ಬೆಂಗಳೂರು: ಸರ್ಕಾರಿ ಶಾಲೆಗಳ ಉತ್ತಮ ಶಿಕ್ಷಕರನ್ನು ಪ್ರತಿವರ್ಷ ಗುರುತಿಸಿ ‘ಶಿಕ್ಷಕರ ದಿನ’ದಂದು (ಸೆ. 5) ರಾಜ್ಯ ಸರ್ಕಾರ ಸನ್ಮಾನಿಸುತ್ತದೆ. ಆದರೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಆ ಭಾಗ್ಯ ಇಲ್ಲ. ಇದೀಗ ಈ ತಾರತಮ್ಯನಿವಾರಿಸಲು ನೋಂದಾಯಿತ ಖಾಸಗಿ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ರುಪ್ಸ) ತೀರ್ಮಾನಿಸಿದೆ.
ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಿಂದ ಒಬ್ಬ ಅರ್ಹ ಶಿಕ್ಷಕನನ್ನು ಗುರುತಿಸಿ ‘ರುಪ್ಸ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಸನ್ಮಾನಿಸಲು ಸಂಘಟನೆ ಮುಂದಾಗಿದೆ. ನಾಗದೇವನಹಳ್ಳಿಯಲ್ಲಿರುವ ಸಾಂದೀಪನಿ ಹೈಟೆಕ್ ಸ್ಕೂಲ್‌ನಲ್ಲಿ ಇದೇ 29ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮತ್ತು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರು ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
‘ರಾಜ್ಯ ಸರ್ಕಾರ ಅತ್ಯುತ್ತಮ ಶಿಕ್ಷಕರನ್ನು ಗುರುತಿಸುವ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರನ್ನು ಕಡೆಗಣಿಸುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶಿಕ್ಷಕ ಸಮುದಾಯದ ಮಧ್ಯೆ ಈ ತಾರತಮ್ಯ ಸರಿಯಲ್ಲ ಎಂಬ ಕಾರಣಕ್ಕೆ ಸಂಘಟನೆಯ ವತಿಯಿಂದಲೇ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಲು ಮುಂದಾಗಿದ್ದೇವೆ’ ಎಂದು ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು
1. ಜಯಂತಿ ಫಣಿರಾಜ್– ಬೆಂಗಳೂರು ಉತ್ತರ
2. ಫ್ರಾನ್ಸಿಸ್ ಆಂಥೋನಿ– ಬೆಂಗಳೂರು ದಕ್ಷಿಣ
3. ಪ್ರಕಾಶ್– ತುಮಕೂರು
4. ಟಿ. ಮುತ್ತುಸ್ವಾಮಿ– ರಾಮನಗರ
5. ಟಿ.ಎನ್. ಪದ್ಮಾವತಿ– ಕೋಲಾರ
6. ಎನ್.ಆರ್. ಗೋಪಿನಾಥ್– ಚಿಕ್ಕಬಳ್ಳಾಪುರ
7. ಯು.ಎನ್. ಸವಿತಾ– ಮಂಡ್ಯ
8. ಕೆ.ಎಂ. ಗೋಪಿನಾಥ್– ಮೈಸೂರು
9. ರಮೇಶ್– ಚಾಮರಾಜನಗರ‘
10. ಕೆ.ಎಸ್. ಪ್ರಭುದಾಸ್– ದಾವಣಗೆರೆ
11. ವಿನ್ಸೆಂಟ್ ಡಿ ಕೋಸ್ಟಾ– ಮಂಗಳೂರು
12. ಭಾಸ್ಕರ್– ಉಡುಪಿ
13. ಪೂಜಾ ಉಲ್ವಾಕರ್– ಉತ್ತರ ಕನ್ನಡ
14. ಜಿ.ಎಸ್. ದೇಸಾಯಿ– ಹಾವೇರಿ
15. ಬಿ.ಆರ್. ಸಂತೋಷ್– ಶಿವಮೊಗ್ಗ
16. ಆರ್. ಮೈಲುಸ್ವಾಮಿ– ಚಿತ್ರದುರ್ಗ
17. ಇಂದುಮತಿ ಬಿ. ಅಂಗಡಿ– ಗದಗ
18. ಮಂಜುನಾಥ್ ಎಸ್. ಪೂಜಾರಿ – ವಿಜಯಪುರ
19. ವೀರೇಶ್ ನಿಂಗಪ್ಪ ಗಾಣಿಗೇರ– ಧಾರವಾಡ
20. ಟಿ. ಇ. ಸುಲೇಹತ್– ಕೊಡಗು
21. ವಿಮಲಾ ಡಿ ನಾಯಕ್– ಬೆಳಗಾವಿ–1
22. ಚೇತನಾ ಎಸ್. ಪಾಟೀಲ– ಬೆಳಗಾವಿ–2
23. ಎಂ. ರಾಜು ನಾಯಕ್– ವಿಜಯನಗರ
24. ಬಿ.ಎನ್. ರಮೇಶ್ ಬೋಂಗಲೆ– ಚಿಕ್ಕಮಗಳೂರು
25. ಎಸ್.ಎಂ. ಮಲ್ಲಿಕಾರ್ಜುನ– ಹೊಸಪೇಟೆ
26. ಜಾತಪ್ಪ ತಲಕಲ್ಲು – ರಾಯಚೂರು
27. ಮಹಾಲಕ್ಷಿ ಪಾಟೀಲ ಮತ್ತು ಗುತ್ತಯ್ಯ– ಯಾದಗಿರಿ
28. ಸವಿತಾ– ಕಲಬುರ್ಗಿ
29. ರವೀಂದ್ರ ಬೀದರ್
30. ಸಂತೋಷ್ ಚನ್ನಪ್ಪ ಬಿರದಾರ– ಶಿರಸಿ
31. ಎಸ್.ಎಸ್.ಚೌಗಲ– ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.