ADVERTISEMENT

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇಂದು, ನಾಳೆ ಸಿಇಟಿ

​ಪ್ರಜಾವಾಣಿ ವಾರ್ತೆ
Published 19 ಮೇ 2023, 23:44 IST
Last Updated 19 ಮೇ 2023, 23:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಶನಿವಾರ ಮತ್ತು ಭಾನುವಾರ ದಂದು ನಡೆಯಲಿದೆ.

ಶನಿವಾರದಂದು ಜೀವ ವಿಜ್ಞಾನ, ಗಣಿತ, ಭಾನುವಾರ ಭೌತ ವಿಜ್ಞಾನ, ರಸಾಯನ ವಿಜ್ಞಾನ ವಿಷಯದ ಪರೀಕ್ಷೆಗಳು ಜರುಗಲಿವೆ.

ಇದೇ 22ರಂದು ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ, ಮಂಗಳೂರು ಕೇಂದ್ರಗಳಲ್ಲಿ ಬೆಳಿಗ್ಗೆ 11.30ರಿಂದ 12.30ರವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

ADVERTISEMENT

ಅಂಕಿ ಅಂಶಗಳು

 2.60 ಲಕ್ಷ

ಹೆಸರು ನೋಂದಾಯಿಸಿಕೊಂಡವರು

592

ರಾಜ್ಯದ ಪರೀಕ್ಷಾ ಕೇಂದ್ರಗಳು

121

ಬೆಂಗಳೂರಿನ ಕೇಂದ್ರಗಳು

–––––––––––

ಪರೀಕ್ಷಾ ಸಮಯ: ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.50ರವರೆಗೆ

ವಿಷಯಗಳು: ಜೀವ ವಿಜ್ಞಾನ, ಗಣಿತ, ಭೌತ ವಿಜ್ಞಾನ, ರಸಾಯನ ವಿಜ್ಞಾನ.

–––––––––––

ಯಾವುದಕ್ಕೆ ಅವಕಾಶ ಇದೆ?

* ನೀಲಿ ಅಥವಾ ಕಪ್ಪು ಬಾಲ್‌ ಪಾಯಿಂಟ್‌ ಪೆನ್ನು

* ಪ್ರವೇಶ ಪತ್ರದ ಜತೆಗೆ ಭಾವಚಿತ್ರ ಇರುವ ಒಂದು ಗುರುತುಪತ್ರ (ಆಧಾರ್, ಪ್ಯಾನ್‌ ಇತ್ಯಾದಿ)

* ಪರೀಕ್ಷೆ ಆರಂಭಕ್ಕೂ ಎರಡು ಗಂಟೆ ಮೊದಲು ಕೇಂದ್ರದಲ್ಲಿರಬೇಕು.

ಯಾವುದಕ್ಕೆ ಅವಕಾಶ ಇಲ್ಲ?

* ಕೈಗಡಿಯಾರ

* ಟ್ಯಾಬ್ಲೆಟ್‌, ಮೊಬೈಲ್‌, ಕ್ಯಾಲ್ಕುಲೇಟರ್‌, ಬ್ಲೂಟೂಥ್

* ಉದ್ದ ತೋಳಿನ ಉಡುಪು

* ಶೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.