ADVERTISEMENT

ಕಲಬುರಗಿ | ಡಿಪ್ಲೊಮಾ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:55 IST
Last Updated 7 ಜುಲೈ 2025, 5:55 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಕಲಬುರಗಿ: ಡಿಪ್ಲೊಮಾ ವಿವಿಧ ಕೋರ್ಸ್‍ಗಳಲ್ಲಿ ಪ್ರಥಮ ಸೆಮಿಸ್ಟರ್‌ನಲ್ಲಿ/ ಲ್ಯಾಟರಲ್ ಎಂಟ್ರಿ 3ನೇ ಸೆಮಿಸ್ಟರ್‌ಗೆ ಭರ್ತಿಯಾಗದೇ ಖಾಲಿ ಉಳಿದ ಸೀಟುಗಳಿಗೆ ಎಸ್‌ಎಸ್‌ಎಲ್‌ಸಿ, ಸಿಬಿಎಸ್‌ಇ, ಐಟಿಐ, ಪಿಯುಸಿ ಪಾಸಾದ ಅರ್ಹ ವಿದ್ಯಾರ್ಥಿನಿಯರಿಂದ ಆಫ್‍ಲೈನ್ ಮೂಲಕ ಪ್ರವೇಶ ಪಡೆಯುವ ಅವಧಿಯನ್ನು ಜುಲೈ 15 ರವರೆಗೆ ವಿಸ್ತರಿಸಲಾಗಿದೆ ಎಂದು ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ ಪ್ರಾಚಾರ್ಯರು ತಿಳಿಸಿದ್ದಾರೆ. ಕಂಪ್ಯೂಟರ್ ಸೈನ್ಸ್

ADVERTISEMENT

ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ (ಆಂಗ್ಲ) ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಅರ್ಜಿಗಳನ್ನು ಸಂಸ್ಥೆಯಿಂದ ಅಥವಾ http://dtek.karnataka.gov.in ವೆಬ್‍ಸೈಟ್‍ನಿಂದ ಪಡೆದು ಅವಶ್ಯಕ ದಾಖಲೆಗಳ್ನು ಲಗತ್ತಿಸಿ ಜುಲೈ 15ರೊಳಗಾಗಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಸಲ್ಲಿಸಬೇಕು. ಮಾಹಿತಿಗಾಗಿ ಮೊ. 9945350274, 8861190330, 9880874609, 9008065554 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.