ನಾನು ಪದವಿ ಕೋರ್ಸ್ ಮುಗಿಸಿ, ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ದುಬಾರಿ ಕೋಚಿಂಗ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಖುದ್ದಾಗಿ ತಯಾರಾಗುವುದು ಹೇಗೆ?
ಚಂದ್ರಿಕ, ಬೆಂಗಳೂರು
ಸರ್, ನನಗೀಗ 32 ವರ್ಷ. ಐಎಎಸ್ ಪರೀಕ್ಷೆ ಬರೆಯಲು ಸಾಧ್ಯವೇ? ಹೆಸರು, ಊರು ತಿಳಿಸಿಲ್ಲ
ಐಎಎಸ್ ನೇಮಕಾತಿಗೆ, ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯನ್ನು ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 32 ವರ್ಷದವರೆಗೂ, ಹಾಗೂ ಇನ್ನಿತರ ವರ್ಗಗಳಿಗೆ 37 ವರ್ಷದವರೆಗೂ ಅವಕಾಶವಿರುತ್ತದೆ. ಕಠಿಣವಾದ ಈ ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಕಡ್ಡಾಯವಲ್ಲ. ಈ ಸಲಹೆಗಳನ್ನು ಅನುಸರಿಸಿ.
l→ಮೊದಲಿಗೆ, ಪೂರ್ವಭಾವಿ ಮತ್ತು ಅಂತಿಮ ಪರೀಕ್ಷೆಗಳ ಮಾದರಿ, ಪಠ್ಯಕ್ರಮವನ್ನು ಅರ್ಥೈಸಿಕೊಳ್ಳಬೇಕು.
l→ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿಕೊಳ್ಳಬೇಕು.
l→ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಸಮೀಕ್ಷೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆಯಿಂದ ಓದುವಿಕೆ ಪರಿಣಾಮಕಾರಿಯಾಗಿಬೇಕು.
l →ಸೂಕ್ತವಾದ ಪೀಠಿಕೆ, ವಿಮರ್ಶಾತ್ಮಕ ವಿಷಯ ನಿರೂಪಣೆ ಹಾಗೂ ಮುಕ್ತಾಯ ಭಾಗದಲ್ಲಿ ವಿಷಯದ ಕುರಿತ ಪರಿಹಾರ ಮಾರ್ಗಗಳು, ಸಲಹೆಗಳು ಮತ್ತು ತಜ್ಞರ ಸಲಹೆಗಳೊಂದಿಗೆ, ಉತ್ತಮವಾದ ಪ್ರಬಂಧಗಳನ್ನು ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
l →ಖುದ್ದಾಗಿ ತಯಾರಾಗಿ ಐಎಎಸ್ ಅಧಿಕಾರಿಗಳಾಗಿರುವ ಸಾಧಕರ ಕಥೆಗಳನ್ನು, ಸಂದರ್ಶನಗಳನ್ನು ಮತ್ತು ವಿಡಿಯೊಗಳನ್ನು ಗಮನಿಸಿ.
l→ ಗೂಗಲ್ ಮತ್ತು ಯೂಟ್ಯೂಬಿನಲ್ಲಿ, ತಯಾರಿ ಕುರಿತ ಮಾಹಿತಿ ಮತ್ತು ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ.
l→ಸ್ವಯಂ-ಮೌಲ್ಯಮಾಪನಕ್ಕಾಗಿ, ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿರಬೇಕು.
l→ ಸುದ್ದಿವಾಹಿನಿಗಳಲ್ಲಿ ನಡೆಯುವ ಪ್ರಮುಖ ಚರ್ಚೆಗಳು, ದಿನಪತ್ರಿಕೆಗಳ ಸಂಪಾದಕೀಯ ಮತ್ತು ನಿಯತಕಾಲಿಕೆಗಳನ್ನು ಗಮನಿಸುತ್ತಿರಬೇಕು.
l→ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ನಿಗದಿತ ವೇಳಾಪಟ್ಟಿಯಂತೆ ಸಮಯದ ನಿರ್ವಹಣೆ ಅತ್ಯಗತ್ಯ.
ಪರಿಣಾಮಕಾರಿ ಅಧ್ಯಯನದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.