ADVERTISEMENT

CISCE 10,12ನೇ ತರಗತಿ ಪರೀಕ್ಷೆ: ಜುಲೈ 1 ರಿಂದ 14ರವರೆಗೆ

ಪಿಟಿಐ
Published 22 ಮೇ 2020, 12:52 IST
Last Updated 22 ಮೇ 2020, 12:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬಾಕಿ ಉಳಿದಿರುವ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಜುಲೈ 1 ರಿಂದ 14ರವರೆಗೆ ನಡೆಸುವುದಾಗಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ ಎಕ್ಸಾಮಿನೇಷನ್ಸ್‌ ಮಂಡಳಿ(ಸಿಐಎಸ್‌ಸಿಇ) ಶುಕ್ರವಾರ ತಿಳಿಸಿದೆ.

ದೇಶವ್ಯಾಪಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

‘ಜುಲೈ 2 ರಿಂದ 12ರವರೆಗೆ 12ನೇ ತರಗತಿ ಪರೀಕ್ಷೆಗಳು ಹಾಗೂ ಜುಲೈ 1 ರಿಂದ 14ರವರೆಗೆ ಹತ್ತನೇ ತರಗತಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಯಾನಿಟೈಸರ್‌ಗಳನ್ನು ತರಬೇಕು ಮತ್ತು ಮುಖಗವಸು ಧರಿಸಬೇಕು. ಕೈವಸುಗಳನ್ನು ಧರಿಸುವುದು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು ಎಂದು ಸಿಐಎಸ್‌ಸಿಇ ಮುಖ್ಯ ಕಾರ್ಯನಿರ್ವಾಹಕ ಹಾಗೂ ಕಾರ್ಯದರ್ಶಿ ಗೆರಿ ಅರತೂನ್‌ ತಿಳಿಸಿದ್ದಾರೆ.

ADVERTISEMENT

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಸಂದರ್ಭದಲ್ಲಿ ಅಂತರವನ್ನು ಕಾಯ್ದುಕೊಳ್ಳಬೇಕು. ಶಾಲೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿಐಎಸ್‌ಸಿಇ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.