ADVERTISEMENT

ಮಾದರಿ ಪ್ರಶ್ನೋತ್ತರ: ಸಾಮಾನ್ಯ ಜ್ಞಾನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 2:33 IST
Last Updated 29 ಡಿಸೆಂಬರ್ 2022, 2:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಎಸ್‌ಆರ್‌ಪಿ ಸೇರಿದಂತೆ ಮುಂದೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಕೊಡಲಾಗಿದೆ.

1) ಹಸಿರು ಹೈಡ್ರೋಜನ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ) ಹಸಿರು ಹೈಡ್ರೋಜನನ್ನು ನವೀಕರಿಸಬಹುದಾದ ಶಕ್ತಿಮೂಲಗಳನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತದೆ
ಬಿ) ಇದು ರಾಷ್ಟ್ರದ ಪರಿಸರ ಸುಸ್ಥಿರ ಇಂಧನ ಭದ್ರತೆಯ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ.

ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿರಿ
1.ಹೇಳಿಕೆ ಎ ಸರಿಯಾಗಿದೆ.
2.ಹೇಳಿಕೆ ಬಿ ಸರಿಯಾಗಿದೆ.
3.ಎರಡೂ ಹೇಳಿಕೆಗಳು ತಪ್ಪಾಗಿವೆ.
4.ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ:( 4 )

ADVERTISEMENT

2) ಗ್ರೀನ್ ಅಮೋನಿಯಾ ನೀತಿಯ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ) ಈ ನೀತಿಯ ಅನುಷ್ಠಾನವು ದೇಶದ ಸಾಮಾನ್ಯ ಜನರಿಗೆ ಶುದ್ಧ ಇಂಧನವನ್ನು ಒದಗಿಸುತ್ತದೆ.
ಬಿ) ಈ ನೀತಿಯ ಅನುಷ್ಠಾನವು ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಶದ ಕಚ್ಚಾ ತೈಲ ಆಮದುಗಳನ್ನು ಕಡಿಮೆ ಮಾಡುತ್ತದೆ.

ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿರಿ
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: 4

3) ಡಬ್ಲ್ಯುಎಚ್‌ಒ(WHO) ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ (WHO GCTM) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ) WHO GCTM ಅನ್ನು ಆಯುಷ್ ಸಚಿವಾಲಯದ ಅಡಿಯಲ್ಲಿ ಜಾಮ್‌ನಗರದಲ್ಲಿ ಸ್ಥಾಪಿಸಲಾಗುವುದು.
ಬಿ) ಇದು ಪ್ರಪಂಚದಾದ್ಯಂತ ಸಾಂಪ್ರದಾಯಿಕ ಔಷಧಕ್ಕಾಗಿ ಮೊದಲ ಮತ್ತು ಏಕೈಕ ಜಾಗತಿಕ ಹೊರಪೋಸ್ಟ್ ಕೇಂದ್ರವಾಗಿದೆ (ಕಚೇರಿ).

ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿರಿ
1.ಹೇಳಿಕೆ ಎ ಸರಿಯಾಗಿದೆ.
2.ಹೇಳಿಕೆ ಬಿ ಸರಿಯಾಗಿದೆ.
3.ಎರಡೂ ಹೇಳಿಕೆಗಳು ತಪ್ಪಾಗಿವೆ.
4.ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: 4

4) ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಚಾಲ್ತಿಯಲ್ಲಿದ್ದ ಪನ್ನಸ, ಮತ್ತರು, ಮರುತ್ತರು, ನಿವರ್ತನ ಮುಂತಾದ ಪದಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ. ಭೂ ಕಂದಾಯ ವ್ಯವಸ್ಥೆ.
ಬಿ. ಭೂ ಮಾಪನ ವ್ಯವಸ್ಥೆಯ ಮಾಪಕಗಳು.
ಸಿ. ವಾಣಿಜ್ಯ ಕಂದಾಯ ವಿಭಾಗಗಳು.
ಡಿ. ವರ್ತಕ ಸಂಘಗಳ ಹೆಸರುಗಳು.
ಉತ್ತರ: ಬಿ

5) ಬಾದಾಮಿ ಚಾಲುಕ್ಯರ ಕಾಲದ ಶಾಸನಗಳಲ್ಲಿ ಕಂಡುಬರುವ ವೀಸಾ, ಬಾಂಡಸೇರು, ಕುಳ ಮುಂತಾದ ಉಲ್ಲೇಖಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ. ತೂಕ ಮತ್ತು ಮಾಪಕದ ಸಾಧನಗಳು.
ಬಿ. ಭೂಮಾಪನದ ಅಳತೆಗಳು.
ಸಿ. ಕುಟುಂಬ ವ್ಯವಸ್ಥೆಯ ಘಟಕಗಳು.
ಡಿ. ಆಡಳಿತ ವ್ಯವಸ್ಥೆಯ ಘಟಕಗಳು.
ಉತ್ತರ:

6) ಬಾದಾಮಿ ಚಾಲುಕ್ಯರ ಶಾಸನಗಳಲ್ಲಿ ಕಂಡು ಬರುವ ಧರಣ, ವೀಸ, ಪೊನ್ನ ಮತ್ತು ಬೇಳೆ ಮುಂತಾದವು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ. ಸೈನ್ಯಾಡಳಿತದ ಒಳಗಿನ ಘಟಕಗಳು.
ಬಿ. ಆಹಾರ ಧಾನ್ಯಗಳ ವಿಧಗಳು.
ಸಿ. ನಾಣ್ಯಗಳ ವಿಧಗಳು.
ಡಿ. ಆಡಳಿತದ ಘಟಕಗಳು.
ಉತ್ತರ: ಸಿ

7) ಈ ಕೆಳಗಿನವುಗಳಲ್ಲಿ ಯಾವೆಲ್ಲದೇಶಗಳು ಶಾಂಘೈ ಐದರ ಭಾಗವಾಗಿದ್ದವು?
ಎ) ಕಝಾಕಿಸ್ತಾನ್ ಗಣರಾಜ್ಯ
ಬಿ) ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ
ಸಿ) ಕಿರ್ಗಿಜ್ ಗಣರಾಜ್ಯ
ಡಿ) ರಷ್ಯಾದ ಒಕ್ಕೂಟ
ಇ) ರಿಪಬ್ಲಿಕ್ ಆಫ್ ತಜಕಿಸ್ತಾನ್
ಎಫ್) ಉಜ್ಬೇಕಿಸ್ತಾನ್ ಗಣರಾಜ್ಯ

1) (ಎ) ಯನ್ನು ಹೊರತುಪಡಿಸಿ ಮೇಲಿನ ಎಲ್ಲಾ
2) (ಇ) ಯನ್ನು ಹೊರತುಪಡಿಸಿ ಮೇಲಿನ ಎಲ್ಲಾ
3) (ಎ) (ಇ) ಮತ್ತು (ಎಫ್)ಹೊರತುಪಡಿಸಿ ಮೇಲಿನ ಎಲ್ಲಾ
4) (ಎಫ್) ಹೊರತುಪಡಿಸಿ ಮೇಲಿನ ಎಲ್ಲಾ

ಉತ್ತರ:4

8) ಕೆಳಗಿನ ಯಾವ ದೇಶಗಳು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯತ್ವ ಹೊಂದಿಲ್ಲ?
ಎ) ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ
ಬ) ಭಾರತ
ಸಿ) ಅಜೆರ್ಬೈಜಾನ್
ಡಿ) ಪಾಕಿಸ್ತಾನ
ಉತ್ತರ:ಸಿ

9) ರಾಷ್ಟ್ರೀಯ ವಾಯು ಕ್ರೀಡಾ ನೀತಿ 2022 (NASP 2022)ರ ಉದ್ದೇಶಗಳಿಗೆ ಸಂಬಂಧಿಸಿದಂತೆ ಈ‌ ಕೆಳಗಿನ‌ ಹೇಳಿಕೆಗಳನ್ನು ಪರಿಶೀಲಿಸಿ
ಎ. ವಾಯು ಕ್ರೀಡೆಗಳ ಮೂಲಸೌಕರ್ಯ, ಉಪಕರಣಗಳು, ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ತರಬೇತಿ ಸೇರಿದಂತೆ ವಿಶೇಷವಾಗಿ ಸುರಕ್ಷತಾ ವಿಚಾರದಲ್ಲಿ ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು.
ಬಿ. ಜಾಗತಿಕ ಸ್ಪರ್ಧೆಗೆ ಹೊಂದಿಕೊಳ್ಳುವ ಅತ್ಯುತ್ತಮ ಗುಣಮಟ್ಟದ ವಾಯುಕ್ರೀಡಾ ಸಲಕರಣೆಗಳನ್ನು ವಿದೇಶದಿಂದ ಆಮದುಮಾಡಿಕೊಳ್ಳುವುದು.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ:1

10) ವಾಯುಕ್ರೀಡಾ ನಿಯಂತ್ರಕ ಪ್ರದೇಶಗಳು ಮತ್ತು ಆಯಾ ರಾಜ್ಯಗಳ ಈ ಕೆಳಗಿನ ಜೋಡಿಗಳನ್ನು ಹೊಂದಿಸಿ.
ಪ್ರದೇಶ ರಾಜ್ಯಗಳು
1) ಬಿಲ್ಲಿಂಗ್ ‌‌ಎ) ಮಹಾರಾಷ್ಟ
2) ಹಡಪ್ಸರ್ ಬಿ) ಕೇರಳ
3) ವಾಗಮೋನ್ ಸಿ) ಸಿಕ್ಕಿಂ
4) ಗ್ಯಾಂಗ್ಟಾಕ್ ‌‌‌ ‌ ಡಿ)ಹಿಮಾಚಲಪ್ರದೇಶ

ಎ) 1-ಡಿ, 2- ಎ, 3-ಬಿ, 4-ಸಿ
ಬಿ) 1-ಎ, 2- ಡಿ, 3-ಸಿ, 4-ಬಿ
ಸಿ) 1-ಸಿ, 2- ಬಿ, 3-ಎ, 4-ಡಿ
ಡಿ) 1-ಬಿ, 2- ಸಿ, 3-ಡಿ, 4-ಎ
ಉತ್ತರ:

11) ಮೀರಾಬಾಯಿಯ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ. ಮೀರಾಬಾಯಿಯ ಭಜನೆಯನ್ನು ಕೇಳಿ ರಾಜ ಅಕ್ಬರ್ ತುಂಬಾ ಪ್ರಭಾವಿತನಾಗಿದ್ದನು.
ಬಿ. ಮೀರಾಬಾಯಿ ಪರಮ ವಿಷ್ಣು ಭಕ್ತೆಯಾಗಿದ್ದು ಭೋಜಪುರಿ ಭಾಷೆಯಲ್ಲಿ ಅನೇಕ ಭಜನೆಗಳನ್ನು ಹಾಡಲಾರಂಭಿಸಿದಳು.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: 1

12. ಸಂತಸೂರ್ ದಾಸ್ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ. ಇವರು ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದರು.
ಬಿ.‌ ಸಾಹಿತ್ಯ ರತ್ನ ಮತ್ತು ಸುರ್ ಸಾಗರ್ ಎನ್ನುವುದು ಇವರ ಶ್ರೇಷ್ಠ ಕೃತಿಗಳಾಗಿವೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ:4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.