ADVERTISEMENT

ಪ್ರಜಾವಾಣಿ ಕ್ವಿಜ್ 63

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 19 ಮಾರ್ಚ್ 2019, 19:30 IST
Last Updated 19 ಮಾರ್ಚ್ 2019, 19:30 IST

1. ‘ಜಯ್ ಜವಾನ್ ಜಯ್ ಕಿಸಾನ್’ ಎಂಬ ಘೋಷಣೆಯನ್ನು ಜನಪ್ರಿಯಗೊಳಿಸಿದವರು ಯಾರು?

ಅ) ಇಂದಿರಾ ಗಾಂಧಿ
ಆ) ಜವಹರಲಾಲ ನೆಹರು
ಇ) ರಾಜೀವ್ ಗಾಂಧಿ
ಈ) ಲಾಲ ಬಹದ್ದೂರ್ ಶಾಸ್ತ್ರಿ

2. ‘ಕದಳಿ ಹೊಕ್ಕು ಬಂದೆ’ ಯಾರು ಬರೆದ ಪ್ರವಾಸ ಕಥನ?‌

ADVERTISEMENT

ಅ) ಮಾತೆ ಮಹಾದೇವಿ
ಆ) ಗೊ.ರು. ಚೆನ್ನಬಸಪ್ಪ
ಇ) ರಹಮತ್ ತರಿಕೆರೆ

ಈ) ನ.ಭದ್ರಯ್ಯ

3. ಯಸ್ನಾಯ ಪೊಲ್ಯಾನದಲ್ಲಿ ಜನಿಸಿದ ಪ್ರಸಿದ್ಧ ರಷ್ಯನ್ ಬರಹಗಾರ ಯಾರು?

ಅ) ಆಂಟೆನ್ ಚೆಕಾಫ್
ಆ) ಲಿಯೋ ಟಾಲ್‍ಸ್ಟಾಯ್
ಇ) ಐಸಾಕ್ ಅಸಿಮೋವ್ ಈ) ಪೆರ್ಲ್‍ಮನ್

4. ಅರ್ಜುನನು ಯಾವ ದೇವತೆಯ ವರದಿಂದ ಜನಿಸಿದನೆಂದು ಮಹಾಭಾರತ ಹೇಳುತ್ತದೆ?

ಅ) ವರುಣ ಆ) ಕುಬೇರ
ಇ) ಇಂದ್ರ ಈ) ವಾಯು

5. ‘ಭೂಮಿಯ ಮೇಲೇನಾದರೂ ಸ್ವರ್ಗವಿದೆಯೆಂದಾದರೆ ಅದು ಇಲ್ಲೇ, ಅದು ಇಲ್ಲೇ’-ಈ ಹೇಳಿಕೆ ಎಲ್ಲಿಗೆ ಸಂಬಂಧಿಸಿದ್ದು?

ಅ) ಕಾಶ್ಮೀರ ಆ) ಕರ್ನಾಟಕ
ಇ) ಕೇರಳ ಈ) ಆಂಧ್ರ

6. ಟಿವಿ ಉದ್ಯಮದಲ್ಲಿ ‘ಟಿಆರ್‌ಪಿ’ ಎಂದರೇನು?

ಅ) ಟ್ರೂ ರೇಟಿಂಗ್ ಪಾಯಿಂಟ್
ಆ) ಟಾರ್ಗೆಟ್ ರೇಟಿಂಗ್ ಪಾಯಿಂಟ್
ಇ) ಟೈಂ ರೇಟಿಂಗ್ ಪಾಯಿಂಟ್
ಈ) ಟೋಟಲ್ ರೇಟಿಂಗ್ ಪಾಯಿಂಟ್

7. ‘ವಿಶ್ವ ಕ್ಷಯರೋಗ ದಿನ’ವನ್ನು ಪ್ರತಿವರ್ಷ ಎಂದು ಆಚರಿಸಲಾಗುತ್ತದೆ?

ಅ) ಜನವರಿ 24ರಂದು
ಆ) ಫೆಬ್ರವರಿ 24ರಂದು
ಇ) ಮಾರ್ಚ್ 24ರಂದು
ಈ) ಏಪ್ರಿಲ್ 24ರಂದು

8) ಇವುಗಳಲ್ಲಿ ಯಾವುದು ಹಿಂದಿನ ಕಾಲದ ಅಳತೆಯ ಮಾಪನವಲ್ಲ?

ಅ) ದಮ್ಮಡಿ ಆ) ಕೊಳಗ
ಇ) ಸೇರು ಈ) ಚಟಾಕು

9. ಭಾರತದ ಗುಜರಾತ್, ರಾಜಸ್ಥಾನ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯಗಳ ನಡುವಣ ಗಡಿರೇಖೆಯ ಹೆಸರೇನು?

ಅ) ವಾಘಾ ಗಡಿ ಆ) ಅಟ್ಟಾರಿ ಗಡಿ
ಇ) ಝೀರೋ ಪಾಯಿಂಟ್
ಈ) ಎಂಡ್ ಪಾಯಿಂಟ್

10. ಇವುಗಳಲ್ಲಿ ಯಾವುದು ಷಟ್ಪದಿ ಛಂದಸ್ಸಿಗೆ ಸೇರಿದ್ದಲ್ಲ ?

ಅ) ಸ್ರಗ್ಧರಾ ಆ) ಶರ
ಇ) ಕುಸುಮ ಈ) ಭೋಗ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಸುನಿಲ್ ಅರೋರಾ 2. ಯಶವಂತ ಚಿತ್ತಾಲ
3. ನಿರ್ದಿಷ್ಟ ಸ್ಥಳವನ್ನು ಗುರುತಿಸಲು
4. ಕಾಂಡದ ಉಂಗುರಗಳ ಮೂಲಕ
5. ಕೊಡಗು 6. ಚಂದ್ರಶೇಖರ ಪಾಟೀಲ
7. ರಾಷ್ಟ್ರಕೂಟರು 8. ಡೈರೆಕ್ಟ್ ಟು ಹೋಮ್
9. ಸೈಂಟ್ ಲಾರೆನ್ಸ್ 10. ಬಿಗ್ ಬ್ರದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.