಉಪಪ್ರಾಂಶುಪಾಲ ಬಿನೂ ಮ್ಯಾಥ್ಯೂ, ಶೈಕ್ಷಣಿಕ ಸಂಯೋಜಕಿ ಶೈಲಜಾ ರಾವ್, ಆಡಳಿತಾಧಿಕಾರಿ ಪ್ರೀತಂ ಕುಂದರ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.