ADVERTISEMENT

ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 14 ಮೇ 2025, 20:07 IST
Last Updated 14 ಮೇ 2025, 20:07 IST
   

1.ಕೋಕೋ ಬೀಜದ ಉತ್ಪಾದನೆಯನ್ನು ಭಾರತದಲ್ಲಿ ಹೆಚ್ಚಿಸಲು ಕೆಳಗಿನ ಯಾವ ಕೇಂದ್ರ ಸಂಸ್ಥೆ ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ?

ಎ. ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌

ADVERTISEMENT

ಬಿ. ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರ.

ಸಿ. ರಾಷ್ಟ್ರೀಯ ಕೃಷಿ ಉತ್ಪನ್ನಗಳ ಸಂಶೋಧನಾ ಕೇಂದ್ರ.

ಡಿ. ಈಶಾನ್ಯ ತೋಟಗಾರಿಕೆ ಸಂಶೋಧನಾ ಕೇಂದ್ರ.

ಉತ್ತರ : ಎ

2. ಭಾರತದ ಕೆಳಗಿನ ಯಾವ ರಾಜ್ಯಗಳಲ್ಲಿ ಕೋಕೋ ಬೇಸಾಯವನ್ನು ಹೆಚ್ಚಾಗಿ ಕಾಣಬಹುದಾಗಿದೆ?

1. ಆಂಧ್ರಪ್ರದೇಶ.

2. ಮಹಾರಾಷ್ಟ್ರ.

3. ಕರ್ನಾಟಕ.

4. ತಮಿಳುನಾಡು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 ಬಿ. 1, 3 ಮತ್ತು 4

ಸಿ. 2 ಮತ್ತು 3 ಡಿ. 3 ಮತ್ತು 4

ಉತ್ತರ : ಬಿ

3. ವಿಶ್ವ ವನ್ಯಜೀವಿ ಅಪರಾಧ ವರದಿ-2024 ಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಈ ವರದಿಯನ್ನು ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಂ ಸಂಸ್ಥೆಯು ಬಿಡುಗಡೆ ಮಾಡುತ್ತದೆ.

2. ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಂ ಸಂಸ್ಥೆಯನ್ನು 1997 ರಲ್ಲಿ ಸ್ಥಾಪಿಸಲಾಯಿತು.

ಕೋಡ್ ಬಳಸಿ ಸರಿಯಾದ ಉತ್ತರವನ್ನು
ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಸಿ

4.ವಿಶ್ವ ವನ್ಯಜೀವಿ ಅಪರಾಧ ವರದಿ-2024 ರ ಅನ್ವಯ ಕೆಳಗಿನ ಯಾವ ಪ್ರಾಣಿ ಪ್ರಭೇದದ ಉತ್ಪನ್ನಗಳನ್ನು ಹೆಚ್ಚಾಗಿ ಕಳ್ಳ ಸಾಗಾಣಿಕೆ ಮಾಡಲಾಗಿದೆ?

ಎ. ಘೇಂಡಾಮೃಗದ ಕೊಂಬುಗಳು.

ಬಿ. ಆನೆ ದಂತಗಳು.

ಸಿ. ಹುಲಿ ಚರ್ಮ.

ಡಿ. ಸಿಂಹದ ಮೂಳೆಗಳು.

ಉತ್ತರ : ಎ

5. ಕೆಳಗಿನ ಯಾವ ಕಾಯ್ದೆಯ ಅನ್ವಯ ಭಾರತೀಯ ಔಷಧೀಯ ವಲಯವನ್ನು ಪ್ರಸ್ತುತ ಸಂದರ್ಭದಲ್ಲಿ ನಿರ್ವಹಿಸಲಾಗುತ್ತಿದೆ?

ಎ. ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆ್ಯಕ್ಟ್-1940.

ಬಿ. ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ನಿಯಮಾವಳಿಗಳು-1980.

ಸಿ. ಆರೋಗ್ಯದ ಉದ್ದೇಶಗಳಿಗಾಗಿ ಔಷಧಿಗಳ ನಿಯಮಾವಳಿ-1967.

ಡಿ. ಇಂಡಿಯನ್ ಪೇಟೆಂಟ್ ಆಕ್ಟ್-1976.

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.