ADVERTISEMENT

ಪ್ರಜಾವಾಣಿ ಕ್ವಿಜ್ ೯೦

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:30 IST
Last Updated 24 ಸೆಪ್ಟೆಂಬರ್ 2019, 19:30 IST

1. ಸಮಾಜ ಸುಧಾರಣೆಗೆ ಹೆಸರಾದ ಶಾಹು ಮಹರಾಜರು ಯಾವ ಸಂಸ್ಥಾನದ ಅಧಿಪತಿಗಳಾಗಿದ್ದರು?

ಅ) ಸಾಂಗ್ಲಿ ಆ) ಜತ್

ಇ) ಕೊಲ್ಲಾಪುರ ಈ) ಔಧ್

ADVERTISEMENT

2. ವಾಹನಗಳ ಎಂಜಿನ್ ಅನ್ನು ತಂಪುಗೊಳಿಸುವ ಭಾಗ ಯಾವುದು?

ಅ)ರೇಡಿಯೇಟರ್ ಆ) ಕ್ಲಚ್

ಇ) ಬ್ಯಾಟರಿ ಈ) ಸ್ಪಾರ್ಕ್ ಪ್ಲಗ್

3. ಸಂತೋಷಕುಮಾರ್‌ ಗುಲ್ವಾಡಿ ಯಾವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದರು?

ಅ) ಕ್ರೀಡೆ ಆ) ಪತ್ರಿಕೋದ್ಯಮ

ಇ) ರಂಗಭೂಮಿ ಈ) ಚಲನಚಿತ್ರ

4. ಅರ್ಥೈಟ್ರಿಸ್‌ ಎಂಬ ಸಮಸ್ಯೆ ದೇಹದ ಯಾವ ಭಾಗಕ್ಕೆ ಸಂಬಂಧಿಸಿದ್ದು?

ಅ) ಗಂಟಲು ಆ) ಹೃದಯ

ಇ) ಕೀಲುಗಳು ಈ) ಮೂತ್ರಪಿಂಡ

5. ವೇಗನ್ ಆಹಾರ ಪದ್ಧತಿಯನ್ನು ಆಚರಿಸುವವರು ಯಾವ ವಸ್ತುಗಳನ್ನು ಬಳಸುವುದಿಲ್ಲ?

ಅ) ಗೆಡ್ಡೆಗೆಣಸು ಆ) ಪ್ರಾಣಿಜನ್ಯ ವಸ್ತುಗಳು

ಇ) ಕರಿದ ತಿಂಡಿ ಈ)ಮಸಾಲೆ ಪದಾರ್ಥ

6. ‘ನಂ 221ಬಿ, ಬೇಕರ್ ಸ್ಟ್ರೀಟ್, ಲಂಡನ್’-ಇದು ಯಾವ ಪ್ರಸಿದ್ಧ ಕಾಲ್ಪನಿಕ ಪತ್ತೇದಾರನ ವಿಳಾಸ?

ಅ) ಜೇಮ್ಸ್ ಬಾಂಡ್ ಆ) ಡಾ. ವಾಟ್ಸನ್

ಇ) ಹರ್ಕುಲೆ ಪೊಯ್ರಾಟ್ ಈ) ಷರ್ಲಾಕ್‌ ಹೋಮ್ಸ್‌

7. ಮಹಾಭಾರತದಲ್ಲಿ ಯಾರನ್ನು ಸೂತಪುತ್ರ ಎಂದು ಕರೆಯಲಾಗುತ್ತಿತ್ತು?

ಅ) ಶಕುನಿ ಆ) ಕರ್ಣ

ಇ)ಭೀಷ್ಮ ಈ)ವಿರಾಟ

8.‘ಇನ್ಸ್ಟಾಗ್ರಾಮ್’ ಎಂಬ ಸಾಮಾಜಿಕ ಜಾಲತಾಣದ ಮಾಲಿಕ ಸಂಸ್ಥೆಯ ಹೆಸರೇನು?

ಅ) ಫೇಸ್ ಬುಕ್ ಆ) ಆಪಲ್

ಇ ) ಇನ್ಫೋಸಿಸ್ ಈ) ಮೈಂಡ್‌ ಟ್ರೀ

9. ಬ್ರಹ್ಮಪುತ್ರಾ ನದಿ ಏನೆಂದು ಪ್ರಸಿದ್ಧವಾಗಿದೆ?

ಅ)ಹೆಣ್ಣು ನದಿ ಆ) ಗಂಡು ನದಿ

ಇ) ಮಾಯದ ನದಿ ಈ) ದುಃಖದ ನದಿ

10. ದೀಪಕ್ ಪುನಿಯಾ ಯಾವ ಕ್ರೀಡೆಯ ಕ್ರೀಡಾ ಪಟು?

ಅ) ಕುಸ್ತಿ ಆ) ಕತ್ತಿವರಸೆ

ಇ) ಭಾರ ಎತ್ತುವಿಕೆ ಈ) ಈಜು

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಡರ್ಮೆಟಾಲಜಿ 2. ಲಂಡನ್ 3. ಕಬ್ಬಿಣ

4. ಉಡುತಡಿ 5 . ಕೀಲುಗಳು 6. ಎರಡು

7. ಸರ್ವೆ 8. ಮರಾಠಿ 9. ಅನುಸಂಧಾನ

10. ಗಾಳಿ

ಎಸ್‌. ಎಲ್‌. ಶ್ರೀನಿವಾಸಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.