ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:46 IST
Last Updated 26 ಮಾರ್ಚ್ 2019, 19:46 IST
   

ವರ್ಗ: ಮೆರಿಟ್‌ ಆಧಾರಿತ

ವಿದ್ಯಾರ್ಥಿ ವೇತನ: ಟೆಲ್‌ ಅವಿವ್‌ ಯುನಿವರ್ಸಿಟಿ ಸಮ್ಮರ್‌ ಪ್ರೋಗ್ರಾಮ್‌ ಸ್ಕಾಲರ್‌ಶಿಪ್‌ 2019, ಇಸ್ರೆಲ್‌

ವಿವರ: ಇಸ್ರೆಲ್‌ನ ಟೆಲ್‌ ಅವಿವ್‌ ಯುನಿವರ್ಸಿಟಿ (ಟಿಎಯು) ತನ್ನ ‘ಸಮ್ಮರ್‌ ಪ್ರೋಗ್ರಾಮ್‌’ಗಳನ್ನು ಘೋಷಿಸಿದೆ. ಸೈಬರ್‌ ಭದ್ರತೆ, ವ್ಯವಹಾರ ಮತ್ತು ಉದ್ಯಮಶೀಲತೆ, ಮಧ್ಯ ಏಷ್ಯ ಮತ್ತು ಸಂಘರ್ಷದ ಅಧ್ಯಯನ, ಸಮ್ಮರ್‌ ಇಂಟರ್ನ್‌ಶಿಪ್‌ ಪ್ರೋಗ್ರಾಮ್‌, ವಿಜ್ಞಾನದಲ್ಲಿ ಸಂಶೋಧನೆ, ಸ್ಮಾರ್ಟ್ ಸಿಟಿಗಳು ಹಾಗೂ ಆಹಾರ ಸುರಕ್ಷೆ ಮತ್ತು ಭದ್ರತೆಗೆ ಸಂಬಂಧಿಸಿದ ಅಧ್ಯಯನ ವಿಷಯಗಳನ್ನು ಒಳಗೊಂಡಿದೆ.

ADVERTISEMENT

ಅರ್ಹತೆ: ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಅವರು ತಮ್ಮ ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ 80ರಷ್ಟು ಅಂಕಗಳನ್ನು ಪಡೆದಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಬೋಧನಾ ಶುಲ್ಕ, ವಸತಿ ಸೌಕರ್ಯ ಮತ್ತು ವೈದ್ಯಕೀಯ ವಿಮೆಯ ಖರ್ಚು ವೆಚ್ಚದಲ್ಲಿ ಶೇ 65ರವರೆಗೂ ಈ ವಿದ್ಯಾರ್ಥಿ ವೇತನ ಭರಿಸಲಿದೆ.

ಕೊನೆಯ ದಿನ: 2019ರ ಏಪ್ರಿಲ್‌ 10

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/TAU7

****

ವರ್ಗ: ಅಂತರರಾಷ್ಟ್ರೀಯ ಮಟ್ಟ

ವಿದ್ಯಾರ್ಥಿ ವೇತನ: ಎಂಪವರ್‌ ಗ್ಲೋಬಲ್‌ ಸಿಟಿಜನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಂ– 2019

ವಿವರ: ಎಂಪವರ್‌ ಸಂಸ್ಥೆಯು ಅಮೆರಿಕ, ಕೆನಡಾಗಳಲ್ಲಿನ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅವುಗಳಲ್ಲಿ ಎಲ್‌ವಿವೈ ಲೀಗ್‌ ಸ್ಕೂಲ್‌, ಯುಎಸ್‌ಸಿ, ಎನ್‌ವೈಯು, ಎಂಐಟಿ, ಕೊಲಂಬಿಯಾ, ಯುಸಿಎಲ್‌ಎ, ಪೆನ್‌, ಮಿಚಿಗನ್‌ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳೂ ಇವೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಎಂಪವರ್‌ ಸಂಸ್ಥೆ ವಿದ್ಯಾರ್ಥಿ ವೇತನ ನೀಡುತ್ತದೆ.

ಅರ್ಹತೆ: ಅರ್ಜಿದಾರರು 18 ವರ್ಷದವರಾಗಿರಬೇಕು. ಅವರು ಸಂಸ್ಥೆಯ ತನ್ನ ಪಾಲುದಾರಿಕೆ ಇರುವ 200ಕ್ಕೂ ಹೆಚ್ಚಿನ ಸಂಸ್ಥೆಗಳಲ್ಲಿ ದಾಖಲಾಗಿರಬೇಕು ಅಥವಾ ದಾಖಲಾತಿಗೆ ಅಲ್ಲಿಂದ ಅನುಮತಿ ಪಡೆದಿರಬೇಕು. ಜತೆಗೆ ಅಮೆರಿಕ/ಕೆನಡಿಯನ್‌ ವಿದ್ಯಾರ್ಥಿ ವೀಸಾ ಹೊಂದಿರಬೇಕು.

ಸೌಲಭ್ಯ ಮತ್ತು ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ 5000 ಅಮೆರಿಕನ್‌ ಡಾಲರ್‌ ನೆರವು ಸಿಗಲಿದೆ.

ಕೊನೆಯ ದಿನ: 2019ರ ಏಪ್ರಿಲ್‌ 15

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/MGC1

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.