ADVERTISEMENT

ಪ್ರಜಾವಾಣಿ ಕ್ವಿಜ್ 59

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 19 ಫೆಬ್ರುವರಿ 2019, 19:45 IST
Last Updated 19 ಫೆಬ್ರುವರಿ 2019, 19:45 IST
   

1. ‘ಹೋಮೋ ಸೆಪಿಯನ್’ ಎಂಬ ಶಬ್ದದ ನಿಖರವಾದ ವೈಜ್ಞಾನಿಕ ಅರ್ಥವೇನು?

ಅ) ಮನುಷ್ಯಆ) ಬುದ್ಧಿವಂತ ಮನುಷ್ಯಇ) ಕಾಡುಮನುಷ್ಯಈ) ನೆಟ್ಟಗೆ ನಿಲ್ಲುವ ಮನುಷ್ಯ

2. ನರ್ಮದಾ ಬಚಾವೋ ಆಂದೋಲನದ ಪ್ರಮುಖ ಹೋರಾಟಗಾರರು ಯಾರು?

ADVERTISEMENT

ಅ) ಸುಂದರಲಾಲ್ ಬಹುಗುಣ ಆ) ಮಾಧವ ಗಾಡ್ಗೀಳ್ಇ) ಮೇಧಾ ಪಾಟ್ಕರ್ ಈ) ರಾಜೇಂದ್ರ ಸಿಂಗ್

3. ಕುಮಾರನ್ ಆಶಾನ್ ಯಾವ ಭಾಷೆಯ ಪ್ರಸಿದ್ಧ ಕವಿ?

ಅ) ಮಲಯಾಳಂ ಆ) ತಮಿಳು ಇ) ಉರ್ದು ಈ) ಪಂಜಾಬಿ

4. ವಿಜಯನಗರದ ಯಾವ ಅರಸನಿಗೆ ಪ್ರೌಢದೇವರಾಯ ಎಂದೂ ಹೆಸರಿತ್ತು?

ಅ) ಕೃಷ್ಣದೇವರಾಯ ಆ) ಅಳಿಯ ರಾಮರಾಯಇ) ಹರಿಹರ ಈ) ಎರಡನೇ ದೇವರಾಯ

5. ಇವುಗಳಲ್ಲಿ ಯಾವುದು ವೀರಪ್ಪ ಮೊಯಿಲಿಯವರು ಬರೆದ ಕಾದಂಬರಿ ಅಲ್ಲ?

ಅ) ತೆಂಬೆರೆ ಆ) ದ್ವೀಪ ಇ) ಕೊಟ್ಟ ಈ) ಸುಳಿಗಾಳಿ

6. ಒಂಟಿಕೊಂಬಿನ ಘೇಂಡಾಮೃಗಗಳಿಗಾಗಿ ಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನವನ ಯಾವುದು?

ಅ) ಜಿಮ್ ಕಾರ್ಬೆಟ್ ಆ) ರಣಥಂಬೋರ್ಇ) ಗಿರ್ ಈ) ಕಾಜಿರಂಗ

7. ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ ಸಂಸ್ಥೆ ಎಲ್ಲಿದೆ?

ಅ) ಮುಂಬೈ ಆ) ದೆಹಲಿ ಇ) ಬೆಂಗಳೂರು ಈ) ಕೋಲ್ಕತ್ತಾ

8. ‘ಶುಂಠಿ ಗಿಡದ ಬೇರಿನ ಭಾಗವನ್ನು ಆಹಾರವಾಗಿ ಬಳಸಲಾಗುತ್ತದೆ’ ಈ ಹೇಳಿಕೆಯು-

ಅ) ಸರಿ ಆ) ಭಾಗಶಃ ಸರಿ ಇ) ತಪ್ಪು ಈ) ಭಾಗಶಃ ತಪ್ಪು

9. ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಚಲನಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಕರ್ನಾಟಕದ ಯಾವ ಊರಿನ ಬಳಿ ನಡೆದಿದೆ?

ಅ) ಬಳ್ಳಾರಿ ಆ) ರಾಯಚೂರು ಇ) ರಾಮನಗರ ಈ) ಗದಗ

10. ಜಿಮ್ ಕಾರ್ಬೆಟ್ ಯಾವ ಬಗೆಯ ಸಾಹಿತ್ಯ ರಚನೆಗಾಗಿ ಪ್ರಸಿದ್ಧರು?

ಅ) ಕಾದಂಬರಿ ಆ) ಸಣ್ಣ ಕಥೆಇ) ಬೇಟೆಯ ನೆನಪುಗಳು ಈ) ಆಧ್ಯಾತ್ಮಿಕ

ಹಿಂದಿನ ಸಂಚಿಕೆಯ ಸರಿ ಉತ್ತರಗಳು:

1. 2012 2. ಕಲೋನಿಯಲ್ ಕಸಿನ್ಸ್ 3. ಅನಂತಕುಮಾರ್ 4. ಗಂಜೀಫಾ 5. ಆತ್ಮಹತ್ಯೆಯಿಂದ 6. ಪ್ರಥಮಾ

7. ನೆತ್ತಿ ತಣ್ಣಗಾದೀತೇ 8. ಲಾಸ್ ವೆಗಾಸ್ 9. ಯಕ್ಷಗಾನ10. ಗೋವಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.