ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಬಿಡಿಎಸ್‌ಗಿರುವ ಅವಕಾಶಗಳೇನು?

ಪ್ರದೀಪ್ ಕುಮಾರ್ ವಿ.
Published 22 ಏಪ್ರಿಲ್ 2024, 0:45 IST
Last Updated 22 ಏಪ್ರಿಲ್ 2024, 0:45 IST
   

ಬಿಡಿಎಸ್‌ಗಿರುವ ಅವಕಾಶಗಳೇನು?

1. ನಾನು ಡಿಪ್ಲೊಮಾ (ಕಂಪ್ಯೂಟರ್ ಸೈನ್ಸ್) ಮಾಡುತ್ತಿದ್ದು, ಮುಂದೆ ಬಿಇ ಮಾಡುವ ಆಸೆಯಿದೆ. ಉದ್ಯೋಗಾವಕಾಶಗಳ ದೃಷ್ಟಿಯಿಂದ ಯಾವ ಕೋರ್ಸ್ ಒಳ್ಳೆಯದು?

ರೇಖಾ, ಮಂಡ್ಯ


ಡಿಪ್ಲೊಮಾ (ಕಂಪ್ಯೂಟರ್ ಸೈನ್ಸ್) ನಂತರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೆಬ್ ಡೆವಲಪರ್, ಸಾಫ್ಟ್‌ವೇರ್ ಡೆವಲಪರ್, ಫುಲ್ ಸ್ಟಾಕ್ ಡೆವಲಪರ್, ಯುಐ/ಯುಎಕ್ಸ್ ಡಿಸೈನರ್, ಸಿಸ್ಟಮ್ಸ್ ಅನಲಿಸ್ಟ್, ಡೇಟಾ ಅನಲಿಸ್ಟ್ ಮುಂತಾದ ವೈವಿಧ್ಯಮಯ ಉದ್ಯೋಗಾವಕಾಶಗಳಿವೆ. ಕೆಲವು ಉದ್ಯೋಗಗಳಿಗೆ, ಅಲ್ಪಾವಧಿ/ಸರ್ಟಿಫಿಕೆಟ್ ಕೋರ್ಸ್‌ಗಳ ಅಗತ್ಯವಿರುತ್ತದೆ.

ADVERTISEMENT

ಈಗಲೇ ದುಡಿಯುವ ಅಗತ್ಯವಿಲ್ಲದಿದ್ದರೆ, ಲ್ಯಾಟರಲ್ ಎಂಟ್ರಿ ಮೂಲಕ ಮೂರು ವರ್ಷದ ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್) ಮಾಡುವುದು, ಭವಿಷ್ಯದ ದೃಷ್ಟಿಯಿಂದ ಸೂಕ್ತ.

ಪ್ರಮುಖವಾಗಿ, ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನೂ, ಕುಟುಂಬದ ಅಗತ್ಯ ಮತ್ತು ಸವಾಲುಗಳನ್ನೂ ಪರಿಗಣಿಸಿ,

ವೃತ್ತಿಯ ಯೋಜನೆಯನ್ನು ಮಾಡಿ, ಅದರಂತೆ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

2. ನನ್ನ ಮಗ ಎಸ್ಸೆಸ್ಸೆಲ್ಸಿ ಮುಗಿಸಿದ್ದು, ಮುಂದೆ ಯಾವ ಕೋರ್ಸ್ ಮಾಡಬಹುದು?

ಹೆಸರು, ಊರು ತಿಳಿಸಿಲ್ಲ.

ವಿದ್ಯಾಭ್ಯಾಸದ ನಂತರ ಯಾವ ವೃತ್ತಿಯನ್ನು ಅನುಸರಿಸಬೇಕು ಎನ್ನುವುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಯಾವ ಕೋರ್ಸ್‌ಗಳನ್ನು ಮಾಡಬೇನ್ನುವ ಪರಿಕಲ್ಪನೆಯೇ ವೃತ್ತಿ ಯೋಜನೆ. ಈ ಕೆಳಗೆ ವಿವರಿಸಿರುವ ಕ್ರಮದಲ್ಲಿ ವೃತ್ತಿ ಯೋಜನೆಯನ್ನು ಮಾಡಿದ ನಂತರ, ಮುಂದಿನ ಆಯ್ಕೆ ಸುಲಭವಾಗುತ್ತದೆ.

  • ವಿದ್ಯಾರ್ಥಿಯ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು.

  • ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ.

  • ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.

  • ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ.

  • ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್‌ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ.

  • ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ.

  • ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ಲೇಖನವನ್ನು ಗಮನಿಸಿ: https://youtu.be/AwlDno1YduQ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.inಕ್ಕೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.