ADVERTISEMENT

ಭಾರತದಲ್ಲಿ ಅಮೆರಿಕದ ಮೊದಲ ವಿವಿ ಸ್ಥಾಪನೆಗೆ ಅಸ್ತು

ಪಿಟಿಐ
Published 8 ಮೇ 2025, 21:03 IST
Last Updated 8 ಮೇ 2025, 21:03 IST
   

ನವದೆಹಲಿ: ಷಿಕಾಗೊದ ಇಲಿನಾಯ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿಶ್ವವಿದ್ಯಾಲಯವು ಭಾರತದಲ್ಲಿ ತನ್ನ ಕ್ಯಾಂಪಸ್‌ ತೆರೆಯಲು ವಿಶ್ವವಿದ್ಯಾಲಯಗಳ ಅನುದಾನ ಆಯೋಗದಿಂದ (ಯುಜಿಸಿ) ಅನುಮೋದನೆ ಪಡೆದಿದೆ. ಈ ಮೂಲಕ ಭಾರತದಲ್ಲಿ ಕ್ಯಾಂಪಸ್‌ ತೆರೆಯಲಿರುವ ಅಮೆರಿಕದ ಪ್ರಥಮ ವಿವಿ ಎಂಬ ಖ್ಯಾತಿಗೂ ಪಾತ್ರವಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. 

ಮುಂಬೈನಲ್ಲಿ ಇಲಿನಾಯ್ಸ್‌ ಕ್ಯಾಂಪಸ್‌ ಸ್ಥಾಪನೆಯಾಗಲಿದ್ದು, 2026ರಲ್ಲಿ ವಿವಿ ಉದ್ಘಾಟನೆಯಾಗಲಿದೆ. ಬಹುಬೇಡಿಕೆಯ ಕ್ಷೇತ್ರಗಳಾದ ಕಂಪ್ಯೂಟರ್‌ ಸೈನ್ಸ್‌, ಇಂಜಿನಿಯರಿಂಗ್‌ ಹಾಗೂ ಬಿಸಿನೆಸ್‌ ವಿಭಾಗಗಳಲ್ಲಿ ಪದವಿ ಪೂರ್ವ ಮತ್ತು ಪದವಿ ಕೋರ್ಸ್‌ಗಳನ್ನು ಇಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗಲಿದೆ ಎಂದು ವಿವಿಯ ಅಧ್ಯಕ್ಷ ರಾಜ್‌ ಎಚಂಬಾಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT