ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 22:30 IST
Last Updated 29 ಸೆಪ್ಟೆಂಬರ್ 2021, 22:30 IST
   

ಭಾಗ– 68

926. A ಯು B ನ ಸಹೋದರ, C ಯು A ನ ತಾಯಿ, D ಯು C ನ ತಂದೆ, E ಯು B ನ ಮಗ ಹಾಗಾದರೆ, D ಯು B ಗೆ ಏನಾಗುತ್ತಾರೆ?

ಎ) ಮಾವ

ADVERTISEMENT

ಬಿ) ಸಹೋದರ

ಸಿ) ತಾತ

ಡಿ) ಚಿಕ್ಕಪ್ಪ

927. ಸರಣಿ ಪೂರ್ಣಗೊಳಿಸಿ; 1432, 2543, 3654, 4765,

ಎ) 3654

ಬಿ) 4775

ಸಿ) 5766

ಡಿ) 5876

928. ಈ ವರ್ಷ ಡಾ.ಬಿ.ಸಿ.ರಾಯ್‌ ಪ್ರಶಸ್ತಿ ಪಡೆದವರು ಯಾರು?

ಎ) ಡಾ.ಜಗದೀಶ ಪಿ. ಮಾಚಯ್ಯ

ಬಿ) ಡಾ.ಸುಧಾಕರ್

ಸಿ) ಡಾ.ಸುದರ್ಶನ ಬಲ್ಲಾಳ

ಡಿ) ಡಾ.ಮಂಜುನಾಥ

929. ಇತ್ತೀಚೆಗೆ ಯಾವ ರಾಷ್ಟ್ರದ ಕಮ್ಯೂನಿಸ್ಟ್ ಪಕ್ಷ 100 ವರ್ಷ ಪೂರೈಸಿತು?

ಎ) ರಷ್ಯಾ

ಬಿ) ಕಜಕಿಸ್ತಾನ

ಸಿ) ಭಾರತ

ಡಿ) ಚೀನಾ

930. ಇತ್ತೀಚೆಗೆ ಭಾರತದಲ್ಲಿ ಬಳಕೆಗೆ ಅನುಮತಿ ಪಡೆದ ಕೋವಿಡ್ ಲಸಿಕೆ ಯಾವುದು?

ಎ) ಕೋವಿಶೀಲ್ಡ್‌

ಬಿ) ಕೋವ್ಯಾಕ್ಸಿನ್

ಸಿ) ಫೈಜರ್

ಡಿ) ಮಾಡರ್ನಾ

931. ಕರ್ನಾಟಕ ಸರ್ಕಾರದ ಹೊಸ ಯೋಜನೆಯಡಿ ನಿರ್ಮಾಣ ಕಾರ್ಮಿಕರಿಗೆ ಎಷ್ಟು ಪಿಂಚಣಿ ನೀಡಲಾಗುತ್ತದೆ?

ಎ) ₹ 3000

ಬಿ) ₹ 2000

ಸಿ) ₹1000

ಡಿ) ₹ 500

932. ‘ಒಂದು ದೇಶ ಒಂದು ಪಡಿತರಚೀಟಿ’ ಯೋಜನೆ ಜಾರಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಯಾವುದು?

ಎ) ಜುಲೈ 31, 2021

ಬಿ) ಆಗಷ್ಟ್ 31, 2021

ಸಿ) ಜೂನ್ 30, 2021

ಡಿ) ಡಿಸೆಂಬರ್ 31, 2021

933. ಯು.ಎ.ಇ.ಯಲ್ಲಿ ತನ್ನ ಪ್ರಥಮ ರಾಜತಾಂತ್ರಿಕ ಕಚೇರಿ ತೆರೆದ ದೇಶ ಯಾವುದು?

ಎ) ಚೀನಾ

ಬಿ) ರಷ್ಯಾ

ಸಿ) ಇಸ್ರೇಲ್‌

ಡಿ) ಅಮೆರಿಕ

934. ‘ಪಿ.ಎಂ-ವಾಣಿ’ ಯಾವ ಯೋಜನೆಗೆ ಸಂಬಂಧಿಸಿದೆ?

ಎ) ಅಂತರ್ಜಾಲ ಸೇವೆ ಒದಗಿಸುವುದು

ಬಿ) ವೈ-ಫೈ ಸೇವೆ ಒದಗಿಸುವುದು

ಸಿ) ಉದ್ಯೋಗ ಒದಗಿಸುವುದು

ಡಿ) ಶಿಕ್ಷಣ ಸೌಲಭ್ಯ ಒದಗಿಸುವುದು

935. 2020ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಯಾರಿಗೆ ಲಭಿಸಿದೆ?

ಎ) ವೆಂಕಟಾಚಲ ಶಾಸ್ತ್ರಿ

ಬಿ) ಡಾ.ಸಿದ್ದಲಿಂಗಯ್ಯ

ಸಿ) ಡಾ.ರಾಜೇಂದ್ರ ಕೀಶೋರ್ ಪಂಡಾ

ಡಿ) ಹಂ.ಪ. ನಾಗರಾಜಯ್ಯ

936. ಇತ್ತೀಚೆಗೆ ಸುದ್ದಿಯಲ್ಲಿರುವ ಭಾರತದ ಸಾಲಿಸಿಟರ್ ಜನರಲ್ ಯಾರು?

ಎ) ಮುಕುಲ್ ರೋಹ್ಟಗಿ

ಬಿ) ಪಾಲಿ ನಾರಿಮನ್

ಸಿ) ಕೃಷ್ಣ ದೀಕ್ಷಿತ

ಡಿ) ತುಷಾರ್ ಮೆಹ್ತಾ

937. ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಯಾರು ಮುನ್ನಡೆಸಿದರು?

ಎ) ಮರಿಯಪ್ಪನ್ ತಂಗವೇಲು

ಬಿ) ಸಾನಿಯಾ ಮಿರ್ಜಾ

ಸಿ) ಮಾನಾ ಪಟೇಲ

ಡಿ) ಅಭಿನವ ಪಟೇಲ

938. ಕೆರೆಮನೆ ಮೇಳ ಯಾವ ಕಲೆಗೆ ಸಂಬಂಧಿಸಿದೆ?

ಎ) ಕಥಕ್ಕಳಿ

ಬಿ) ಕಥಕ್

ಸಿ) ಕೂಚಿಪುಡಿ

ಡಿ) ಯಕ್ಷಗಾನ

939. ಕರ್ನಾಟಕದಲ್ಲಿ ಎಷ್ಟು ಕಂದಾಯ ವಿಭಾಗಗಳಿವೆ?

ಎ) 3

ಬಿ) 4

ಸಿ) 5

ಡಿ) 6

940. ಕರ್ನಾಟಕದ ಈಗಿನ ಗೃಹಮಂತ್ರಿ ಯಾರು?

ಎ) ಆರಗ ಜ್ಞಾನೇಂದ್ರ

ಬಿ) ಉಮೇಶ ಕತ್ತಿ

ಸಿ) ಸಿ.ಸಿ. ಪಾಟೀಲ

ಡಿ) ಬಿ.ಸಿ. ಪಾಟೀಲ

ಭಾಗ 67ರ ಉತ್ತರಗಳು: 911. ಡಿ, 912. ಎ, 913. ಸಿ, 914. ಡಿ, 915. ಬಿ, 916. ಡಿ, 917. ಸಿ, 918. ಡಿ, 919. ಬಿ, 920. ಎ, 921. ಸಿ, 922. ಬಿ, 923. ಎ, 924. ಸಿ, 925. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.