ADVERTISEMENT

ನಗರಕ್ಕೆ ‘ಪರ್ಲ್ ಅಕಾಡೆಮಿ’

Pearl academy

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:00 IST
Last Updated 21 ಮಾರ್ಚ್ 2019, 20:00 IST
ನಂದಿತಾ ಅಬ್ರಾಹಿಂ
ನಂದಿತಾ ಅಬ್ರಾಹಿಂ   

ಪರ್ಲ್ ಅಕಾಡೆಮಿ ಈಗ ದಕ್ಷಿಣ ಭಾರತದಲ್ಲಿ ತನ್ನ ಮೊದಲ ಕ್ಯಾಂಪಸ್ ಆರಂಭಿಸಲು ಸಿದ್ಧತೆ ನಡೆಸಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ಅಕಾಡೆಮಿಯ ಐದನೇ ಕ್ಯಾಂಪಸ್ ಆರಂಭವಾಗಲಿದ್ದು, 2020ರ ಆಗಸ್ಟ್‌ನಲ್ಲಿ ಮೊದಲ ಬ್ಯಾಚ್ ಆರಂಭವಾಗಲಿದೆ.ಫ್ಯಾಷನ್, ಡಿಸೈನ್ ಮತ್ತು ಮಾಧ್ಯಮ ಕೋರ್ಸ್‌ಗಳ ಮೂಲಕ ಜನಪ್ರಿಯವಾಗಿರುವ ಅಕಾಡೆಮಿ ಇದಾಗಿದೆ.

ನಗರದಲ್ಲಿಯೂ ಫ್ಯಾಷನ್, ಕಮ್ಯುನಿಕೇಷನ್ ಡಿಸೈನ್, ಪ್ರಾಡಕ್ಟ್ ಡಿಸೈನ್‌ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಅಕಾಡೆಮಿ ನಡೆಸಲಿದೆ. ಮಾಧ್ಯಮ ಕೋರ್ಸ್‌ಗಳನ್ನೂ ಆರಂಭಿಸುವ ಯೋಜನೆ ಹೊಂದಿದೆ. ಉದ್ಯಮ ಕೇಂದ್ರಿತ ಕೋರ್ಸ್‌ಗಳು ಪರ್ಲ್ ಅಕಾಡೆಮಿಯ ವಿಶೇಷತೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶೇ 99ರಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ ಎನ್ನುತ್ತವೆ ಅಕಾಡೆಮಿ ಅಂಕಿ–ಅಂಶಗಳು. 25 ವರ್ಷಗಳನ್ನು ಪೂರೈಸಿರುವ ಪರ್ಲ್ ಅಕಾಡೆಮಿ ದೆಹಲಿ, ನೊಯಿಡಾ, ಜೈಪುರ ಮತ್ತು ಮುಂಬೈನಲ್ಲಿ ತನ್ನ ಕ್ಯಾಂಪಸ್‌ಗಳನ್ನು ಹೊಂದಿದೆ. ಫ್ಯಾಷನ್, ರಿಟೇಲ್, ಡಿಸೈನಿಂಗ್ ಬ್ರ್ಯಾಂಡ್‌ಗಳಲ್ಲಿ ಈಗಾಗಲೇ ಅಕಾಡೆಮಿ ತನ್ನ ಗುರುತು ಸ್ಥಾಪಿಸಿದ್ದು, ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ (ಎಫ್‌ಡಿಐಸಿ), ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಇಂಟಿರೀಯರ್ ಡಿಸೈನರ್ಸ್‌ (ಐಐಐಡಿ) ಜತೆ ಮೈತ್ರಿ ಹೊಂದಿದ್ದು, ಇಲ್ಲಿನ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗಾಗಿ ನಿರಂತರವಾಗಿ ಉಪನ್ಯಾಸಗಳನ್ನು ಆಯೋಜಿಸುತ್ತಿದೆ.

‘ಬೆಸ್ಟ್‌ ಡಿಸೈನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ ಎಂದು ಅಸೋಚಾಂನಿಂದ ಮೆಚ್ಚುಗೆ ಗಳಿಸಿದೆ. ಇದೀಗ ಪರ್ಲ್ ಅಕಾಡೆಮಿಯು ಬಹುತ್ವಕ್ಕೆ ಹೆಸರಾದ ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಅನ್ನು ಆರಂಭಿಸಲಿದ್ದು, ಸೃಜನಶೀಲವಾಗಿ ಕೆಲಸದಲ್ಲಿ ತೊಡಗಬಯಸುವವರಿಗೆ ಅವಕಾಶದ ಬಾಗಿಲು ತೆರೆಯಲಿದೆ. ಈ ಅಕಾಡೆಮಿಯು ಏಷ್ಯನ್ ಪೇಂಟ್ಸ್‌, ಅಡೋಬ್, ಅಮೆಝಾನ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಜತೆ ಸಹಯೋಗ ಹೊಂದಿದೆ.

ADVERTISEMENT

‘ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಕಾಸ್ಮೋಪಾಲಿನ್ ಸಿಟಿ. ಡಿಸೈನ್ ಹಬ್‌ನಲ್ಲಿ ನಗರಕ್ಕೆ ಮೂರನೇ ಸ್ಥಾನವಿದೆ. ಇಲ್ಲಿ ಉದ್ಯಮಗಳು ಹೇರಳವಾಗಿವೆ. ಸ್ಟಾರ್ಟ್ಅಪ್‌, ಐಟಿ–ಬಿಟಿ, ಇ–ಕಾಮರ್ಸ್‌ಗೆ ಹೇಳಿಮಾಡಿಸಿದ ನಗರವಿದು. ಬೆಂಗಳೂರಿನಲ್ಲಿ ದೇಶದ ವಿವಿಧ ರಾಜ್ಯಗಳ ಜನರು ಓದಲು ಬರುತ್ತಾರೆ. ಫ್ಯಾಷನ್ ಉದ್ಯಮಕ್ಕೆ ಹೇಳಿಮಾಡಿಸಿದ ನಗರ ಇದಾಗಿರುವುದರಿಂದ ಇಲ್ಲಿ ಪರ್ಲ್ ಅಕಾಡೆಮಿ ತನ್ನ ಕ್ಯಾಂಪಸ್ ಆರಂಭಿಸುತ್ತದೆ’ ಎಂದು ಪರ್ಲ್ ಅಕಾಡೆಮಿಯ ಸಿಇಒ ಭರತ್ ಖರ್ಬಂದ ವಿವರಿಸಿದರು.

‘ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರು ಅಕಾಡೆಮಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬರಲಿದ್ದಾರೆ.ಉದಯೋನ್ಮುಖ ಸೃಜನಶೀಲ ವೃತ್ತಿಪರರಿಗೆ ತಮ್ಮ ಕನಸು ನನಸು ಮಾಡಿಕೊಳ್ಳಲು ‘ಪರ್ಲ್’ ಸೂಕ್ತ ತಾಣ. ಆಗಸ್ಟ್ 2020ರ ವೇಳೆಗೆ ಪರ್ಲ್ ಅಕಾಡೆಮಿ ತನ್ನ ಮೊದಲ ಬ್ಯಾಚ್ ಅನ್ನು ಆರಂಭಿಸಲಿದೆ’ ಎಂದು ಪರ್ಲ್ ಅಕಾಡೆಮಿಯ ಅಧ್ಯಕ್ಷೆ ನಂದಿತಾ ಅಬ್ರಹಾಂ ಮಾಹಿತಿ ನೀಡಿದರು.

ಸೃಜನಶೀಲರಾಗಿದ್ದು ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಪರ್ಲ್ ಅಕಾಡೆಮಿ ಸ್ಕಾಲರ್ ಶಿಪ್ ನೀಡುತ್ತಿದೆ.

ಹೆಚ್ಚಿನ ಮಾಹಿತಿಗೆ:counselor@pearlacademy.com, nalini.sharan@pearlacademy.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.