ADVERTISEMENT

ಪ್ರಜಾವಾಣಿ ಕ್ವಿಜ್ | ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿವೆ?

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 29 ಅಕ್ಟೋಬರ್ 2019, 19:30 IST
Last Updated 29 ಅಕ್ಟೋಬರ್ 2019, 19:30 IST

1. ರಾಷ್ಟ್ರೀಯ ಪೌರತ್ವ ನೋಂದಣಿ ನಿಯಮದ ಪ್ರಮುಖ ಉದ್ದೇಶವೇನು?
ಅ) ಜನಸಂಖ್ಯೆ ಮಾಹಿತಿ
ಆ) ಗೃಹ ನಿರ್ಮಾಣ
ಇ) ಅಕ್ರಮ ವಲಸಿಗರ ಪತ್ತೆ
ಈ) ಕಾನೂನು ಸುಧಾರಣೆ

2. ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
ಅ) ಎರಡು
ಆ) ಆರು
ಇ) ಮೂರು
ಈ) ನಾಲ್ಕು

3. ಸಪ್ತಸ್ವರಗಳಲ್ಲಿರುವ ‘ಗ’ ಯಾವ ಸ್ವರದ ಸಂಕೇತ?
ಅ) ಗಮಕ
ಆ) ಗಾಂಧಾರ
ಇ) ಗಂಭೀರ
ಈ) ಗಂಧರ್ವ

ADVERTISEMENT

4. ತನ್ನ ತವರಿನಲ್ಲಿ ಸತತ 11 ಸರಣಿಗಳನ್ನು ಗೆದ್ದಿರುವ ಮೊತ್ತಮೊದಲ ಕ್ರಿಕೆಟ್ ತಂಡ ಯಾವ ದೇಶದ್ದು?
ಅ) ಭಾರತ
ಆ) ಆಸ್ಟ್ರೇಲಿಯಾ
ಇ) ಇಂಗ್ಲೆಂಡ್
ಈ) ಪಾಕಿಸ್ತಾನ

5. ಭಾಗವತದ ಪ್ರಕಾರ ಪ್ರಾಗ್ಜೋತಿಷಪುರದ ರಾಜನಾಗಿದ್ದ ಅಸುರ ಯಾರು?
ಅ) ಬಾಣಾಸುರ
ಆ) ನರಕಾಸುರ
ಇ) ಮಹಿಷಾಸುರ
ಈ) ಜರಾಸಂಧ

6. ಇವುಗಳಲ್ಲಿ ಯಾವುದು ಅಭಿಜಿತ್ ಬ್ಯಾನರ್ಜಿ ದಂಪತಿ ರಚಿಸಿದ ಪುಸ್ತಕವಲ್ಲ?
ಅ) ಆನ್ ಎಕನಾಮಿಕ್ ಇನ್‌ಇಕ್ವಾಲಿಟಿ
ಆ) ಪೂರ್ ಎಕನಾಮಿಕ್ಸ್
ಇ) ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್‌
ಈ) ವಾಟ್ ದ ಎಕಾನಮಿ ನೀಡ್ಸ್ ನೌ

7. ಕನ್ನಡದ ಮೊದಲ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ದ ಸಂಪಾದಕರಾಗಿದ್ದವರು ಯಾರು?
ಅ) ಕಿಟ್ಟೆಲ್
ಆ) ವೈಗ್ಲೆ
ಇ) ಜಾನ್ ಹ್ಯಾಂಡ್ಸ್
ಈ) ಹರ್ಮನ್ ಮೊಗ್ಲಿಂಗ್

8. ಮೀನಿನ ಉಸಿರಾಟದ ಅಂಗ ಯಾವುದು?
ಅ) ಕಣ್ಣು
ಆ) ಕಿವಿರು
ಇ) ಚರ್ಮ
ಈ) ಮೂಗು

9. ‘ಲಾ ನಿನಾ’ ಮತ್ತು ‘ಎಲ್ ನೈನೋ’ ಎಂಬ ಶಬ್ದಗಳು ಯಾವುದಕ್ಕೆ ಸಂಬಂಧಿಸಿವೆ?
ಅ) ಬೆಳೆ ಪದ್ಧತಿ
ಆ) ನದಿನೀರಿನ ಮಟ್ಟ
ಇ) ಸಮುದ್ರಕ್ಕೆ ಸಂಬಂಧಿಸಿದ ಹವಾಮಾನ
ಈ) ಕಾನೂನಿನ ಜಾರಿ

10. ಮೊಘಲ್ ದೊರೆ ಅಕ್ಬರನ ಸಮಾಧಿ ಯಾವ ಸ್ಥಳದಲ್ಲಿದೆ?
ಅ) ಸಿಕಂದ್ರಾ
ಆ) ದೆಹಲಿ
ಇ) ಗ್ವಾಲಿಯರ್
ಈ) ಫತೇಪುರ್ ಸಿಕ್ರಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಜಿಂಬಾಬ್ವೆ
2. ಏಳು
3. ಮೃದ್ವಂಗಿ
4. ಮಿಥಾಲಿ ರಾಜ್
5 . ಕೇರಳ
6. ಗಾಳಿಇಲ್ಲದ
7. ಖಂಡಾಂತರ ಚಲನೆ
8. ಮೈಸೂರು ಮಲ್ಲಿಗೆ
9. ಯೂರೋಪಿಯನ್ ಯೂನಿಯನ್
10. ಶಾಂತಿ ಪುರಾಣ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.