ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಆಸಕ್ತಿಗನುಸಾರ ಕೋರ್ಸ್‌ ಆಯ್ಕೆ ಹೇಗೆ?

ಪ್ರದೀಪ್ ಕುಮಾರ್ ವಿ.
Published 6 ಮಾರ್ಚ್ 2023, 0:15 IST
Last Updated 6 ಮಾರ್ಚ್ 2023, 0:15 IST
   

1. ನನಗೀಗ 35 ವರ್ಷ ಮತ್ತು ಬಿಎ ಮಾಡಿದ್ದೇನೆ. ಈಗ ಬಿ.ಇಡಿ ಅಥವಾ ಎಲ್‌ಎಲ್‌ಬಿ ಮಾಡಬೇಕೆಂದುಕೊಂಡಿದ್ದೀನಿ. ನನ್ನ ವಯಸ್ಸಿಗೆ ಅನುಗುಣವಾಗಿ ಯಾವ ಕೋರ್ಸ್ ಮಾಡಿದರೆ ಸೂಕ್ತ? ಮೈಸೂರು ಮತ್ತು ಚಾಮರಾಜನಗರದಲ್ಲಿ ಎಲ್‌ಎಲ್‌ಬಿ ಓದಲು ಸರ್ಕಾರಿ ಕಾಲೇಜಿದೆಯೇ?
ಹೆಸರು, ಊರು ತಿಳಿಸಿಲ್ಲ.
ಬಿ.ಇಡಿ ಮತ್ತು ಎಲ್‌ಎಲ್‌ಬಿ ಸಂಬಂಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಮತ್ತು ಕೌಶಲಗಳು ವಿಭಿನ್ನ. ಹಾಗಾಗಿ, ವೃತ್ತಿಯ ಆಯ್ಕೆ ಮಾಡಲು ವಯಸ್ಸಿಗಿಂತ ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳು ಯಾವ ಕ್ಷೇತ್ರದಲ್ಲಿದೆಯೆಂದು ತಿಳಿದು,
ಅದರಂತೆ ಕೋರ್ಸ್ ಆಯ್ಕೆ ತೆಗೆದುಕೊಳ್ಳುವುದು ಸರಿಯಾದಕ್ರಮ. ವೃತ್ತಿಯ ಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ
ವಿಡಿಯೊ ವೀಕ್ಷಿಸಿ:
https://www.youtube.com/@ExpertCareerConsultantAuthor
ಕರ್ನಾಟಕದಲ್ಲಿರುವ ಕಾನೂನು ಕಾಲೇಜುಗಳ ಮಾಹಿತಿಗಾಗಿ ಗಮನಿಸಿ:
https://collegedunia.com/llb/karnataka-colleges

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.