ADVERTISEMENT

ನ್ಯೂಕ್ಲಿಯಸ್‌ಗಳು (ಮುಂದುವರಿದ ಭಾಗ)

ಎಸ್ಸೆಸ್ಸೆಲ್ಸಿ- ಪಿಯುಸಿ ಪರೀಕ್ಷೆ ದಿಕ್ಸೂಚಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 19:30 IST
Last Updated 21 ಫೆಬ್ರುವರಿ 2021, 19:30 IST

ವಿಕಿರಣಪಟು ಕ್ಷಯಿಕೆ ನಿಯಮ

ವಿಕಿರಣಪಟು ಪದಾರ್ಥದಲ್ಲಿ a, B ಅಥವಾ
ಕ್ಷಯಿಕೆ ಆದಾಗ ಕ್ಷಯಿಕೆ ಹೊಂದುವ ನ್ಯೂಕ್ಲಿಯಸ್‌ಗಳ ಸಂಖ್ಯೆಯ ದರವು ಪದಾರ್ಥದಲ್ಲಿರುವ ನ್ಯೂಕ್ಲಿಯಸ್‌ಗಳ ಸಂಖ್ಯೆಗೆ ನೇರ ಅನುಪಾತದಲ್ಲಿರುತ್ತದೆ.

ನ್ಯೂಕ್ಲಿಯಸ್‌ಗಳ ಸಂಖ್ಯೆ N ಆಗಿದೆ ಎಂದು ಪರಿಗಣಿಸಿ t=0

ADVERTISEMENT

∆t ಕಾಲದಲ್ಲಿ ∆N ರಷ್ಟು ನ್ಯೂಕ್ಲಿಯಸ್ ಕ್ಷಯಿಸಿದರೆ,

ಇಲ್ಲಿ ವಿಕಿರಣ ಪಟುವು ಕ್ಷಯಿಕೆ ಸ್ಥಿರಾಂಕ ಅಥವಾ ವಿಘಟನೆ ಸ್ಥಿರಾಂಕ ಆದರೆ ∆t ಪದಾರ್ಥದಲ್ಲಿ ಸಮಯದಲ್ಲಿ ನ್ಯೂಕ್ಲಿಯಸ್‌ಗಳ ಸಂಖ್ಯೆ ಕ್ಷೀಣಿಸುವುದರಿಂದ dN=-∆N

ಸಮೀಕರಣವನ್ನು ಎರಡೂ ಕಡೆ ಅನುಕಲಿಸಿದಾಗ

ಇಲ್ಲಿ N0 ಮತ್ತು t0 ಕ್ರಮವಾಗಿ ಆರಂಭಿಕ ನ್ಯೂಕ್ಲಿಯಸ್‌ಗಳ ಸಂಖ್ಯೆ ಮತ್ತು ಸಮಯ.

ಪ್ರಾರಂಭಿಕ ಸಮಯ t=0 ಎಂದುಕೊಂಡಾಗ

ಮೇಲಿನ ಸಮೀಕರಣವು ನ್ಯೂಕ್ಲಿಯಸ್ ಕ್ಷಯಿಕೆಯು ಘಾತಾಂಕೀಯ ಕ್ಷಯಿಕೆ ಎಂದು ಪ್ರತಿಪಾದಿಸುತ್ತದೆ. ಮಾದರಿ ಪದಾರ್ಥದ ಕ್ಷಯಿಕೆ ದರವನ್ನು ಪಟುತ್ವ ಎಂದು ಕರೆಯುತ್ತಾರೆ. ಇದರ ಏಕಮಾನ ಬೆಕ್ವೆರಲ್ ಅದನ್ನು ಇನ್ನೊಂದು ಏಕಮಾನ ಕ್ಯೂರಿಯಿಂದಲೂ ಅಳೆಯುತ್ತಾರೆ.

ಮಾದರಿ ಪದಾರ್ಥದ ಕ್ಷಯಿಕೆ ದರವನ್ನು ಪಟುತ್ವ ಎಂದು ಕರೆಯುತ್ತಾರೆ. ಇದರ SI ಏಕಮಾನ ಬೆಕ್ವೆರಲ್ ಅದನ್ನು ಇನ್ನೊಂದು SI ಏಕಮಾನ ಕ್ಯೂರಿಯಿಂದಲೂ ಅಳೆಯುತ್ತಾರೆ.

ಅರ್ಧಾಯು

ಇದು ಮಾದರಿ ಪದಾರ್ಥವು ತನ್ನಲ್ಲಿರುವ ಆರಂಭಿಕ ನ್ಯೂಕ್ಲಿಯಸ್‌ಗಳನ್ನು ಅರ್ಧಕ್ಕೆ
ಇಳಿಸಲು ಬೇಕಾಗುವ ಸಮಯವಾಗಿದೆ.

N0 ನ್ನು ಆರಂಭಿಕ ಪದಾರ್ಥದ ಸಂಖ್ಯೆ ಎಂದು ತಿಳಿಯಿರಿ.

ಕಾಲದಲ್ಲಿ ಪದಾರ್ಥದ ಸಂಖ್ಯೆಯುಆಗುತ್ತದೆ.

ಇದನ್ನು ಸಮೀಕರಣ (2) ದಲ್ಲಿ ಹಾಕಿದಾಗ

ಸರಾಸರಿ ಆಯುಷ್ಯ

ಮಾದರಿ ಪದಾರ್ಥವು ತನ್ನಲ್ಲಿರುವ ಆರಂಭಿಕ ನ್ಯೂಕ್ಲಿಯಸ್‌ಗಳನ್ನು ರಷ್ಟು ಇಳಿಸಲು ಬೇಕಾಗುವ ಸಮಯವಾಗಿದೆ.

ಬೈಜಿಕ ವಿದಳನ

ಒಂದು ಭಾರ ನ್ಯೂಕ್ಲಿಯಸ್ ಎರಡು ಅಥವಾ ಹೆಚ್ಚಿನ ಮಧ್ಯಾವದಿ ರಾಶಿ ತುಣುಕುಗಳಾಗಿ (ವಿದಳನ) ಕ್ಷಯಿಸಿದಾಗ ನಿವ್ವಳ ಶಕ್ತಿಯು ಬಿಡುಗಡೆಯಾಗುವುದನ್ನು ಬೈಜಿಕ ವಿದಳನ ಎನ್ನುವರು.

ಉದಾ:-ಯುರೇನಿಯಂ ಐಸೋಟೋಪು ನ್ನು

ನ್ಯೂಟ್ರಾನುಗಳಿಂದ ತಾಡಿಸಿದಾಗ ಬೇರಿಯಂ ಮತ್ತು ಕ್ರಿಪ್ಟಾನ್ ಮತ್ತು 3 ನ್ಯೂಟ್ರಾನ್‌ಗಳಿಗೆ ಒಡೆಯುತ್ತವೆ.

ಈ ಪ್ರಕ್ರಿಯೆಯಲ್ಲಿ ಶಕ್ತಿ ನ್ಯೂನ್ಯತೆಯು 0.223u ಆಗಿದ್ದು ಅದು 200 Me U ನಷ್ಟು ನಿವ್ವಳ ಶಕ್ತಿಯಾಗಿ ಬಿಡುಗಡೆಯಾಗುತ್ತದೆ.

ಈ ಮೇಲಿನ ಉದಾಹರಣೆಯನ್ನು ಬೇರೆ ಮಧ್ಯಮ ರಾಶಿಯ ತುಣುಕುಗಳ ಜೋಡಿಯನ್ನು ಉತ್ಪಾದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.