ADVERTISEMENT

ಕಂಪ್ಯೂಟರ್‌ ಜ್ಞಾನ ವಿಭಾಗ ಅಂಕ ಗಳಿಕೆ ಸುಲಭ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:30 IST
Last Updated 21 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಂಪ್ಯೂಟರ್‌ ಜ್ಞಾನ ಅಥವಾ ಅರಿವು ವಿಭಾಗ ಹಲವಾರು ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯದಲ್ಲಿ ಅವಿಭಾಜ್ಯ ಅಂಗ ಎನ್ನಬಹುದು. ಕಂಪ್ಯೂಟರ್‌ ಅರಿವು ವಿಭಾಗದಲ್ಲಿ ಹೆಚ್ಚಿನ ಪ್ರಶ್ನೆಗಳು ನೇರವಾಗಿರುತ್ತವೆ. ಹೀಗಾಗಿ ಸ್ಪರ್ಧಾರ್ಥಿಗಳು ಈ ವಿಭಾಗದಲ್ಲಿ ಸರಿಯಾಗಿ ಉತ್ತರ ಬರೆಯುವ ಮೂಲಕ ತಮ್ಮ ಒಟ್ಟಾರೆ ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದು.

ಕಂಪ್ಯೂಟರ್‌ ಜ್ಞಾನ

ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ಸೇರಬೇಕಾದರೆ ಕಂಪ್ಯೂಟರ್‌ ಅಪ್ಲಿಕೇಶನ್‌ನ ಬೇಸಿಕ್‌ ಜ್ಞಾನ ಅವಶ್ಯಕ. ಜೊತೆಗೆ ವಿವಿಧ ಕಂಪ್ಯೂಟರ್‌ ಅಪ್ಲಿಕೇಶನ್‌, ಪರಿಭಾಷೆ, ಶಾರ್ಟ್‌ಕಟ್‌ ಹಾಗೂ ಸಾಫ್ಟ್‌ವೇರ್‌ಗಳ ಬಗ್ಗೆ ಅರಿವಿದ್ದರೆ ಪರೀಕ್ಷೆಯ ಈ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿ ಅರ್ಹತೆ ಸಾಧಿಸಬಹುದು.

ADVERTISEMENT

ಕಂಪ್ಯೂಟರ್‌ ಜ್ಞಾನ ವಿಭಾಗದಲ್ಲಿ ಈ ಕೆಲವು ಅಂಶಗಳನ್ನು ಪರಿಗಣಿಸಬಹುದು.

ಪ್ರಶ್ನೆಗಳು ನೇರವಾಗಿರುತ್ತವೆ.

ಮೂಲಭೂತ ಕಂಪ್ಯೂಟರ್‌ ಜ್ಞಾನವನ್ನು ಆಧರಿಸಿ ಇರುತ್ತವೆ.

ಕಡಿಮೆ ಸಮಯದಲ್ಲಿ ಉತ್ತರಿಸಬಹುದು.

ದೀರ್ಘವಾದ ಉತ್ತರ ಅಥವಾ ಲೆಕ್ಕಾಚಾರ ಇದಕ್ಕೆ ಅಗತ್ಯವಿಲ್ಲ.

ಬಹುತೇಕ ಬ್ಯಾಂಕ್‌ ಪರೀಕ್ಷೆಗಳಲ್ಲಿ ಪ್ರತ್ಯೇಕ ವಿಭಾಗವಿರುವುದಿಲ್ಲ. ಆದರೆ ರೀಸನಿಂಗ್‌ ಎಬಿಲಿಟಿ ವಿಭಾಗದಲ್ಲಿ ಸೇರಿಸಲಾಗುತ್ತದೆ.

ಕಂಪ್ಯೂಟರ್‌ ತಿಳಿವಳಿಕೆ ವಿಭಾಗದಲ್ಲಿ ಈ ಕೆಲವು ವಿಷಯಗಳನ್ನು ಸೇರಿಸಲಾಗುತ್ತದೆ. ಕಂಪ್ಯೂಟರ್‌ನ ಮೂಲಭೂತ ವಿಷಯಗಳು, ಮೈಕ್ರೊಸಾಫ್ಟ್‌ ವಿಂಡೋಸ್‌, ಮೈಕ್ರೊಸಾಫ್ಟ್‌ ಆಫೀಸ್‌, ಎಂಎಸ್‌ ವರ್ಡ್‌, ಎಂಎಸ್‌ ಪವರ್‌ಪಾಯಿಂಟ್‌, ಎಂಎಸ್‌ ಎಕ್ಸೆಲ್‌, ಎಂಎಸ್‌ ಆ್ಯಕ್ಸೆಸ್‌, ಎಂಎಸ್‌ ಔಟ್‌ಲುಕ್‌, ಕಂಪ್ಯೂಟರ್‌ ಶಾರ್ಟ್‌ಕಟ್‌ ಕೀಗಳು, ಕಂಪ್ಯೂಟರ್‌ ಅಬ್ರಿವಿಯೇಶನ್‌, ಉನ್ನತ ಮಟ್ಟದ ಕಂಪ್ಯೂಟರ್‌ ಲ್ಯಾಂಗ್ವೇಜ್‌, ಕ್ಲೌಡ್‌ ಕಂಪ್ಯೂಟಿಂಗ್‌ನ ಮೂಲಭೂತ ಜ್ಞಾನ, ಕಂಪ್ಯೂಟರ್‌ ನೆಟ್‌ವರ್ಕ್‌, ವಿವಿಧ ಬಗೆಯ ಕಂಪ್ಯೂಟರ್‌ಗಳು, ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌, ಅಂತರ್ಜಾಲ, ಇನ್‌ಪುಟ್‌ ಮತ್ತು ಔಟ್‌ಪುಟ್‌, ಕಂಪ್ಯೂಟರ್‌ ವೈರಸ್‌, ವೆಬ್‌ಸೈಟ್‌, ಕಂಪ್ಯೂಟರ್‌ಗೆ ಸಂಬಂಧಿಸಿದ ವಿವಿಧ ಶಬ್ದಗಳು, ವೆಬ್‌ ಬ್ರೌಸರ್‌, ಕಂಪ್ಯೂಟರ್‌ ಬಿಡಿಭಾಗಗಳು, ಡೇಟಾಬೇಸ್‌ ನಿರ್ವಹಣೆ ವ್ಯವಸ್ಥೆ ಮೊದಲಾದವುಗಳು.

ಐಬಿಪಿಎಸ್‌ (ಪ್ರೊಬೇಷನರಿ ಆಫೀಸರ್‌), ಐಬಿಪಿಎಸ್‌ ಕ್ಲರ್ಕ್‌, ಐಬಿಪಿಎಸ್‌ (ವಿಶೇಷ ಅಧಿಕಾರಿ), ಆರ್‌ಆರ್‌ಬಿ, ಆರ್‌ಬಿಐ ಅಸಿಸ್ಟೆಂಟ್‌, ಐಬಿಪಿಎಸ್‌ ಆರ್‌ಆರ್‌ಬಿ, ಐಬಿಪಿಎಸ್‌ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಕ್ಲರ್ಕ್‌, ಎಲ್‌ಐಸಿ (ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌), ಎನ್‌ಐಎಸಿಎಲ್‌ ಅಸಿಸ್ಟೆಂಟ್‌, ಎನ್‌ಐಎಸಿಎಲ್‌ ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌, ಎಫ್‌ಸಿಐ ಮ್ಯಾನೇಜರ್‌, ಆರ್‌ಆರ್‌ಬಿ ಜ್ಯೂನಿಯರ್‌ ಎಂಜಿನಿಯರ್‌ ಮೊದಲಾದ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್‌ ಜ್ಞಾನದ ಕುರಿತ ಪ್ರಶ್ನೆಗಳು ಇರುತ್ತವೆ.

ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಾರ್ಥಿಗಳು ಒಟ್ಟಾರೆ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಅಂಕಗಳನ್ನು ಗಳಿಸಬೇಕಾಗುತ್ತದೆ. ಪ್ರಶ್ನೆಪತ್ರಿಕೆಯ ಬೇರೆ ಕೆಲವು ವಿಭಾಗಗಳಿಗೆ ಹೋಲಿಸಿದರೆ ಕಂಪ್ಯೂಟರ್‌ ಅರಿವು ವಿಭಾಗ ಹೆಚ್ಚು ಸುಲಭ ಎನ್ನಬಹುದು. ಹೀಗಾಗಿ ಹೆಚ್ಚು ಒತ್ತು ಕೊಟ್ಟು ಓದಿದರೆ ಪರೀಕ್ಷೆಯಲ್ಲಿ ಅರ್ಹತೆ ಗಳಿಸಬಹುದು.

ಮಾದರಿ ಪ್ರಶ್ನೆ: ––––––––––– ಕಂಪ್ಯೂಟರ್‌ ನೆಟ್‌ವರ್ಕ್‌ನಲ್ಲಿ ಅಳವಡಿಸಿರುವ ಪ್ರತಿಯೊಂದು ಡಿವೈಸ್‌ (ಉದಾ: ಕಂಪ್ಯೂಟರ್‌, ಪ್ರಿಂಟರ್‌) ಗೆ ನೀಡಲಾಗಿರುವ ನ್ಯೂಮರಿಕಲ್‌ ಲೇಬಲ್‌.

1 ಇಮೇಲ್‌ 2 ಟೋಪೊಲೊಜಿ 3 ರೌಟರ್‌

4 ಐಪಿ ಅಡ್ರೆಸ್‌ 5 ವೆಬ್‌ಸೈಟ್‌

ಉತ್ತರ: 4 ಐಪಿ ಅಡ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.