ADVERTISEMENT

ಪ್ರಜಾವಾಣಿ ಕ್ವಿಜ್ 104

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 19:30 IST
Last Updated 31 ಡಿಸೆಂಬರ್ 2019, 19:30 IST

1. ಪಯೋರಿಯಾ ಎಂಬ ಕಾಯಿಲೆ ದೇಹದ ಯಾವ ಅಂಗಕ್ಕೆ ಸಂಬಂಧಿಸಿದ್ದು?

ಅ) ಕಣ್ಣು ಆ) ಕಿವಿ
ಇ) ಒಸಡು ಈ) ಮೂಗು

2. ಗೋವಾದಲ್ಲಿ ಪ್ರತ್ಯೇಕ ಕವಲಾಗಿ ಬೆಳೆದ ರಾಜವಂಶ ಯಾವುದು?

ADVERTISEMENT

ಅ) ರಾಷ್ಟ್ರಕೂಟ ಆ) ಗಂಗ
ಇ) ಕದಂಬ ಈ) ಹೊಯ್ಸಳ

3. ಯುನಿಸೆಫ್ ಯಾರ ರಕ್ಷಣೆಗಾಗಿ ಶ್ರಮಿಸುವ ಸಂಸ್ಥೆಯಾಗಿದೆ?

ಅ) ಕಾರ್ಮಿಕರು ಆ) ರೈತರು

ಇ) ವ್ಯಾಪಾರಿಗಳು ಈ) ಮಕ್ಕಳು

4. ‘ಅಹರ್ನಿಶಿ’ ಎಂಬ ಶಬ್ದದ ಅರ್ಥವೇನು?

ಅ) ಹಗಲು ಆ) ರಾತ್ರಿ
ಇ) ಸಂಜೆ ಈ) ಬೆಳಗಿನಿಂದ ರಾತ್ರಿವರೆಗೆ

5. ಕೊನೇರು ಹಂಪಿ ಯಾವ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ?

ಅ) ಚೆಸ್ ಆ) ಹಾಕಿ
ಇ) ಕ್ರಿಕೆಟ್ ಈ) ಕೊಕ್ಕೊ

6. ‘ವಕೀಲರೊಬ್ಬರ ವಗೈರೆಗಳು’ ಯಾರು ಬರೆದ ಕೃತಿ?

ಅ) ಉದಯ್ ಹೊಳ್ಳ ಆ) ಹಾರ್ನಳ್ಳಿ ಅಶೋಕ
ಇ) ಸಿ.ಎಚ್. ಹನುಮಂತ ರಾಯ ಈ) ಪಾರ್ಥಸಾರಥಿ

7. ‘ಫಿಂಗರ್ ಮಿಲ್ಲೆಟ್’ ಎಂದು ಯಾವ ಧಾನ್ಯವನ್ನು ಕರೆಯುತ್ತಾರೆ?

ಅ) ರಾಗಿ ಆ) ಗೋಧಿ
ಇ) ನವಣೆ ಈ) ಸಜ್ಜೆ

8. ಪೇಜಾವರದ ವಿಶ್ವೇಶ ತೀರ್ಥರ ಪೂರ್ವಾಶ್ರಮದ ಹೆಸರೇನು?

ಅ) ವೆಂಕಟೇಶಆ) ವೆಂಕಟರಮಣ

ಇ) ವೆಂಕಟ ಸುಬ್ರಹ್ಮಣ್ಯ ಈ) ವೆಂಕಟಾಚಲ

9. ಇಂಟರ್‌ಪೋಲ್‌ನ ಕಾರ್ಯವೇನು?

ಅ) ಅಂತರರಾಷ್ಟ್ರೀಯ ಅಪರಾಧಿಗಳ ಪತ್ತೆ
ಆ) ವ್ಯಾಪಾರಾಭಿವೃದ್ಧಿ
ಇ) ಗಡಿ ತಕರಾರು ನಿವಾರಣೆ
ಈ) ಸೇನಾ ತರಬೇತಿ

10. ಬಾಂಗ್ಲಾದೇಶ ಉದಯವಾದದ್ದು ಯಾವಾಗ?

ಅ) 1971 ಆ) 1975
ಇ) 1976 ಈ) 1978

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಉಷ್ಣ ಶಮನಕಾರಿ 2. ವಿಶ್ವಾಮಿತ್ರ 3. ಅವರ ಧಾಟಿಯಲ್ಲೇ ಉತ್ತರಿಸು 4. ಪೀಟರ್
5. ಅಮೆರಿಕದ ಮೂಲ ನಿವಾಸಿಗಳು 6. ಕಾಳಿ 7. ಉಪಪ್ರಧಾನಿ 8. ಹೈದರಾಬಾದ್ 9. ಚೀನಾ 10. ಆಹಾರ.

ಎಸ್‌. ಎಲ್‌ ಶ್ರೀನಿವಾಸಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.